December 6, 2024

Bhavana Tv

Its Your Channel

‘ಕೊರೋನಾ ವೈರಸ್ ತಡೆಗಟ್ಟಲು ಶ್ರಮಿಸಿದ ಅಧಿಕಾರಿಗಳಿಗೆ ಶಾಸಕ ಸುನೀಲ ನಾಯ್ಕರಿಂದ ಸನ್ಮಾನ’

ಭಟ್ಕಳ: ಕೊರೋನಾ ವೈರಸ್ ತಡೆಗಟ್ಟಲು ಶ್ರಮಿಸಿದ ತಾಲೂಕಿನ ಅಧಿಕಾರಿಗಳಿಗೆ, ಪೊಲೀಸರಿಗೆ ಶಾಸಕ ಸುನೀಲ ನಾಯ್ಕ ಶನಿವಾರದಂದು ಅಧಿಕಾರಿಗಳ ಕಛೇರಿಗೆ ಭೇಟಿ ನೀಡಿ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಿದರು.

ಜಿಲ್ಲೆಯೊಂದರಲ್ಲೇ ತಾಲೂಕಿನಲ್ಲಿ 10 ಕೊರೋನಾ ಸೋಂಕಿತರು ಪತ್ತೆಯಾಗಿದ್ದವು. ಆದರೆ ಕಂಡು ಬಂದ 10 ಪಾಸಿಟಿವ್ ಪ್ರಕರಣದ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಭಟ್ಕಳ ಕೋರೋನಾ ಪ್ರಕರಣದಿಂದ ಮುಕ್ತರಾಗುವಂತೆ ಮಾಡಿದ ತಾಲೂಕಾಢಳಿತ ಅಧಿಕಾರಿಗಳು, ಪೊಲೀಸರ ಶ್ರಮವನ್ನು ಗುರುತಿಸಿದ ಶಾಸಕ ಸುನೀಲ ನಾಯ್ಕ ಸಹಾಯಕ ಆಯುಕ್ತ ಭರತ್ ಎಸ್., ಡಿವೈಎಸ್ಪಿ ಗೌತಮ್‌ ಕೆ.ಸಿ., ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್, ತಾಲೂಕಾ ವೈದ್ಯಾಧಿಕಾರಿ ಮೂರ್ತಿರಾಜ ಭಟ್, ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ್ ಚಿಕ್ಕನ ಮನೆ, ಅಗತ್ಯ ವಸ್ತುಗಳ ಪೂರೈಕೆ ವಿಭಾಗದ ನೋಡಲ್ ಅಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ಗೌರವಿಸಿ ಸನ್ಮಾನಿಸಿದರು.

error: