September 18, 2024

Bhavana Tv

Its Your Channel

ದಾಖಲೆಯಿಲ್ಲದೆ ಸಾಗಿಸುತಿದ್ದ 51.20 ಲಕ್ಷ ನಗದು ವಶ

ಕಾರ್ಕಳ: ದಾಖಲೆಯಿಲ್ಲದೆ ಸಾಗಿಸುತಿದ್ದ ಐವತ್ತು ಲಕ್ಷ ಇಪ್ಪತ್ತು ಸಾವಿರ ಹಣವನ್ನು ಕಾರ್ಕಳ ತಾಲೂಕಿನ ಸಾಣೂರು ಚೆಕ್ ಪೋಸ್ಟ್ ನಲ್ಲಿ ಎ.15 ರಂದು ವಶಪಡಿಸಿಕೊಳ್ಳಲಾಗಿದೆ. ಹಣವನ್ನು ಮೂಡುಬಿದಿರೆ ಎಸ್‌ಸಿ ಡಿಸಿಸಿ ಬ್ರಾಂಚ್ ನಿಂದ ಕಾರ್ಕಳ ಕಡೆಗೆ ಸಾಗಿಸಲಾಗುತಿತ್ತು ಎನ್ನಲಾಗಿದೆ. ಆದಾಯ ತೆರಿಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತಿದ್ದಾರೆ .
ಇನ್ನೊಂದು ಘಟನೆ ಸಂಬ0ಧಿಸಿದ0ತೆ ಅಖಿಲ್ ಕಂಪೆನಿಗೆ ಸೇರಿದ ದಾಖಲೆಯಿಲ್ಲದೆ ಸಾಗಿಸುತಿದ್ದ ಒಂದು ಲಕ್ಷ ಇಪ್ಪತ್ತು ಸಾವಿರ ಹಣವನ್ನು ಸಾಣೂರು ಚೆಕ್ ಪೋಸ್ಟ್ ನಲ್ಲಿ ವಶ ಪಡಿಸಿಕೊಳ್ಳಲಾಗಿದೆ. ಚೆಕ್ ಪೋಸ್ಟ್ ನಲ್ಲಿ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತಿದ್ದ ನರೇಂದ್ರ ಕಾಮತ್ , ಸರ್ಕಲ್ ಠಾಣಾಧಿಕಾರಿ ಟಿ ಡಿ ಪ್ರಸನ್ನ ಕಾರ್ಕಳ ನಗರ ಠಾಣಾಧಿಕಾರಿ ಪ್ರಸನ್ನ ಸೇರಿದಂತೆ ಪೋಲಿಸ್ ಸಿಬ್ಬಂದಿಗಳು ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು ಎಂದು ಕಾರ್ಕಳ ಚುನಾವಣಾ ಅಧಿಕಾರಿ ಮದನ್ ಮೋಹನ್ ಮಾಹಿತಿ ನೀಡಿದ್ದಾರೆ.
ವರದಿ ; ಅರುಣ ಭಟ್ ಕಾರ್ಕಳ

error: