May 19, 2024

Bhavana Tv

Its Your Channel

ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್‌ನ ೧೦ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ದೀಪದಾನ ಕಾರ್ಯಕ್ರಮ

ದೀಪವು ಸುಡುವುದರೊಂದಿಗೆ ಬೆಳಕನ್ನು ನೀಡುತ್ತದೆ. ದೀಪವನ್ನು ಪಡೆದ ನೀವು ನಿಮ್ಮಲ್ಲಿ ವಿದ್ಯಾರ್ಥಿ ಜೀವನಕ್ಕೆ ಮಾರಕವಾಗಬಲ್ಲ ದುರ್ಗುಣಗಳನ್ನು ಸುಟ್ಟು, ಶಿಸ್ತು, ಸಂಯಮ, ಸಮಯಪಾಲನೆಯಂತಹ ಉತ್ತಮ ಗುಣಗಳೊಂದಿಗೆ ಭವಿಷ್ಯವನ್ನು ಪ್ರಕಾಶಮಾನವಾಗಿಸಿಕೊಳ್ಳಿ ಎಂದು ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರು ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್‌ನ ೧೦ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ದೀಪದಾನ ಕಾರ್ಯಕ್ರಮದ ಆಶೀರ್ವಚನದಲ್ಲಿ ವಿದ್ಯಾರ್ಥಿಗಳನ್ನು ಹರಸಿದರು.
ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್, ಬಂಗಾರಮಕ್ಕಿಯಲ್ಲಿ ೧೦ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ದೀಪದಾನ ಕಾರ್ಯಕ್ರಮವನ್ನು ದಿನಾಂಕ ೦೯-೦೨-೨೦೨೦ರಂದು ಎರ್ಪಡಿಸಲಾಗಿತ್ತು. ಸಂಸ್ಥೆಯ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರು, ಕಾರ್ಯದರ್ಶಿಗಳಾದ ಶ್ರೀಮತಿ ಅರ್ಪಿತಾರವರು, ಪ್ರಾಚಾರ್ಯರಾದ ವಿಠ್ಠಲ್ ನಾಯ್ಕ, ಆಡಳಿತ ನಿರ್ದೇಶಕರಾದ ಡಾ|| ಜಿ. ಟಿ. ಹೆಗಡೆ, ಪಿ.ಟಿ.ಎ. ಉಪಾಧ್ಯಕ್ಷರಾದ ನರೇಂದ್ರ ನಾಯ್ಕ, ಪಿ.ಟಿ.ಎ. ಕಾರ್ಯದರ್ಶಿಗಳಾದ ಸಂತೋಷ ಪೈ, ವೆಂಕಟೇಶ ನಾಯ್ಕ, ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪರಮಪೂಜ್ಯ ಮಾರುತಿ ಗುರೂಜಿಯವರು ಶಾರದಾ ದೇವಿಗೆ ದೀಪಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಶಿಕ್ಷಕರು ತಮ್ಮ ಅನಿಸಿಕೆಗಳನ್ನು ಮುಕ್ತ ಮನಸ್ಸಿನಿಂದ ಅಭಿವ್ಯಕ್ತಪಡಿಸಿದರು. ೯ನೇ ತರಗತಿ ವಿದ್ಯಾರ್ಥಿಗಳು ನೃತ್ಯದ ಮೂಲಕ ಮನರಂಜನಯನ್ನು ನೀಡಿದರು. ವೇದಿಕೆಯಲ್ಲಿರುವ ಗಣ್ಯರೆಲ್ಲರೂ ತಮ್ಮ ಮಾತುಗಳಲ್ಲಿ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸದ ಬಗ್ಗೆ, ಅವರ ಗುರಿಯ ದಿಕ್ಕಿನ ಬಗ್ಗೆ ತಿಳಿಸಿದರು. ವಿದ್ಯಾರ್ಥಿ ಜೀವನದ ಮಹತ್ವವನ್ನು ತಿಳಿಸಿ ಆದರ್ಶ ವ್ಯಕ್ತಿಗಳಾಗಿ ಬದುಕಿ ಹೆತ್ತವರಿಗೂ, ಶಿಕ್ಷಣ ಸಂಸ್ಥೆಗೂ ಕೀರ್ತಿ ತರುವಂತಾಗಿ ಎಂದು ಹಾರೈಸಿದರು.
ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಅನ್ಯೋನ್ಯತೆಯಿಂದ ಕೂಡಿದ್ದು ಬೀಳ್ಕೊಡುಗೆಯ ಕ್ಷಣ ನೆನೆದು ಒಮ್ಮೆ ಎಲ್ಲರೂ ಭಾವಪರವಶರಾದರು. ೯ನೇ ತರಗತಿಯ ವಿದ್ಯಾರ್ಥಿಗಳು ೧೦ನೇ ತರಗತಿ ವಿದ್ಯಾರ್ಥಿಗಳಿಂದ ದೀಪದಾನವನ್ನು ಪಡೆದರು. ವಿದ್ಯಾರ್ಥಿಗಳಾದ ಕುಮಾರ ಶ್ರೀರಾಮ ಹಾಗೂ ಕುಮಾರ ಸಂಜೀವ ಕಾರ್ಯಕ್ರಮದ ನಿರೂಪಣೆ ಮಾಡಿದರು. ಶಿಕ್ಷಕಿ ಕುಮಾರಿ ಸಂಗೀತಾ ನಾಯ್ಕ ಸರ್ವರನ್ನು ಸ್ವಾಗತಿಸಿದರು, ಶಿಕ್ಷಕಿ ಕುಮಾರಿ ಭಾಗ್ಯಶ್ರೀ ನಾಯ್ಕ ವಂದಿಸಿದರು. ಕಾರ್ಯಕ್ರಮವು ಸುಂದರವಾಗಿ ಮೂಡಿಬಂದಿತು.

error: