November 30, 2023

Bhavana Tv

Its Your Channel

ಉ.ಕನ್ನಡ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ ಅವರಿಗೆ ಎಂ .ಡಿ.ಎನ್.ಪ್ರಶಸ್ತಿ ಘೋಷಣೆ


ಚಾಮರಾಜನಗರ ಜಿಲ್ಲೆಯ ಅಮೃತಭೂಮಿಯಲ್ಲಿ ಫೆ.22 ರಂದು ನಡೆಯುವ ಸಮಾರಂಭದಲ್ಲಿ ಡಾ.ಹರೀಶ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಚಾಮರಾಜನಗರ ಜಿಲ್ಲೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ಹಣಾಧಿಕಾರಿಗಳಾಗಿದ್ದ ವೇಳೆ ಜಿಲ್ಲೆಯ ರೈತರಿಗಾಗಿ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ಕೊಡಲಾಗುತ್ತಿದೆ.ಚಾಮರಾಜನಗರದ ಹಳ್ಳಿಗಳಲ್ಲಿ ಗ್ರಾಮವಾಸ್ತವ್ಯ ಮಾಡುತ್ತಾ ರೈತರ‌ ಜೊತೆ ಸರಕಾರವನ್ನು ಜೊತೆಗೊಳಿಸಿ ರೈತ ಸಮುದಾಯದ ಅಭಿವೃದ್ಧಿಗೆ ಡಾ.ಹರೀಶ್ ಕುಮಾರ್ ದುಡಿದಿದ್ದರು.‌

ಕಾರವಾರ: ರೈತ ಸಂಘದ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಹೆಸರಲ್ಲಿ ನೀಡಲಾಗುವ ಎಂ.ಡಿ.ಎನ್.ಪ್ರಶಸ್ತಿಯನ್ನು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಅವರಿಗೆ ಘೋಷಿಸಲಾಗಿದೆ.

error: