October 4, 2024

Bhavana Tv

Its Your Channel

ನೂತನ ಪಿ.ಎಸ್.ಐ ಆಗಿ ಅಂಕೋಲಾ ಮೂಲದ ಭರತ್ ಕುಮಾರ ನೇಮಕ

ಭಟ್ಕಳ: ಇಲ್ಲಿನ ನಗರ ಠಾಣೆಯ ಕಾನೂನು ಹಾಗೂ ಸುವ್ಯವಸ್ಥೆ-1 ವಿಭಾಗದ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಹುದ್ದೆಗೆ ಶುಕ್ರವಾರದಂದು ನಗರ ಠಾಣೆಗೆ ನೂತನ ಪಿ.ಎಸ್.ಐ ಆಗಿ ಅಂಕೋಲಾ ಮೂಲದ ಭರತ್ ಕುಮಾರ ವಿ.ನೇಮಕಗೊಂಡಿದ್ದಾರೆ.

ಈ ಹಿಂದಿನ ಪಿ.ಎಸ್.ಐ ಹನುಮಂತಪ್ಪ ಕುಡಗುಂಟಿ ಸ್ಥಾನಕ್ಕೆ ನೇಮಕಗೊಂಡಿದ್ದಾರೆ. ಇವರು ಈ ಹಿಂದೆ ಮಂಗಳೂರಿನ ಬೆಳ್ತಂಗಡಿಯಲ್ಲಿ ಪ್ರೋಬೆಶನರಿ ಪಿಎಸೈ ಆಗಿ ಕಾರ್ಯನಿರ್ವಹಿಸಿದ್ದು ನಂತರ ಉಪ್ಪಿನಂಗಡಿಯಲ್ಲಿ 2 ತಿಂಗಳು ಅಪರಾಧ ವಿಭಾಗದಲ್ಲಿ ಕೆಲಸ ನಿರ್ವಹಿಸಿದ್ದು ಇವರು ಉತ್ಸಾಹಿ ಯುವಕರಾಗಿದ್ದು ಈಗ ಭಟ್ಕಳಕ್ಕೆ ನೂತನವಾಗಿ ನೇಮಕವಾಗಿದ್ದಾರೆ.

ಇಂದೇ ಭಟ್ಕಳಕ್ಕೆ ನೇಮಕಗೊಂಡಿದ್ದು, ಮುಂದಿನ ದಿನದಲ್ಲಿ ನಗರ ವ್ಯಾಪ್ಯಿಯ ಬಗ್ಗೆ ಮಾಹಿತಿ ಪಡೆದು ಕಾನೂನು ಸುವ್ಯವಸ್ಥೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕಾರ್ಯ ಮಾಡಲಿದ್ದೇವೆ. ಸದ್ಯ ಕೋರೋನಾ ಮಹಾಮಾರಿಯ ಕಡಿವಾಣಕ್ಕೆ ಹೆಚ್ಚಿನ ಬಿಗಿ ಬಂದೋಬಸ್ತ ಏರ್ಪಡಿಸಲಾಗಿದ್ದು ಹಿಂದಿನಂತೆ ಬಂದೋಬಸ್ತ ಮುಂದುವರೆಸಲಿದ್ದೇವೆ. ಭಟ್ಕಳ ಪಟ್ಟಣದ ಬಗೆಗಿನ ಮಾಹಿತಿ ತಿಳಿದು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲಿದ್ದೇನೆ. ಪಟ್ಟಣದ ಎಲ್ಲಾ ಸಾರ್ವಜನಿಕರ ಸಹಕಾರ, ಮಾಧ್ಯಮದವರ ಸಹಕಾರ ಪೊಲೀಸ್ ಇಲಾಖೆಯೊಂದಿಗೆ ಇರಬೇಕು ಎಂದು ನೂತನ ನಗರ ಠಾಣೆಯ ಕಾನೂನು- ಸುವ್ಯವಸ್ಥೆ-1 ವಿಭಾಗದ ಪಿಎಸೈ ಆಗಿ ಭರತ್ ಕುಮಾರ ವಿ. ಹೇಳಿದರು

error: