June 15, 2024

Bhavana Tv

Its Your Channel

ಇನ್‌ಸ್ಪಾಯರ್ ಆವಾರ್ಡನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸದಾನಂದ ಹೆಗಡೆ.

ಎಮ್. ಪಿ. ಇ. ಸೊಸೈಟಿ ಸೆಂಟ್ರಲ್ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿಯಾದ ಸದಾನಂದ ಹೆಗಡೆ ಕುಮಟಾದ ಪ್ರಗತಿ ವಿದ್ಯಾಲಯದಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಯಾರಿಸಿದ “ಅಕ್ವಾ ಬೈಕ್” ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ಈ ಬೈಕ್‌ನ್ನು ನೆರೆ ಹಾವಳಿ ಹಾಗೂ ಇತರ ಸಂದಿಗ್ಧ ಪರಿಸ್ಥಿತಿಯಲ್ಲಿ ನೀರಿನಲ್ಲಿ ಬಳಸಬಹುದಾಗಿದ್ದು. ಇದನ್ನು ಡಿ.ಸಿ. ಮೋಟಾರ್ ಮತ್ತು ಸೋಲಾರ್ ಎನರ್ಜಿಯಿಂದ ನಡೆಸಬಹುದು. ನೆರೆಹಾವಳಿಯಂತ ಪರಿಸ್ಥಿತಿಯಲ್ಲಿ ಜನರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುಲಭವಾಗಿ ಸಾಗಿಸಬಹುದು. ಇದು ಮಿಲಿಟರಿ ಹಾಗೂ ಅಗ್ನಿ ಶಾಮಕದವರಿಗೆ ಬಹಳ ಪ್ರಯೋಜನಕಾರಿಯಾಗಿದೆ.
ಮುಂದಿನ ಸ್ಪರ್ಧೆ ಫೆಬುವರಿ ತಿಂಗಳ ೧೪ ಮತ್ತು ೧೫ ರಂದು ಮಂಡ್ಯದಲ್ಲಿ ನಡೆಯಲಿದೆ. ವಿದ್ಯಾರ್ಥಿಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಎಮ್. ಪಿ. ಕರ್ಕಿ ಉಪಾಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿ ಭಟ್ಟ ಎಲ್ಲ ಸದಸ್ಯರು ಹಾಗೂ ಶಾಲಾ ಪ್ರಾಚಾರ್ಯರಾದ ಶ್ರೀಮತಿ ಕಾಂತಿ ಭಟ್ಟರವರು ಅಭಿನಂದಿಸಿದ್ದಾರೆ.

error: