October 5, 2024

Bhavana Tv

Its Your Channel

ಹೊದ್ಕೆಶಿರೂರು ಬಳಿ ತೋಟದಲ್ಲಿ ಸಿದ್ದಪಡಿಸಲಾಗುತ್ತಿದ್ದ ಕಳ್ಳಬಟ್ಟಿ ಸಾರಾಯಿ ಪತ್ತೆ

ಹೊನ್ನಾವರ ತಾಲೂಕಿನ ಚಂದಾವರ ಗ್ರಾಮಪಂಚಾಯತ್ ವ್ಯಾಪ್ತಿಯ ಹೊದ್ಕೆಶಿರೂರು ಬಳಿ ತೋಟದಲ್ಲಿ ಸಿದ್ದಪಡಿಸಲಾಗುತ್ತಿದ್ದ ಕಳ್ಳಬಟ್ಟಿ ಸಾರಾಯಿಯನ್ನು ಅಬಕಾರಿ ಅಧಿಕಾರಿಗಳು ಪತ್ತೆಹಚ್ಚಿ ಪ್ರಕರಣ ದಾಖಲಿಸಿದ ಘಟನೆ ಶನಿವಾರ ವರದಿಯಾಗಿದೆ.

ಹೊದ್ಕೆ ಶಿರೂರ ಗ್ರಾಮದ ಯೋಗೀಶ ಜಟ್ಟಿ ಪಟಗಾರ ಎನ್ನುವವರ ತೋಟದ ಮೇಲೆ ದಾಳಿ ನಡೆಸಿದಾಗ ಕಳ್ಳಭಟ್ಟಿ ಸರಾಯಿಯನ್ನು ತಯಾರಿಸುವ ಹಾಗೂ ಗೇರು ಹಣ್ಣಿನ ಬೆಲ್ಲದ ಕೊಳೆ ೦೨ ಪ್ಲಾಸ್ಟೀಕ್ ಬ್ಯಾರೆಲ್‌ಗಳು, ೦೧ ಹಂಡೆ, ೦೫ ಕೊಡಗಳು, ೦೩ ಕ್ಯಾನ್ ಗಳಲ್ಲಿ ದಾಸ್ತಾನು ಇಟ್ಟು, ಬೆಲ್ಲದ ಕೊಳೆ ಕಾಯಿಸುತ್ತಿದ್ದ ಪರಿಕರಗಳನ್ನು ಪತ್ತೆ ಹಚ್ಚಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟೂ ೫೭೦ ಲೀ. ಗೇರು ಹಣ್ಣಿನ ಬೆಲ್ಲದ ಕೊಳೆ ಹಾಗೂ ೨೫ ಕೆ.ಜಿ ಬೆಲ್ಲವನ್ನು ಜಪ್ತುಮಾಡಲಾಗಿದೆ. ಜಪ್ತುಪಡಿಸಿದ ಒಟ್ಟು ಮೌಲ್ಯ ರೂ,೧೬,೦೦೦ ಎಂದು ಅಂದಾಜಿಸಲಾಗಿದೆ.


ಶ್ರೀ ವೈ ಆರ್ ಮೋಹನ್, ಅಬಕಾರಿ ಉಪ-ಆಯುಕ್ತರು, ಉ.ಕ ಜಿಲ್ಲೆ ಕಾರವಾರ ರವರ ನಿರ್ದೇಶನದ ಮೇರೆಗೆ ಹಾಗೂ ಶ್ರೀ. ಸಂತೋಷ ಕುಡಾಲಕರ್, ಅಬಕಾರಿ ಉಪ ಅಧೀಕ್ಷಕರು, ಉಪ ವಿಭಾಗ, ಹೊನ್ನಾವರ ರವರ ನೇತೃತ್ವದಲ್ಲಿ, ಈ ಕಛೇರಿಯ ಅಧಿಕಾರಿಗಳಾದ ದಾಮೋದರ್ ಎನ್ ನಾಯ್ಕ, ಅಬಕಾರಿ ನಿರೀಕ್ಷಕರು, ಹೊನ್ನಾವರ ವಲಯ, ಗಂಗಾಧರ್ ಯು ಅಂತರಗಟ್ಟಿ, ಅಬಕಾರಿ ಉಪ ನಿರೀಕ್ಷಕರು ಹೊನ್ನಾವರ ವಲಯ, ಈ ಕಛೇರಿಯ ಅಬಕಾರಿ ಉಪ ನಿರೀಕ್ಷಕರಾದ ಕು. ಪುಷ್ಪಾ ಗದಾಡಿ, ಹಾಗೂ ಅಬಕಾರಿ ರಕ್ಷಕರುಗಳಾದ ಡಿ.ಬಿ. ತಳೇಕರ್, ರಮೇಶ ರಾಠೋಡ್, ಹಾಲಸಿದ್ದಪ್ಪ ಕುರಿಹುಲಿ, ಮುತ್ತೇಪ್ಪ ಬುಗಡಿಕಟ್ಟಿ, ವಿಕ್ರಮ ವಾಸು ಬೀಡಿಕರ್, ಹಾಗೂ ವಾಹನ ಚಾಲಕರಾದ ಸಯ್ಯದ್ ಹಮಿದ್, ಸಿದ್ರಾಮಪ್ಪ ಹೊಳೆಪ್ಪಗೋಳ ಇವರುಗಳು ಸದರಿ ದಾಳಿಯಲ್ಲಿ ಪಾಲ್ಗೊಂಡಿರುತ್ತಾರೆ. ಸದರಿ ಪ್ರಕರಣವನ್ನು ಕು. ಪುಷ್ಪಾ ಗದಾಡಿ, ಅಬಕಾರಿ ಉಪ ನಿರೀಕ್ಷಕರು, ಉಪ ವಿಬಾಗ, ಹೊನ್ನಾವರ ರವರು ದಾಖಲಿಸಿರುತ್ತಾರೆ.

error: