April 19, 2024

Bhavana Tv

Its Your Channel

ಗೋಲ್ ಶಾಲೆಯ ವಾರ್ಷಿಕೋತ್ಸವದಲ್ಲಿ “ ವಿವಿಧ ದೇಶಗಳ ಸಂಸ್ಕöÈತಿ” ಹಾಗೂ “ಸ್ತಿç -ಶಕಿ”್ತಯನ್ನು ಪ್ರತಿನಿಧಿಸುವ ನೃತ್ಯಗಳು ಪುಟಾಣಿಗಳಿಂದ ಪ್ರದರ್ಶನ

ದಿನಾಂಕ ಫೆಬ್ರುವರಿ ೬ ರಂದು ಮಂಕಿಯ ‘ಗೋಲ್ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆ’ಯ ಆವರಣದಲ್ಲಿ ‘ಗೋಲ್ ಉತ್ಸವ’ ಕಾರ್ಯಕ್ರಮವು ವಿಜೃಂಭಣೆಯಿAದ ನಡೆಯಿತು. ಸುಮಾರು ೪೬೦ ಪುಟಾಣಿಗಳು ಸತತವಾಗಿ ೩ ಗಂಟೆಗಳ ಕಾಲ ಸಾಂಸ್ಕöÈತಿಕ ಕಾರ್ಯಕ್ರಮಗಳ ಮುಖಾಂತರ ನೆರೆದಿದ್ದ ೪೦೦೦ ಕ್ಕೂ ಹೆಚ್ಚು ಪ್ರೇಕ್ಷಕರ ಮನರಂಜಿಸಿದರು.

ವಿವಿಧ ದೇಶಗಳ ಸಂಸ್ಕöÈತಿಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ನೃತ್ಯಗಳನ್ನು ಮಕ್ಕಳು ಬಹು ಸುಂದರವಾಗಿ ಪ್ರದರ್ಶಿಸಿದರು. ಅಷ್ಟೇ ಅಲ್ಲದೇ ಮಹಿಳೆಯುÄ ತನ್ನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಯಾವೆಲ್ಲ ಕಷ್ಟಗಳಿಗೆ ಗುರಿಯಾಗುತ್ತಾಳೆ, ತನ್ನೆಲ್ಲಾ ಒತ್ತಡಗಳ ಮಧ್ಯೆಯೂ ಸಂಸಾರವನ್ನು ಮತ್ತು ಸಮಾಜದಲ್ಲಿಯೂ ಪುರುಷನಷ್ಟೇ ಸಮಾನವಾಗಿ ಬದುಕಬಲ್ಲಳು ಎಂದು ತೋರಿಸುವ ನಮ್ಮ ಪುಟಾಣಿಗಳ ನೃತ್ಯ ರೂಪಕಗಳು, ಅಷ್ಟೇ ಅಲ್ಲದೇ ಸ್ತೀ ಭೂಣ ಹತ್ಯೆ ನಿಷೇಧದ ಬಗ್ಗೆ ಜಾಗೃತಿಯನ್ನುಂಟು ಮಾಡುವಂತಹ ನೃತ್ಯ ಪುಟಾಣಿಗಳಿಂದ ಪ್ರದರ್ಶನಗೊಂಡಿದ್ದು ವಿಶೇಷವಾಗಿ ಪ್ರೇಕ್ಷಕರ ಮನ ಗೆದ್ದು ಅವರ ಕರತಾಡನ ಮುಗಿಲು ಮುಟ್ಟುವಂತೆ ಮಾಡಿತು. ಪ್ರತಿಯೊಂದು ಪ್ರದರ್ಶನದ ಕೊನೆಯಲ್ಲಿ ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆಗೈದರು.

ಈ ಸಾಂಸ್ಕöÈತಿಕ ಕಾರ್ಯಕ್ರಮಕ್ಕೆ ಸುಮಾರು ೧ ತಿಂಗಳ ಹಿಂದೆಯೇ ತಯಾರಿ ನಡೆದಿತ್ತು. ಬೆಂಗಳೂರಿನಿAದ ಆಗಮಿಸಿದ ‘ಸ್ಟೆಪ್ಸ್ ಡ್ಯಾನ್ಸ್ ಫ್ಯಾಕ್ಟರಿ’ ತಂಡದ ಅಭಿಷೇಕ್ ಹಾಗೂ ಚಂದ್ರು ಅವರ ಸಹಕಾರದೊಂದಿಗೆ ಗೋಲ್ ಶಾಲೆಯ ಶಿಕ್ಷಕಿಯರು ತಮ್ಮ ಮಕ್ಕಳಿಗೆ ವಿಶೇಷವಾದ ತರಬೇತಿಯನ್ನು ನೀಡಿದ್ದರು. ಮಕ್ಕಳ ವೇಷ ಭೂಷಣಗಳ ವೈವಿಧ್ಯತೆ, ವಸ್ತç ವಿನ್ಯಾಸ ಹಾಗೂ ಪ್ರಸಾದನ ವ್ಯವಸ್ಥೆ ತುಂಬಾ ಚೆನ್ನಾಗಿತ್ತು. ಮಕ್ಕಳು ಬೊಂಬೆಗಳAತೆ ಕಾಣುತ್ತಿದ್ದರು. ಅದ್ಧೂರಿಯಾದ ವೇದಿಕೆ, ಧ್ವನಿ ಬೆಳಕಿನ ವ್ಯವಸ್ಥೆ, ಹಾಗೂ ರಂಗ ಸಜ್ಜಿಕೆಯಿಂದಾಗಿ ‘ಗೋಲ್ ಉತ್ಸವ’ ಅದ್ದೂರಿಯಾಗಿ ವಿಜೃಂಭಿಸಿತು. ಒಟ್ಟಿನಲ್ಲಿ ಇಷ್ಟು ದೊಡ್ಡ ಪ್ರಮಾಣದ ವೇದಿಕೆಯ ಅನುಭವ ಪುಟಾಣಿಗಳಿಗಾಗಿದ್ದು ಅವರ ವಿಕಾಸದಲ್ಲಿ ಒಂದು ದೊಡ್ಡ ಹೆಜ್ಜೆ ಎಂದರೆ ತಪ್ಪಾಗಲಾರದು. ಇಡೀ ಕಾರ್ಯಕ್ರಮದ ರೂವಾರಿಯಾಗಿರುವಂತಹ ಗೋಲ್ ಶಾಲೆಯ ಡೈರೆಕ್ಟರ್ ಶ್ರೀಮತಿ ದೀಪಾ ರಾವ್‌ರವರು ಕಾರ್ಯಕ್ರಮದ ಬೆನ್ನೆಲುಬಾಗಿ ನಿಂತು ಯಶಸ್ವಿಗೊಳಿದರು.

error: