May 30, 2023

Bhavana Tv

Its Your Channel

” ಕದಂಬೋತ್ಸವಕ್ಕೆ ವೈವಿಧ್ಯ ಫಲಪುಷ್ಪ ಮಾದರಿಗಳ ಬೆರಗು, ಸಿರಿಧಾನ್ಯ ಕಲಾಕೃತಿಗಳ ಮೆರುಗು “

ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ನಡೆಯುತ್ತಿರುವ ಕದಂಬೋತ್ಸವದ ಅಂಗವಾಗಿ ಕದಂಬೋತ್ಸವದ ಮಯೂರವರ್ಮ ವೇದಿಕೆಯ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಫಲಪುಷ್ಪ ಪ್ರದರ್ಶನ ಹಾಗೂ ಸಾವಯವ ಸಿರಿಧಾನ್ಯ ಮೇಳವನ್ನು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಉದ್ಘಾಟಿಸಿ, ಪ್ರದರ್ಶನಗಳನ್ನು ವೀಕ್ಷಿಸಿದರು.

ಇದೇ ಮೊದಲ ಬಾರಿಗೆ ಕದಂಬೋತ್ಸವದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಕದಂಬೋತ್ಸವಕ್ಕೆ ವೈವಿಧ್ಯ ಫಲಪುಷ್ಪ ಮಾದರಿಗಳು ಮೆರುಗು ತಂದಿದೆ. ನಾನಾ ಬಗೆಯ ಹೂವುಗಳನ್ನು ಆಕರ್ಷಕವಾಗಿ ಜೋಡಣೆ ಮಾಡಲಾಗಿದೆ. ಹೂವಿನಲ್ಲಿ ಶಿವಲಿಂಗನ ಪ್ರತಿರೂಪ ಮಾಡಿದ್ದು, ಇದು ಅತ್ಯಾಕರ್ಷಕವಾಗಿ ಮೂಡಿ ಬಂದಿದ್ದು, ಕಣ್ಮನ ತುಂಬಿಕೊಳ್ಳಬಹುದಾಗಿದೆ. ಸಾವಯವ ಹಾಗೂ ಸಿರಿಧಾನ್ಯಗಳಿಂದ ತಯಾರಿಸಲಾದ ವಿವಿಧ ಬಗೆಯ ಕಲಾಕೃತಿಗಳು ಮೇಳದಲ್ಲಿ ವಿಶೇಷ ಆಕರ್ಷಣೆಯಾಗಿತ್ತು.

About Post Author

error: