September 16, 2024

Bhavana Tv

Its Your Channel

ರಂಜನ್ ಇಂಡೇನ್ ಗ್ಯಾಸ್ ಎಜೆನ್ಸಿ ವತಿಯಿಂದ ಪತ್ರಿಕಾ ವಿತರಕರಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಣೆ.

ಭಟ್ಕಳ: ರಂಜನ್ ಇಂಡೇನ್ ಎಜೆನ್ಸಿಯ ಮಾಲಕಿ ಶಿವಾನಿ ಶಾಂತಾರಾಮ ಭಟ್ಕಳ ಅವರು ಮಾತನಾಡಿ ಪತ್ರಿಕಾ ವಿತರಕರು ಕೊರೊನಾ ಹಾಟ್‌ಸ್ಪಾಟ್ ಆದ ಭಟ್ಕಳದಲ್ಲಿ ದಿನಾಲೂ ಪ್ರತಿ ಮನೆಗೂ ಪತ್ರಿಕೆಗಳನ್ನು ಹಾಕುವ ಮೂಲಕ ತಮ್ಮ ವೃತ್ತಿ ನಿಷ್ಟೆಯನ್ನು ಮೆರೆದಿದ್ದಾರೆ. ಒಂದು ದಿನ ಪತ್ರಿಕೆ ಬರಲಿಲ್ಲಾ ಎಂದರೂ ಎನೋ ಕಳಕೊಂಡAತೆ ಅನಿಸುತ್ತದೆ. ಕಾರ್ಯನಿರತ ಪತ್ರಕರ್ತರ ಸಂಘ ಪತ್ರಿಕಾ ವಿತರಕರನ್ನು ಗುರುತಿಸಿ ಅವರಿಗೆ ಸಹಾಯ ಮಾಡಲು ಕೇಳಿಕೊಂಡಾಗ ಸಂತೋಷದಿAದ ಒಪ್ಪಿಕೊಂಡಿದ್ದೇನೆ ಎಂದರು.
ಈ ಸಂದರ್ಬದಲ್ಲಿ ತಹಸೀಲ್ದಾರ್ ರವಿಚಂದ್ರ ಅವರು ಮಾತನಾಡಿ ಕಾರ್ಯನಿರತ ಪತ್ರಕರ್ತರ ಸಂಘ ತಮ್ಮ ಪತ್ರಿಕಾ ವಿತರಕರನ್ನು ಗುರುತಿಸುವ ಮೂಲಕ ಉತ್ತಮ ಕೆಲಸ ಮಾಡಿದೆ
ಪತ್ರಕರ್ತರು ಸದಾ ಸಮಾಜದ ಆಗು ಹೋಗುಗಳನ್ನು ನೋಡುವವರು. ಈಗಾಗಲೇ ಅನೇಕ ಕಡೆಗಳಲ್ಲಿ ಅಗತ್ಯವಿದ್ದವರಿಗೆ ಸಹಾಯ ಮಾಡಿದ ಕುರಿತು ತಿಳಿದುಕೊಂಡಿದ್ದೇನೆ. ಅದೇ ರೀತಿಯಾಗಿ ಪತ್ರಿಕಾ ವಿತರಕರಿಗೆ ಕೂಡಾ ಕಿಟ್ ವಿತರಿಸುವುದಕ್ಕೆ ಮುಂದಾಗಿರುವುದು ಶ್ಲಾಘನೀಯವಾದ ಕಾರ್ಯ ಎಂದರು.

ಕಾರ್ಯಕ್ರಮದಲ್ಲಿ ಬಿ.ಜೆ.ಪಿ. ಮಂಡಲ ಅಧ್ಯಕ್ಷ ಸುಬ್ರಾಯ ದೇವಡಿಗ, ಜಿಲ್ಲಾ ಕಾ.ನಿ.ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯ ಫಯ್ಯಾಜ್ ಮುಲ್ಲಾ, ತಾಲೂಕಾ ಸಂಘದ ಕಾರ್ಯದರ್ಶಿ ಮೋಹನ ನಾಯ್ಕ, ಮಾಜಿ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ್, ಉಪಾಧ್ಯಕ್ಷ ರಿಜ್ವಾನ್ ಗಂಗಾವಳಿ, ಶಾಹಿದ್ ಶೇಖ್ ಉಪಸ್ಥತರಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಸ್ವಾಗತಿಸಿದರು. ಜಿಲ್ಲಾ ಸಂಘದ ಕಾರ್ಯಕಾರಿಣಿ ಸದಸ್ಯ ಎಂ.ಆರ್. ಮಾನ್ವಿ ವಂದಿಸಿದರು.

error: