October 5, 2024

Bhavana Tv

Its Your Channel

ಮಿನಿ ಒಲಂಪಿಕ್ಸನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಮುರ್ಕಂಡಿ ಗೌಡ


ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಅಥ್ಲೇಟಿಕ್ ಅಶೋಸಿಯೇಶನ್ ವತಿಯಿಂದ 14 ವಯಸ್ಸಿನೊಳಗಿನ ಮಿನಿ ಒಲಂಪಿಕ್ಸ್ ಕ್ರೀಡಾಕೂಟ ಬೆಂಗಳೂರಿನ ಉದ್ಯಾನಗರಿ ಶ್ರೀ ಕಂಠೀರವ ಕ್ರೀಡಾಕೂಟದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯಿಂದ ಹೊನ್ನಾವರ ತಾಲೂಕಿನ ಆನಂದಾಶ್ರಮ ಬಂಕಿಕೊಡ್ಲ ಪ್ರೌಡಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಮುರ್ಕಂಡಿ ದಿನೇಶ ಗೌಡ ಎತ್ತರಜಿಗಿತದಲ್ಲಿ ಭಾಗವಹಿಸಿ ದ್ವೀತಿಯ ಪದಕ ಪಡೆಯುವ ಮೂಲಕ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾನೆ. ಇತನು ಅಧ್ವೈತ ಸ್ಪೊಟ್ರ್ಸ ಕ್ಲಬ್ ತರಬೇತಿ ಪಡೆದಿದ್ದು ರಾಘವೇಂದ್ರ ಮೇಸ್ತ ತರಬೇತಿ ನೀಡಿದ್ದರು. ಇವರ ಸಾಧನೆಗೆ ಜಿಲ್ಲೆ ಹಾಗೂ ತಾಲೂಕಿನ ವಿವಿಧ ಅಧಿಕಾರಿಗಳು ಶಾಲಾ ಶಿಕ್ಷಕರು ಅಭಿನಂದಿಸಿದ್ದಾರೆ.

error: