September 17, 2024

Bhavana Tv

Its Your Channel

ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ಖ್ಯಾತ ತಬಲಾ ಕಲಾವಿದ ಪಂ. ರವೀಂದ್ರ ಯಾವಗಲ್‌ರಿಗೆ ಲಿಂಗರಾಜಬುವಾ ಯರಗುಪ್ಪಿ ಸಂಗೀತ ಪ್ರಶಸ್ತಿ ಪ್ರಧಾನ

ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ಲಿಂಗರಾಜಬುವಾ ಯರಗುಪ್ಪಿ ಸಂಗೀತ ಪ್ರಶಸ್ತಿಯನ್ನು ಖ್ಯಾತ ತಬಲಾ ಕಲಾವಿದ ಪಂ. ರವೀಂದ್ರ ಯಾವಗಲ್ ಇವರಿಗೂ, ಯುವ ಪುರಸ್ಕಾರವನ್ನು ಶ್ರೀಮತಿ ರೇಷ್ಮಾ ಭಟ್ ಮತ್ತು ವಿನಾಯಕ ಹೆಗಡೆ ಮುತ್ಮುರುಡು ಇವರಿಗೆ ಪ್ರದಾನ ಮಾಡಲಾಯಿತು.
ಹೊನ್ನಾವರ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಪಂಡಿತ ಲಿಂಗರಾಜಬುವಾ ಯರಗುಪ್ಪಿ ಸಂಗೀತ ಪ್ರತಿಷ್ಠಾನ ಹೊನ್ನಾವರ ಇದರ ವತಿಯಿಂದ ಭಾನುವಾರ ಇಲ್ಲಿ ನಡೆದ ಪಂ.ಲಿAಗರಾಜಬುವಾ ಯರಗುಪ್ಪಿ ಹಾಗೂ ರಾಮಪ್ಪ ವೈ.ಹುಗ್ಗಣ್ಣವರ ಅವರ ಸ್ಮರಣೆಯಲ್ಲಿ ನಾದ ಸಮ್ಮಾನ ಕಾರ್ಯಕ್ರಮ ಜರುಗಿತು.
ಅತಿಥಿಗಳಾಗಿ ಪಾಲ್ಗೊಂಡ ವೇದಮೂರ್ತಿ ಸುಬ್ರಹ್ಮಣ್ಯ ಭಟ್ ಆಶೀರ್ವಚನ ನೀಡಿ ಸಂಗೀತದ ಸಪ್ತಸ್ವರಗಳು ವೇದಮೂಲದ್ದು, ಸಂಗೀತ ದೇವತಾರಾಧನೆಯ ಒಂದು ಪ್ರಶಸ್ತ ಮಾರ್ಗ, ಜೊತೆಯಲ್ಲಿ ಇತರರನ್ನು ದೈವೀಸಾನ್ನಿಧ್ಯಕ್ಕೆ ಒಯ್ಯುವ ಕೆಲಸವನ್ನು ಕಲಾವಿದ ಮಾಡಿ ಕೇಳುಗರಿಗೂ ದೇವರ ದರ್ಶನ ಮಾಡಿಸುತ್ತಾರೆ. ಬದುಕಿನ ಹಲವು ಮಜಲುಗಳಲ್ಲಿ ಕಷ್ಟಗಳನ್ನು ದಾಟಿಬರಲು, ಸಂತೋಷವನ್ನು ಹಂಚಿಕೊಳ್ಳಲು ಸಂಗೀತ ಒಂದು ಸಾತ್ವಿಕ ಶ್ರೇಷ್ಠ ಮಾಧ್ಯಮವಾಗಿದೆ. ಆಗಿಹೋದ ಹಿರಿಯ ಕಲಾವಿದರ ಹೆಸರಿನಲ್ಲಿ ಇಂದಿನ ಪ್ರಸಿದ್ಧರಿಗೆ ಪ್ರಶಸ್ತಿ ನೀಡಿ ಗೌರವಿಸುವುದು ಮತ್ತು ಯುವಕರಿಗೆ ಪ್ರೋತ್ಸಾಹ ನೀಡುವುದು ಕಲಾಪರಂಪರೆಯನ್ನು ಮುಂದುವರಿಸಲು ಅವರು ಉತ್ಸುಕರಾಗಲಿ, ಇಂಥಹ ಸಮಾರಂಭವನ್ನು ಏರ್ಪಡಿಸಿದ ಪಾಲ್ಗೊಂಡ ಎಲ್ಲರಿಗೂ ಸಂಗೀತ ದೇವತೆ ಕರುಣಿಸಲಿ ಎಂದರು.
ಪ್ರಶಸ್ತಿ, ಸನ್ಮಾನಗಳ ಸ್ವರೂಪ ಮತ್ತು ಮೊತ್ತಕ್ಕಿಂತ ಅದರ ಹಿಂದಿನ ಪ್ರೀತಿ ಹಾಗೂ ಪರಂಪರೆ ಮುಖ್ಯ ಎಂದು ಪ್ರಶಸ್ತಿ ಸ್ವೀಕರಿಸಿದ ಹೆಸರಾಂತ ತಬಲಾ ವಾದಕ ಪಂಡಿತರವೀAದ್ರ ಯಾವಗಲ್ ಹೇಳಿದರು.
ಉದ್ಯಮಿ ಹಾಗೂ ಎಂಪಿ.ಈ ಸೊಸೈಟಿಯ ಉಪಾಧ್ಯಕ್ಷರಾದ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ ಸಾಧನೆಯ ಹಿಂದಿರುವ ತಂದೆ-ತಾಯಿ ಹಾಗೂ ಗುರುವನ್ನು ಸದಾ ಸ್ಮರಿಸಿಕೊಳ್ಳುವು ಭಾರತೀಯ ಪರಂಪರೆ ಹಾಗೂ ಅನೇಕ ಕಲಾವಿದರನ್ನು ಪೋತ್ಸಾಹಿಸುವ ಹಾಗೂ ಸಂಗೀತ ಕ್ಷೇತ್ರ ಪರಿಚಯಿಸುವ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಉತ್ತಮ ಕಾರ್ಯ ಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪತ್ರಕರ್ತ ಜಿ.ಯು.ಭಟ್ ಮಾತನಾಡಿ,’ಯಕ್ಷಗಾನ ಹಾಗೂ ಸಂಗೀತ ಕಲಾವಿದರು ಉತ್ತರ ಕನ್ನಡ ಜಿಲ್ಲೆಯನ್ನು ಸಾಮಸ್ಕೃತಿಕವಾಗಿ ಶ್ರೀಮಂತವಾಗಿಸಿದ್ದಾರೆ.ಕಲೆಯನ್ನು ವೃತ್ತಿಯಾಗಿಸಿಕೊಂಡರೆ ಜೀವನ ನಿರ್ವಹಣೆ ಕಷ್ಟವಾಗುತ್ತದೆ’ ಎಂದರು.
ರೇಷ್ಮಾ ಭಟ್ ಮತ್ತು ವಿನಾಯಕ ಹೆಗಡೆ ನಾದನಮನ ಸಲ್ಲಿಸಿದರು. ರವೀಂದ್ರ ಯಾವಗಲ್ ತಬಲಾ ಸೋಲೋ ನುಡಿಸಿದರು. ಪ್ರೋ. ಪ್ರಶಾಂತ ಹೆಗಡೆ ಮತ್ತು ಪ್ರೋ. ಎನ್.ಜಿ. ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
ಬೆಳಿಗ್ಗೆಯಿಂದ ಕಲಾವಿದರಾದ ಶ್ರೀಧರ ಹೆಗಡೆ ಕಲಭಾಗ,ತಾರಾ ಜಿ.ಭಟ್ಟ ಹೊನ್ನಾವರ,ಎಂ.ಎಸ್.ಭಟ್ಟ ಅಲೇಖ, ಶಿವಾನಂದ ಭಟ್ಟ ಹಡಿನಬಾಳ, ವಿಶ್ವೇಶ್ವರ ಭಟ್ಟ ಖರ್ವಾ, ರಮ್ಯಾ ಭಟ್ಟ ಮೂರೂರು, ಋತು ಬಳಗಾರ ಕುಮಟ, ವಿನಾಯಕ ಹುಗ್ಗಣ್ಣವರ ಹೊನ್ನಾವರ, ಅನಿರುದ್ಧ ಐತಾಳ ಬೆಂಗಳೂರು, ರಾಮಚಂದ್ರ ಭಟ್ಟ ವಂದೂರು ಗಾಯನ ಪ್ರಸ್ತುತಪಡಿಸಿದರು., ,ಸುಧೀರ ಹೆಗಡೆ ಕಾನ್ಮೂಲೆ ಕೋಳಲು ಹಾಗೂ ಎನ್.ಎಸ್.ಹೆಗಡೆ ಹಿರೇಮಕ್ಕಿ, ಜಿ.ಕೆ.ಹೆಗಡೆ ಹರಿಕೇರಿ,ರಾಜು ಹೆಬ್ಬಾರ ಕರ್ಕಿ, ಅಲ್ಲಮಪ್ರಭು ಕಡಕೋಳ, ಎನ್.ಜಿ.ಅನಂತಮೂರ್ತಿ ಗುಣವಂತೆ,ಶೇಷಾದ್ರಿ ಅಯ್ಯಂಗಾರ್ ಮಂಕಿ,ಗಣೇಶ ಭಾಗವತ ಗುಂಡಕಲ್,ಎನ್.ಜಿ.ಹೆಗಡೆ ಕಪ್ಪೆಕೆರೆ,ಗಣಪತಿ ಹೆಗಡೆ ಹರಿಕೇರಿ,ಗುರುರಾಜ ಹೆಗಡೆ ಆಡುಕಳ ಹಾಗೂ ಅಕ್ಷಯ ಭಟ್ಟ ಅಂಸಳ್ಳಿ ತಬಲಾದಲ್ಲಿ ಸಾಥ್ ನೀಡಿದರು. ಪ್ರಕಾಶ ಹೆಗಡೆ ಯಡಳ್ಳಿ,ಸುರೇಶ ಭಟ್ಟ ಕಡತೋಕಾ,ಗೌರೀಶ ಯಾಜಿ ಕೂಜಳ್ಳಿ,ಪ್ರಸನ್ನ ವೈದ್ಯ ಯಲ್ಲಾಪುರ,ಮಹೇಶ ಭಟ್ಟ ಕಲ್ಲಳ್ಳಿ,ಹರಿಶ್ಚಂದ್ರ ನಾಯ್ಕ ಇಡಗುಂಜಿ,ಚAದ್ರಶೇಖರ ಹಿರೇಮಠ ಹುಬ್ಬಳ್ಳಿ ಹಾಗೂ ಮಾರುತಿ ನಾಯ್ಕ ಇಡಗುಂಜಿ ಸಂವಾದಿನಿಯಲ್ಲಿ ಸಹಕರಿಸಿದರು.

error: