
ಹೊನ್ನಾವರ: ಹಸಿವಿಗೆ ಜಾತಿ ಧರ್ಮಗಳಿಲ್ಲ , ಭಾಷೆ ಗೋತ್ರಗಳಿಲ್ಲ, ಊರ ಗಡಿ ಮೊದಲಿಲ್ಲ. ದೂರದ ಓರಿಸ್ಸಾ ರಾಜ್ಯದಿಂದ ಬಂದು ಕಾಸರಕೋಡಿನ ಮೀನುಗಾರಿಕಾ ಬಂದರಿನಲ್ಲಿ ಕೂಲಿಗಳಾಗಿ ಬದುಕು ಕಂಡುಕೊoಡ ೧೦೭ ವಿವಿಧ ಜಾತಿ ಧರ್ಮಗಳ ಮೀನುಗಾರರು ಮೀನುಗಾರಿಕೆಯಲ್ಲಿ ತೊಡಗಿದಾಗ ಇದ್ದಕ್ಕಿದ್ದಂತೆ ಲಾಕಡೌನ ಘೋಷಣೆ ಆದ ಹಿನ್ನಲೆಯಲ್ಲಿ ಅತ್ತ ಊರಿಗೂ ತೆರಳಲಾರದೆ ಇತ್ತ ಇಲ್ಲಿ ಹಸಿವನ್ನು ನಿಗಿಸಿಕೊಳ್ಳಲಾಗದೆ ಅತಂತ್ರ ಸ್ಥಿತಿಯನ್ನು ಎದುರಿಸುತ್ತಿರುವಾಗ ಭಟ್ಕಳ ತಂಜೀಮ ಸಂಸ್ಥೆ ಆಹಾರ ಸಾಮಾಗ್ರಿಗಳನ್ನು ದಿನಸಿ ವಸ್ತುಗಳನ್ನು ವಿತರಿಸಿ ವಿಶ್ವ ಮಾನವತೆಯನ್ನು ಸಾರಿತು.
೧೦೭ ಮೀನುಗಾರರಿಗೆ ಒಂದು ತಿಂಗಳಿಗೂ ಮೇಲ್ಪಟ್ಟು ಸ್ಥಳೀಯ ಮೀನುಗಾರ ದೋಣಿಯ ಮಾಲೀಕರು ಹಾಗೂ ಪರ್ಷೀಯನ್ ಬೋಟ್ ಮಾಲೀಕರ ಸಂಘಟನೆಗಳು ನೆರವಿಗೆ ನಿಂತರು. ವಿಷಯ ತಿಳಿದ ಭಟ್ಕಳ ಉಪವಿಭಾಗಾಧಿಕಾರಿ ಸ್ಥಳಕ್ಕೆ ಆಗಮಿಸಿ ಆರೋಗ್ಯ ವಿಚಾರಿಸಿ ಸರ್ಕಾರದ ನೆರವಿನ ಭರವಸೆ ನೀಡಿದ್ದರು.
ಶುಕ್ರವಾರ ಸಾಯಂಕಾಲ ಭಟ್ಕಳದ ತಂಜಿಮ್ ಸಂಸ್ಥೆ ಸದಸ್ಯರು ಕಾಸರಕೋಡಿಗೆ ಆಗಮಿಸಿ ೧೦೭ ಕಾರ್ಮಿಕರಿಗೆ ಸಾಮಾಜಿಕ ಅಂತರವನ್ನು ಕಾದುಕೊಂಡು ದಿನಸಿ ಸಾಮಗ್ರಿಗಳನ್ನು ವಿತರಿಸಿದರು. ಸಂಸ್ಥೆಯ ಉಪಾಧ್ಯಕ್ಷ ಇನಾಯತ್ತುಲ್ಲಾ ಶಾಬಂದ್ರಿ ಮಾತನಾಡಿ ತಮ್ಮದು ಮಾನವೀಯ ಅಂತಃಕರಣದ ಸೇವಾ ಸಂಸ್ಥೆಯಾಗಿದ್ದು ಕೊರೋನಾ ಲಾಕಡೌನ ಸಂದರ್ಭದಲ್ಲಿ ಅಧಿಕಾರಿಗಳ ಮೂಲಕ ಸಾವಿರಾರು ಕುಟುಂಬಗಳಿಗೆ ನೆರವು ನೀಡಲಾಗಿದೆ. ಸಂಸ್ಥೆಯ ಅಧ್ಯಕ್ಷ ಫರವೇಜ್‌ರವರ ಸೂಚನೆ ಪ್ರಕಾರ ಕಾಸರಕೋಡಿನಲ್ಲಿರುವ ಹೊರ ರಾಜ್ಯದ ವಲಸೆ ಕಾರ್ಮಿಕರಿಗೆ ಇಂದು ನೆರವು ನೀಡಿದ್ದೇವೆ. ಭಟ್ಕಳ ಉಪವಿಭಾಗಾಧಿಕಾರಿಗಳ ಸಲಹೆಯಂತೆ ಈ ದಿನಸಿಯನ್ನು ನೀಡುತ್ತಿದ್ದೆವೆ. ಸರ್ಕಾರದ ನೀರ್ದೇಶನವನ್ನು ಕಾರ್ಮಿಕರು ಪಾಲಿಸಿ ತಮ್ಮ ಆರೋಗ್ಯ ಹಾಗೂ ಸಮಾಜದ ಆರೋಗ್ಯವನ್ನು ಕಾದುಕೊಳ್ಳಲು ಕಾರ್ಮಿಕರಲ್ಲಿ ವಿನಂತಿಸಿದರು. ಈ ಸಂದರ್ಭದಲ್ಲಿ ಪರ್ಷೀಯನ ಬೋಟ ಮಾಲಿಕರ ಸಂಘದ ಅಧ್ಯಕ್ಷ ಹಮ್‌ಜಾ ಪಟೇಲ್, ಹಾಗೂ ಇತರರು ಉಪಸ್ಥಿತರಿದ್ದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.