September 14, 2024

Bhavana Tv

Its Your Channel

ಜೀವನಾಧರ ಟ್ರಸ್ಟ್ನ ಜಾಕಿ ಜೆ.ಡಿಸೋಜಾ ಅವರಿಗೆ ಆಧಾರಶ್ರೀ ಪ್ರಶಸ್ತಿ ಪ್ರದಾನ

ಕಾರ್ಯಕ್ರಮವನ್ನು ಕುಮುಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ ಹಲವು ಸಮಾಜಮುಖಿ ಕಾರ್ಯದ ಮೂಲಕ ಜನಮನ್ನಣೆ ಗಳಿಸಿರುವ ಸಂಸ್ಥೆ ಕಾರ್ಯ ಈ ಹಿಂದಿನಿAದಲೂ ತಿಳಿದಿದ್ದು ಇದೀಗ ಹೊನ್ನಾವರದಲ್ಲಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂತಸ ತರುತ್ತಿದೆ. ಈ ಕಾರ್ಯ ಈಗೆಯೇ ಮುಂದುವರೆಯಲಿ ಎಂದರು.
ಜೀವನಾಧರ ಟ್ರಸ್ಟ್ನ ಜಾಕಿ ಜೆ.ಡಿಸೋಜಾ ಅವರಿಗೆ ಆಧಾರಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಷ್ಟç ಪ್ರಶಸ್ತಿ ಪುರಸ್ಕçತ ಎಸ್.ಜೆ.ಕೈರನ್ ಪ್ರಶಶ್ತಿ ಪುರಸ್ಕçತ ಬಗ್ಗೆ ಅಭಿನಂದನಾ ನುಡಿಗಳನ್ನಾಡಿದರು.
ಪ್ರಶಸ್ತಿ ಸ್ವೀಕರಿಸಿ ಬಳಿಕ ಜಾಕಿ ಡಿಸೋಜಾ ಮಾತನಾಡಿ ನಮ್ಮ ಸಂಸ್ಥೆ ಕಾರ್ಯ ವೈಖರಿ ನೋಡಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಇದರಿಂದ ನನ್ನ ಜವಬ್ದಾರಿ ಹೆಚ್ಚಿದ್ದು ಮುಂದಿನ ದಿನದಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ ಅಲ್ಲದೇ ಈ ಕಾರ್ಯಕ್ಕೆ ನನ್ನ ಕುಟುಂಬ ಹಾಗೂ ಸಮಾಜ ಅಧಿಕಾರಗಳ ಸಹಕಾರವಿದೆ ಎಂದರು.
ಕಾರ್ಯಕ್ರಮದ ಕುರಿತು ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ್ ಮಾತನಾಡಿ ಜಿಲ್ಲೆಯಲ್ಲಿ ಸ್ವ-ಉದ್ಯೋಗ ತರಬೇತಿ ಹಾಗೂ ವಿವಿಧ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ನಡೆಸುತ್ತಿರುವ ಆಧಾರ ಸಂಸ್ಥೆ ಹಲವರು ಸ್ವ-ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸುವುದಕ್ಕೆ ಆಧಾರವಾಗಿದೆ. ಇಂದು ಜಿಲ್ಲೆಯ ಹಲವು ತಾಲೂಕುಗಳಲ್ಲಿ ತರಬೇತಿ ಕೇಂದ್ರವನ್ನು ಹೊಂದಿದೆ. ಸರ್ಕಾರದ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಸಾವಿರಾರು ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡಿದೆ. ತರಬೇತಿ ಪಡೆದ ಬಹುಜನರು ಇಂದು ವಿವಿಧ ವೃತ್ತಿಯಲ್ಲಿದ್ದಾರೆ. ಅನೇಕರು ಸ್ವಂತ ಉದ್ಯೋಗವನ್ನು ಮಾಡಿಕೊಂಡಿದ್ದಾರೆ.ಹೀಗೆ ಸ್ವ-ಉದ್ಯೋಗ ನಡೆಸುವವರಿಗೆ ಬೇಕಾಗುವ ಅಗತ್ಯ ವೃತ್ತಿ ಕೌಶಲ್ಯವನ್ನು ನಿರಂತರವಾಗಿ ಕಳೆದ ಒಂಬತ್ತು ವರ್ಷಗಳಿಂದ ನಡೆಸಿಕೊಂಡು ಬಂದಿದೆ. ದಿವಂಗತ ಎಂ.ಟಿ.ಕೊಡಿಯ ಅವರು ಸಿದ್ದಾಪುರ ತಾಲೂಕಿನ ನಿವೃತ್ತ ನೌಕರರ ಸಂಘದ ಸಂಸ್ಥಾಪಕ ಅಧ್ಯಕ್ಷರು, ಆಧಾರ ಶಿಕ್ಷಣ, ಸ್ವಯಂ ಉದ್ಯೋಗ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕರಲ್ಲಿ ಓರ್ವರು. ಸಂಸ್ಥೆಯ ಆರಂಭದ ದಿನದಿಂದ ಅವರ ಕೊನೆಯ ದಿನಗಳವರೆಗೂ ಸಂಸ್ಥೆಗೆ ಮಾರ್ಗದರ್ಶಕರಾಗಿ ಆಧಾರ ಆಗಿದ್ದರು. ಅವರು ತಮ್ಮ ವೃತ್ತಿಯ ಹಾಗೂ ನಿವೃತ್ತಿಯ ಬದುಕಿನಲ್ಲಿ ಜನಸಾಮಾನ್ಯರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ ಎಂದು ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಮಾತನಾಡಿ ಯಾವುದೇ ಸ್ವಾರ್ಥವಿಲ್ಲದೇ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಸಂಸ್ಥೆ ಇದಾಗಿದೆ. ಯಾವುದೇ ವ್ಯಕ್ತಿ ಸಮಾಜ ಗುರುತಿಸಲಿ ಎಂದು ಕಾರ್ಯ ಮಾಡುವುದಿಲ್ಲ. ಆದರೆ ಒಂದು ಸಂಸ್ಥೆ ಸಮಾಜಕ್ಕೆ ನೀಡಿದ ಕೊಡುಗೆ ಗಮನಿಸಿ ಸನ್ಮಾನಿಸಿರುವುದು ನಿಜಕ್ಕೂ ಅಭಿನಂದನಾರ್ಹ. ಸಂಘ ಸಂಸ್ಥೆಯವರು ಗುರುತಿಸಿ ಗೌರವಿಸಿದಾಗ ತಾವು ಮಾಡಿದ ಕಾರ್ಯದ ಬಗ್ಗೆ ತೃಪ್ತಿ ಬರುತ್ತದೆ. ಪ್ರಶಸ್ತಿ ಹಾಗೂ ಸನ್ಮಾನ ನೀಡುವ ವ್ಯವಸ್ಥೆ ಉತ್ತಮವಾಗಿದ್ದು ಇದು ಸದಾ ಕಾಲ ಮುಂದುವರೆಯಲಿ ಎಂದರು.
ಸುರೇಶ ಮಡಿವಾಳ ಸ್ವಾಗತಿಸಿ ಬೈಜು ವಿ ಜೋಸೆಫ್ ವಂದಿಸಿದರು. ಶಿಕ್ಷಕಿ ಶಾರದಾ ಹೆಗಡೆ ಪ್ರಾರ್ಥಿಸಿ ಸುಧೀಶ ನಾಯ್ಕ ಮತ್ತು ವಿನಾಯಕ ನಾಯ್ಕ ಮೂಡ್ಕಣಿ ಕಾರ್ಯಕ್ರಮ ನಿರ್ವಹಿಸಿದರು.

error: