April 25, 2024

Bhavana Tv

Its Your Channel

ವಾಹನ ಸವಾರರೊಂದಿಗೆ ಚಲ್ಲಾಟವಾಡುತ್ತಿರುವ IRB:ಕ.ರ.ವೇ ಇಂದ ನಾಳೆ ಪ್ರತಿಭಟನೆ

ಜಿಲ್ಲೆಯಾದ್ಯಂತ ಚತುಷ್ಪತ ಕಾಮಗಾರಿ ಪೂರ್ಣವಾಗದೇ IRB ಕಂಪನಿ ಟೋಲ್ ಸಂಗ್ರಹಕ್ಕೆ

ಕ.ರ.ವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಕಾಮಗಾರಿ ಮುಗಿಸದೇ ಟೋಲ್ ಪ್ರಾರಂಬಿಸಲು ಬಿಡುವುದಿಲ್ಲ ಎಂದು ನಾಳೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

IRB ಕಂಪನಿ ಜಿಲ್ಲೆಯಾದ್ಯಂತ ಅವೈಜ್ನಾನಿಕ ಚತುಷ್ಪತ ಕಾಮಗಾರಿ ನಡೆಸಿದ್ದು, ಇದುವರೆಗೆ ಜಿಲ್ಲೆಯ ಕೆಲ ಭಾಗಗಳಲ್ಲಿ ಸರ್ವಿಸ್ ರಸ್ತೆ ,ಅಂಡರ್ ಪಾಸ್, ಮತ್ತು ಮೇಲ್ಸೇತುವೆ ನಿರ್ಮಿಸಿಲ್ಲ.ಅಲ್ಲದೇ ಕುಮಟಾ ಪಟ್ಟಣ ,ದುಂಡುಕುಳಿ ಹಾಗೂ ಇನ್ನು ಕೆಲವು ಭಾಗದಲ್ಲಿ ಹಿಂದಿದ್ದ ರಸ್ತೆಗೆ ಡಾಂಬರಿಕರಣ ಮತ್ತು ಸಮರ್ಪಕ ಕಾಮಗಾರಿ ಮಾಡಿಲ್ಲ.ಅಲ್ಲದೇ ಕುಮಟಾ ಪಟ್ಟಣದಲ್ಲಿ ಬೈಪಾಸ್ ಅಥವಾ ಮೊದಲಿದ್ದ ರಸ್ತೆಯಲ್ಲಿಯೇ ಚತುಷ್ಪತ ಹಾದು ಹೋಗಲಿದೆಯೇ ಎಂಬುದು ಇನ್ನೂ ಅನುನಾನಾಸ್ಪದವಾಗಿದೆ.I R B ಟೋಲ್ ಪ್ರಾರಂಭಿಸುವ ಮೊದಲು ಪತ್ರಿಕಾ ಪ್ರಕಟಣೆ ಮೂಲಕ ಜನರಿಗೆ ತಿಳಿಸ ಬೇಕಾಗಿತ್ತು, ಆ ಕೆಲಸ ಸಹ ಆಗಿಲ್ಲ. ಈ ನಡುವೆ ಕಂದಾಯ ಮತ್ತು ಪೌರಾಡಳಿತ ಸಚೀವರು ಕೆಲ ದಿನಗಳ ಹಿಂದೆ ಕುಮಟಾ ತಾಲೂಕ ಪಂಚಾಯತ ಸಭಾಭವನದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ಸಭೆಯಲ್ಲಿ ಚತುಷ್ಪತ ಕಾಮಗಾರಿ ಹೆದ್ದಾರಿ ಕಾಮಗಾರಿ ಪೂರ್ಣವಾಗದೇ ಯಾವುದೇ ಕಾರಣಕ್ಕೂ ಟೋಲ್ ಸಂಗ್ರಹ ಮಾಡಬಾರದೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.ಆದರೆ ಜಿಲ್ಲಾಧಿಕಾರಿಗಳು ಸಚಿವರ ಆದೇಶವನ್ನು ಗಣನೆಗೆ ತೆಗೆದುಕೊಳ್ಳದೇ ಏಕಾ ಏಕಿ ಟೋಲ್ ಸಂಗ್ರಹ ಕೇಂದ್ರಕ್ಕೆ ಭದ್ರತೆ ನೀಡುವಂತೆ ಸರ್ಕಾರದಿಂದ ಆದೇಶ ಬಂದಿದ್ದು ಜಿಲ್ಲಾಧಿಕಾರಿಗಳು ಸೂಕ್ತ ರಕ್ಷಣೆ ನೀಡುವಂತೆ ಪೋಲೀಸ್ ಇಲಾಖೆಗೆ ಸೂಚಿಸಿದ್ದಾರೆನ್ನಲಾಗುತ್ತಿದೆ.ಹೀಗಾಗಿ ಸಾರ್ವಜನಿಕರು ಆಕ್ರೋಶಗೊಂಡಿದ್ದು, ಸ್ಥಳಿಯರು ಮತ್ತು ಕ.ರ.ವೇ ಇಂದ ನಾಳೆ ಭ್ರಹತ್ ಪ್ರತಿಭಟನೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

error: