March 21, 2023

Bhavana Tv

Its Your Channel

ಹೊನ್ನಾವರದ ೨ ಪ್ರತಿಭೆಗಳಿಗೆ ಒಲಿದು ಬಂದ ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ

ಹೊನ್ನಾವರ ತಾಲೂಕಿನ ಮಾರ್ಥೋಮಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಿ.ಬಿ.ಎಸ್.ಸಿ ಯ ೫ನೇ ತರಗತಿ ಅಧ್ಯಯನ ನಡೆಸುತ್ತಿರುವ ಬೇಬಿಶ್ರೀ ಹಾಗೂ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ಬಿ.ಎ ಅಧ್ಯಯನ ನಡೆಸುತ್ತಿರುವ ಅಜಯ ಗಾಯತೊಂಡೆ ಈ ಬಾರಿಯ ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಲಿಂಗನಾಯಕನಹಳ್ಳಿಯಲ್ಲಿ ನಡೆದ ೧೧ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಪ್ರತಿಭೋತ್ಸವ ಹೆಸರಿನಲ್ಲಿ ಕಿರುತರೆ ಕಲಾಸೇವೆಯಲ್ಲಿ ಸಾಧನೆಗೈದ ೨೦ ವಿಧ್ಯಾರ್ಥಿಗಳಿಗೆ ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ ಪುರಸ್ಕಾರ ಪ್ರತಿ ವರ್ಷ ನೀಡುತ್ತಾ ಬಂದಿದ್ದು ಜಿಲ್ಲೆಯ ೨ ಜನ ಈ ಬಾರಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಬೇಬಿಶ್ರೀ ಕಿರುತರೆ ಧಾರಾವಾಹಿ, ಚಲನಚಿತ್ರಗಳ ಮೂಲಕ ಗುರುತಿಕೊಂಡ ಚತುರ್ಬಾಷಾ ಬಾಲನಟಿಯಾಗಿದ್ದು ೨೦ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿ, ಮನೆ ಮಾತಾಗಿದ್ದಾಳೆ. ಅಲ್ಲದೆ ಕಾಸರಕೋಡದ ಹವ್ಯಾಸಿ ಬರಹಗಾರ ಅಜಯ್ ಗಾಯತೊಂಡೆ ೮೦ಕ್ಕೂ ಅಧಿಕ ಲೇಖನಗಳು ನಾಡಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಕಲೆ, ಸಾಹಿತ್ಯ, ಸಂಗೀತ, ಚಟುವಟಿಕೆ ಮುಖಾಂತರ ಬಹುಮುಖ ಪ್ರತಿಭೆ ಎನಿಸಿಕೊಂಡ ಇವರಿಬ್ಬರು ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ ಪಡೆದು ಜಿಲ್ಲೆಗೆ ಹೆಸರು ತಂದಿದ್ದಾರೆ. ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ಖ್ಯಾತ ಸಾಹಿತಿ ಭೂವನೇಶ್ವರಿ ಹೆಗಡೆ, ಅತಿಥಿಗಳಾಗಿ ಸಾಹಿತಿ ಸಂಶೋಧಕರಾದ ಎ.ವಿ.ನಾವಡ ದಂಪತಿಗಳು, ಗೋಕಾಕ್ ವಿ.ವಿ ಯ ಕುಲಪತಿ ಪ್ರೊ.ಡಿ.ಬಿ.ನಾಯಕ್, ಸ್ಥಾಪಕ ರಾಜ್ಯಧ್ಯಕ್ಷ ಡಾ ಶೇಕರ್ ಅಜೇಕರ್ ಉಪಸ್ಥಿತರಿದ್ದರು.

About Post Author

error: