April 23, 2024

Bhavana Tv

Its Your Channel

ಮುರ್ಡೇಶ್ವರ ರಿಕ್ಷಾ ಮಾಲಕ ಹಾಗೂ ಚಾಲಕರ ಸಂಘದಿOದ ರಿಕ್ಷಾ ಚಾಲಕರನ್ನು ಕಾರ್ಮಿಕರೆಂದು ಪರಿಗಣಿಸಿ ಕಾರ್ಮಿಕ ಇಲಾಖೆಯ ಎಲ್ಲಾ ಯೋಜನೆಗಳಡಿ ಒಳಪಡಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ

ಭಟ್ಕಳ: ದೇಶದಲ್ಲಿ ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‍ಡೌನ್ ಆದೇಶದ ಕಾರಣ ದುಡಿಮೆ ಇಲ್ಲದ ರಿಕ್ಷಾ ಚಾಲಕರ ಕುಟುಂಬಗಳಿಗೆ ಸರ್ಕಾರದಿಂದ ಆರ್ಥಿಕ ಸಹಾಯ ಮತ್ತು ರಿಕ್ಷಾ ಚಾಲಕರನ್ನು ಕಾರ್ಮಿಕರೆಂದು ಪರಿಗಣಿಸಿ ಕಾರ್ಮಿಕ ಇಲಾಖೆಯ ಎಲ್ಲಾ ಯೋಜನೆಗಳಡಿ ಒಳಪಡಿಸಬೇಕೆಂದು ಆಗ್ರಹಿಸಿ ಉಪವಿಭಾಗಾಧಿಕಾರಿ ಭರತ್ ಅವರ ಮೂಲಕ ಮುಖ್ಯಮಂತ್ರಿಗೆ ಮುರ್ಡೇಶ್ವರ ರಿಕ್ಷಾ ಮಾಲಕ ಹಾಗೂ ಚಾಲಕರ ಸಂಘವೂ ಬುಧವಾರದಂದು ಮನವಿಯನ್ನು ರವಾನಿಸಿದೆ.

ದೇಶದಲ್ಲಿ ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವರು ಲಾಕ್‍ಡೌನ್ ಆದೇಶ ಜಾರಿ ಮಾಡಿದ್ದಾರೆ. ಇದರಿಂದ ದುಡಿಮೆ ಇಲ್ಲದ ರಿಕ್ಷಾ ಚಾಲಕರ ಕುಟುಂಬಗಳು ಕಂಗಾಲಾಗಿ ಕಣ್ಣೀರಿಡುತ್ತಾ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಆವತ್ತಿನ ದುಡಿಮೆಯೇ ಅದೇ ದಿನದ ಊಟಕ್ಕೆ ಸೀಮಿತವಾಗಿರುವಂತೆ ದುಡಿದು ದಿನ ದೂಡುತ್ತಿರುವ ರಿಕ್ಷಾ ಚಾಲಕರ ಕುಟುಂಬಗಳು ಮುಂದೆ ನಮ್ಮೆಲ್ಲರ ಪರಿಸ್ಥಿತಿ ಏನಾಗಬಹುದು ಎಂದು ಚಿಂತಾಕ್ರಾಂತವಾಗಿ ಬಿಟ್ಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇದ್ದ ರಿಕ್ಷಾ ಚಾಲಕರ ಕರುಣಾಜನಕ ವ್ಯವಸ್ಥೆಯನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದು ಆಟೋರಿಕ್ಷಾಗಳ ಮೇಲಿನ ಸಾಲವನ್ನು ಮನ್ನಾ ಮಾಡಬೇಕು ಹಾಗೂ ಕುಟುಂಬಗಳಿಗೆ ಸರ್ಕಾರದಿಂದ ಆರ್ಥಿಕ ಸಹಾಯ ಮಾಡಲು ಭಗೀರಥ ಪ್ರಯತ್ನ ಮಾಡಬೇಕಾಗಿದೆ ಎoದವರು ಆಗ್ರಹಿಸಿದ್ದಾರೆ.

ರಿಕ್ಷಾ ಚಾಲಕರು ಸಾರ್ವಜನಿಕರ ಸೇವೆಯಲ್ಲಿ ಸರಕಾರದ ನಿಗದಿಪಡಿಸಿದ ಬಾಡಿಗೆಯ ದರವನ್ನು ಪಡೆಯುತ್ತಾ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಈ ದುಡಿಮೆಯಿಂದ ರಿಕ್ಷಾ ಚಾಲಕರ ಕುಟುಂಬಗಳು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದೇ ಈ ಸಮಾಜದಲ್ಲಿ ಕಷ್ಟಕರವಾದ ಜೀವನ ನಡೆಸುತ್ತಿದ್ದಾರೆ. ರಿಕ್ಷಾ ಚಾಲಕರು ಆಟೋ ರಿಕ್ಷಾ ಖರೀದಿಯಿಂದ, ವಿಮೆ ತುಂಬುವುದರಿಂದ, ತೆರಿಗೆ ಭರಿಸುವುದರಿಂದ, ಇಂಧನ ಭರಿಸುವುದರಿಂದ ಹಿಡಿದು ಇನ್ನು ಅನೇಕ ವಿಧದಲ್ಲಿ ಸರ್ಕಾರದ ಆದಾಯದ ಒಂದು ಭಾಗವಾಗಿರುವ ಬಡ ರಿಕ್ಷಾ ಚಾಲಕರಿಗೆ ಸರ್ಕಾರದ ನೆರವಿನ ಹಸ್ತ ಪ್ರತಿ ತಿಂಗಳು ಅಗತ್ಯವಿರುವುದರಿಂದ ಈ ಹಿಂದೆ ಕಾರ್ಮಿಕರಿಗೆ ಕೆಲವು ಯೋಜನೆಯನ್ನು ತಂದು ನರೆವು ನೀಡುತ್ತಿದ್ದು, ಈ ಯೋಜನೆಗೆ ಸಂಪನ್ಮೂಲ ಕ್ರೋಢೀಕರಣವು ಕಟ್ಟಡ ಪರವಾನಿಗೆಯಲ್ಲಿ ಶೇ 1 ತೆಗೆದಿರಿಸಿ ಯೋಜನೆ ರೂಪಿಸಿದ್ದು ಇರುತ್ತದೆ. ಆದ್ದರಿಂದ ಈ ಯೋಜನೆಯಲ್ಲಿ ಬಡ ಆಟೋ ಚಾಲಕರನ್ನು ಕಾರ್ಮಿಕರೆಂದು ನೋಂದಣಿ ಮಾಡಿಕೊಂಡು ಫೀಸ್ ಬರೆಸಿಕೊಂಡು ಅದೇ ರೀತಿ ಎಲ್ಲಾ ಯೋಜನೆಯಲ್ಲಿ ರಿಕ್ಷಾ ಚಾಲಕರನ್ನು ಕಾರ್ಮಿಕರೆಂದು ಪರಿಗಣಿಸಿ ಕಾರ್ಮಿಕರ ಎಲ್ಲಾ ಯೋಜನೆಯಡಿ ಒಳಪಡಿಸಬೇಕು ಮತ್ತು ಬಡ ರಿಕ್ಷಾ ಚಾಲಕರ ಜೀವನ ನಿರ್ವಹಣೆಗಾಗಿಯೇ ವಿಶೇಷ ಅನುದಾನದಡಿ ಯೋಜನೆ ಜಾರಿ ಮಾಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂಧರ್ಭದಲ್ಲಿ ಮುರ್ಡೇಶ್ವರ ರಿಕ್ಷಾ ಮಾಲಕ ಹಾಗೂ ಚಾಲಕರ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ ಜಮೀನ್ದಾರ್, ಉಪಾಧ್ಯಕ್ಷ, ಸದಸ್ಯರು ಇದ್ದರು

error: