May 4, 2024

Bhavana Tv

Its Your Channel

ಜಿಲ್ಲೆಗೆ ಮತ್ತೆ ಶಾಕ್ ಕೊಟ್ಟ ಕರೋನಾ: ಭಟ್ಕಳ 1 ಹಾಗೂ ಯಲ್ಲಾಪುರ 6


ಕಾರವಾರ:-ಜಿಲ್ಲೆಯಲ್ಲಿ ಇಂದು ಮತ್ತೆ ಯಲ್ಲಾಪುರದಲ್ಲಿ 6 ಹಾಗೂ ಭಟ್ಕಳದಲ್ಲಿ 1ಕರೋನಾ ಪ್ರಕರಣ ಬೆಳಕಿಗೆ ಬರುವ ಮೂಲಕ ಸೊಂಕಿತರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ. ಬಹುತೇಕರು ಮಹರಾಷ್ಟ್ರ ದಿಂದ ಜಿಲ್ಲೆಗೆ ಬಂದವರಾದರೇ ೨೯ ವರ್ಷದ ಓರ್ವ ಮಹಿಳೆ ಮಾತ್ರ ಆಂದ್ರ ಪ್ರದೇಶದಿಂದ ಬಂದವರಾಗಿದ್ದಾರೆ. ಯಲ್ಲಾಪುರದಲ್ಲಿ ನಿನ್ನೆ ದೃಢಪಟ್ಟಿದ್ದ ಐದು ಪ್ರಕರಣ ಹಾಗೂ ಇಂದು ಜಿಲ್ಲೆಯಲ್ಲಿ ದೃಢಪಟ್ಟ ಮೂರು ಪ್ರಕರಣಗಳ ಪೈಕಿ ಎರಡನ್ನು ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ಖಚಿತಪಡಿಸಲಾಗಿದೆ.
ಭಟ್ಕಳಕ್ಕೆ ಆಂಧ್ರಪ್ರದೇಶದ ವಿಜಯವಾಡದಿಂದ ವಾಪಸ್ಸಾಗಿದ್ದ ೨೯ ವರ್ಷದ ಯುವತಿಯಲ್ಲಿ ಸೋಂಕು ದೃಢಪಟ್ಟಿದೆ. ಈಕೆ ವಿಜಯವಾಡದಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಬಂದು, ಅಲ್ಲಿ ಹೋಟೆಲ್ ವೊಂದರಲ್ಲಿ ವಾಸ್ತವ್ಯ ಹೂಡಿ, ಬಳಿಕ ಕುಂದಾಪುರದವರೆಗೆ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸಿ, ಭಟ್ಕಳಕ್ಕೆ ಈಕೆ ಟ್ಯಾಕ್ಸಿಯಲ್ಲಿ ಬಂದಿದ್ದರು. ಅಲ್ಲದೆ ಯಲ್ಲಾಪುರದಲ್ಲಿ ಇಂದು ಪತ್ತೆಯಾದ ಸೊಂಕಿತರ ಪ್ರಯಾಣದ ವಿವರ ನೋಡುವುದಾದರೆ ಮಹಾರಾಷ್ಟ್ರದಿಂದ ಮೇ ತಿಂಗಳ ಮೂರನೇ ವಾರದಲ್ಲಿ ೧೪ ಮಂದಿ ಯಲ್ಲಾಪುರಕ್ಕೆ ವಾಪಸ್ಸಾಗಿದ್ದರು. ಅವರನ್ನು ಕ್ವಾರಂಟೈನ್ ನಲ್ಲಿಡಲಾಗಿತ್ತು. ಈ ವೇಳೆ ಗಂಟಲಿನ ದ್ರವ ಕಳುಹಿಸಿದವರ ಪೈಕಿ ಓರ್ವನಿಗೆ ಸೋಂಕು ದೃಢಪಟ್ಟಿದೆ. ಉಳಿದ ೧೩ ಮಂದಿ ೧೪ ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದು, ಮೊದಲ ಬಾರಿ ಪರೀಕ್ಷಿಸಿದ ವರದಿಯಲ್ಲಿ ಎಲ್ಲರದ್ದೂ ನೆಗೆಟಿವ್ ಬಂದ ಕಾರಣ ನಿನ್ನೆಯಷ್ಟೇ ಮನೆಗೆ ಕಳುಹಿಸಲಾಗಿತ್ತು. ಆದರೆ, ಎರಡನೇ ಬಾರಿ ಕಳುಹಿಸಿದ ಗಂಟಲಿನ ದ್ರವದ ಮಾದರಿಯಲ್ಲಿ ಐವರಲ್ಲಿ ಸೋಂಕು ನಿನ್ನೆಯೇ ದೃಢಪಟ್ಟಿದೆ. ಎಂಟು ವರ್ಷದ ಬಾಲಕ, ೬೨ ವರ್ಷದ ಪುರುಷ, ೨೫ ವರ್ಷದ ಯುವತಿ ಹಾಗೂ ೧೦ ವರ್ಷದ ಬಾಲಕಿ ಒಂದೇ ಕುಟುಂಬದವರಾಗಿದ್ದು, ಇವರ ಸಂಬoಧಿ ೨೨ ವರ್ಷದ ಯುವಕನಲ್ಲಿ ನಿನ್ನೆ ಸೋಂಕು ದೃಢಪಟ್ಟಿತ್ತು. ಜತೆಗೆ, ಮಹಾರಾಷ್ಟ್ರದಿಂದ ವಾಪಸ್ಸಾಗಿದ್ದ ಯಲ್ಲಾಪುರ ಮೂಲದ ೪೯ ವರ್ಷದ ಪುರುಷನಲ್ಲೂ ಇಂದು ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಬುಲೆಟಿನ್ ನಲ್ಲಿ ಖಚಿತಪಡಿಸಿದ್ದು, ಈ ಮೂಲಕ ಯಲ್ಲಾಪುರದಲ್ಲಿ ಸೋಂಕಿತರ ಸಂಖ್ಯೆ ೧೨ಕ್ಕೆ ಏರಿಕೆಯಾಗಿದೆ.
ಅಲ್ಲದೆ ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್- ೧೯ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂಟು ಮಂದಿ ಗುಣಮುಖರಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಮುಂಡಗೋಡದ ಎಂಟು ವರ್ಷದ ಬಾಲಕ, ೨೪ ವರ್ಷದ ಯುವಕ, ಯಲ್ಲಾಪುರದ ೧೬ ವರ್ಷದ ಯುವತಿ, ೪೬ ವರ್ಷದ ಪುರುಷ, ಹೊನ್ನಾವರದ ೩೪ ವರ್ಷದ ಮಹಿಳೆ, ೨೪ ವರ್ಷದ ಯುವಕ, ಜೊಯಿಡಾದ ೩೧ ವರ್ಷದ ಮಹಿಳೆ ಹಾಗೂ ದಾಂಡೇಲಿಯ ೨೪ ವರ್ಷದ ಯುವಕನನ್ನು ಬಿಡುಗಡೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಸಕ್ರಿಯವಾಗಿ 36 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 57 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 93 ಸೋಂಕಿತರು ಜಿಲ್ಲೆಯಲ್ಲಿದ್ದಾರೆ.

error: