March 27, 2025

Bhavana Tv

Its Your Channel

ಕಬಡ್ಡಿ ಸ್ಪರ್ಧೆ; ತಾರಗೋಡ ಶಾಲಾ ವಿದ್ಯಾರ್ಥಿಗಳು ಚಾಂಪಿಯನ್

ಶಿರಸಿ ನಗರದ ಲಯನ್ಸ್ ಶಾಲೆಯಲ್ಲಿ ಯುತ್ ಫಾರ್ ಸೇವಾ ಸಂಸ್ಥೆಯವರು ಹಮ್ಮಿಕೊಂಡ ‘ಚಿಗುರು’ ಕಾರ್ಯಕ್ರಮದ ತಾಲೂಕು ಮಟ್ಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ವಿವಿಧ ಸ್ಪರ್ಧೆ ಮತ್ತು ಕ್ರೀಡಾಕೂಟ ನಡೆಯಿತು.

ಕ್ರೀಡೆಯಲ್ಲಿ ತಾರಗೋಡು ಹಿರಿಯ ಪ್ರಾಥಮಿಕ ಶಾಲೆ ಗಂಡು ಮಕ್ಕಳ ಕಬಡ್ಡಿ ತಂಡ ಚಾಂಪಿಯನ್ನಾಗಿ ಹೊರ ಹೊಮ್ಮಿತು. ಹೆಣ್ಣುಮಕ್ಕಳು ಸಾಮೂಹಿಕ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ ಹೆಣ್ಣುಮಕ್ಕಳ ರಂಗೋಲಿಯಲ್ಲಿ ಚಿತ್ರಕಲೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡರು.

ಈ ಸಾಧನೆಗೆ ಮುಖ್ಯೋಧ್ಯಾಪಕಿ ಪ್ರೇಮಾ ಭಟ್ಟ, ಸಹ ಶಿಕ್ಷಕ ಗಣಪತಿ ಹೆಗಡೆ, ತಾರಾ ಲೋಕೇಶ್ವರ, ಉಮಾ ಭಟ್ಟ, ಜ್ಯೋತಿ ಆಗೇರ, ಎಸ್.ಡಿ.ಎಂ.ಸಿ ಅಧ್ಯಕ್ಷ ಬೀರಪ್ಪ ಎಸ್ ಪಟಗಾರ ಹಾಗೂ ಸರ್ವ ಸದಸ್ಯರು ಹರ್ಷ ವ್ಯಕ್ತಪಡಿಸಿದರು

error: