April 20, 2024

Bhavana Tv

Its Your Channel

ಬನವಾಸಿ ಕದಂಬೋತ್ಸವದ ಸಾಂಸ್ಕೃತಿಕ ನಡಿಗೆಯಲ್ಲಿ ಹೆಜ್ಜೆ ಹಾಕಿದ ಜಿಲ್ಲಾಧಿಕಾರಿ, ಕ.ಸಾ.ಪ. ಜಿಲ್ಲಾಧ್ಯಕ್ಷ

ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆಯುತ್ತಿರುವ ಕದಂಬೋತ್ಸ ನಿಮಿತ್ತ ಇಂದು ಮಧುಕೇಶ್ವರ ದೇವಾಲಯದಿಂದ ಮಯೂರವರ್ಮ ವೇದಿಕೆಯ ವರೆಗೆ ಸಾಂಸ್ಕೃತಿಕ ನಡಿಗೆ ಭಾನುವಾರ ಸಂಯೋಜಿಸಲಾಗಿತ್ತು.
ಸಾಂಸ್ಕೃತಿಕ ನಡಿಗೆ ಆರಂಭಗೊಳ್ಳುವ ಮುನ್ನ ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಅವರಯ ಮಾತನಾಡಿ ಇಂಥ ನಡಿಗೆಯ ಮೂಲಕ ನಾವು ಈ ಕದಂಬೋತ್ಸವದಲ್ಲಿ ಜನಸಮುದಾಯವನ್ನು ಮತ್ತಷ್ಟು ಒಳಗೊಳ್ಳಲು ಸಾಧ್ಯವಾಗಿದೆ. ಇನ್ನು ಮುಂದೆ ಕದಂಬೋತ್ಸವದಲ್ಲಿ ಪ್ರತಿ ವರ್ಷ ಸಾಂಸ್ಕೃತಿಕ ನಡಿಗೆ ಎಂಬ ಹೊಸ ಪರಂಪರೆ ಆರಂಭವಾಗುತ್ತಿರುವುದು ಮತ್ತಷ್ಟು ಬಲ ಬರಲಿದೆ ಎಂದು ಹೇಳಿದರು.
ಉತ್ತರ ಕನ್ನಡ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ತಕ್ಷ ಅರವಿಂದ ಕರ್ಕಿಕೋಡಿ ಅವರು ಮಾತನಾಡಿ ಕನ್ನಡ ನೆಲ ಮತ್ತು ಭಾಷೆಯ ಜಾಗೃತಿ ಕೇವಲ ಘರ್ಜನೆಯಿಂದ ಸಾಧ್ಯವಾಗುವುದಿಲ್ಲ. ಬದಲಾಗಿ ಕದಂಬೋತ್ಸವದಂಥ ಸಂದರ್ಭದಲ್ಲಿ ವಿಶಿಷ್ಟವಾಗಿ ಹಮ್ಮಿಕೊಂಡಿರುವ ಈ ಸಾಂಸ್ಕೃತಿಕ ನಡಿಗೆ ಕನ್ನಡ ನಾಡಿಗೆ ಬಹುದೊಡ್ಡ ಶಕ್ತಿ ತುಂಬುತ್ತದೆ. ಇಂದು ಕನ್ನಡ‌ ನಾಡಿನ ಅಸ್ಮಿತೆ ಉಳಿಸಿಕೊಳ್ಳುವುದರ ಜೊತೆಗೆ ಕನ್ನಡಿಗರ ಕನ್ನಡತನ ಉಳಿಸಿಕೊಳ್ಳುವುದು ಸವಾಲನ್ನು ಸಂಗತಿ.ಇದಕ್ಕೆಲ್ಲ ಈ ನೆಲದಲ್ಲಿ ಹುಟ್ಟಿಕೊಂಡ ಸಾಂಸ್ಕೃತಿಕ ನಡಿಗೆ ಗಟ್ಟಿಧ್ವನಿ ಮೂಡಿಸುತ್ತದೆ ಎಂದು ಹೇಳಿದರು.
ಕದಂಬ ಸೈನ್ಯದ ರಾಜ್ಯ ಸಂಚಾಲಕ ಉದಯ ಕಾನಳ್ಳಿ ಅವರು ಕದಂಬರ ಮೊದಲ ರಾಜಧಾನಿ ಬಗ್ಗೆ ಏನೇ ಚಳುವಳಿ ನಡೆದರೂ ಈ ‌ನೆಲದ ಸಂಪೂರ್ಣ ಬೆಂಬಲವಿರುತ್ತದೆ ಎಂದು ಹೇಳಿದರು.
ಈ ಸಾಂಸ್ಕೃತಿಕ ನಡಿಗೆಯಲ್ಲಿ ಕಾರವಾರ ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷ ನಾಗರಾಜ ಹರಪನಹಳ್ಳಿ, ತಹಸೀಲ್ದಾರ ಡಿ.ಜಿ.ಹೆಗಡೆ, ಮಧುಕೇಶ್ವರ ದೇವಸ್ಥಾನದ ಅಧ್ಯಕ್ಷ ರಾಜಶೇಖರ ಒಡೆಯರ್, ಮಾಜಿ ಅಧ್ಯಕ್ಷ ಟಿ.ಜಿ.ನಾಡಿಗೇರ, ಶಿವಾನಂದ ದೀಕ್ಷಿತ, ಕವಯತ್ರಿ ಶೋಭಾ ನಾಯ್ಕ ಹಿರೇಕೈ, ರವೀಂದ್ರ ನಾಯ್ಕ ಕಂಡ್ರಾಜಿ, ಕದಂಬ ಕಲಾ ವೇದಿಕೆಯ ಅಧ್ಯಕ್ಷ ಶಿರಸಿ ರತ್ನಾಕರ, ದ್ರುವತಾರೆ ವೇದಿಕೆ ಅಧ್ಯಕ್ಷ ಎಚ್.ಗಣೇಶ್, ಮಂಗಳಾ ದಾವಣಗೇರಿ, ಮಹೇಶ ದಾವಣಗೇರಿ, ಸಾಯಿರಾಮ ಕಾನಳ್ಳಿ, ಅರವಿಂದ ಬಳಗಾರ, ಅಕ್ಷಯ ಶೆಟ್ಟಿ, ಗೋಪಾಲ ಸದಾ ಶಿವಳ್ಳಿ, ಶಿವಕುಮಾರ ಒಡೆಯರ್, ಉದಯ ಚಂಪದ, ವಿಶ್ವೇಶ್ವರ ಭಟ್ಟ , ರವಿ ಕೋಳೇಕರ ಮುಂತಾದವರು ಪಾಲ್ಗೊಂಡಿದ್ದರು. ಈ ನಡಿಗೆಯಲ್ಲಿ, ನೂರಾರು ಜನರು ಉತ್ಸಾಹದಿಂದ ಕನ್ನಡ ಘೋಷಣೆ ಕೂಗುತ್ತ ಅಭಿಮಾನದದ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

error: