May 2, 2024

Bhavana Tv

Its Your Channel

ಕರ್ನಾಟಕದ ಕಾಶ್ಮೀರದಲ್ಲಿ ಮುಂದುವರೆದ ಕರೋನಾ: ಇಂದು ಕೂಡಾ ಇರ್ವರಲ್ಲಿ ಸೊಂಕು ದೃಡ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಪ್ರಕರಣ ವರದಿಯಾಗಿದ್ದು ಆ ಮೂಲಕ ಕರೋನಾ ಸೊಂಕಿತರ ಸಂಖ್ಯೆ ಜಿಲ್ಲೆಯಲ್ಲಿ ೯೪ ಏರಿಕೆಯಾಗಿದೆ. ೩೪ ವರ್ಷದ ಪುರುಷ, ಹಾಗೂ ೬೧ ವರ್ಷದ ಮಹಿಳೆಗೆ ಕೊರೊನಾ ಫಾಸಿಟಿವ್ ಬಂದಿದ್ದು ಮಹಾರಾಷ್ಟ್ರದಿಂದ ಬಂದಿದ್ದ ಇಬ್ಬರು ಸೋಂಕಿತರು ಕ್ವಾರಂಟೈನ್‌ನಲ್ಲಿದ್ದರು. ಇದೀಗ ಇವರಲ್ಲಿ ಕೊರೊನಾ ಸೋಂಕು ದೃಡಪಟ್ಟಿದೆ.ಕಾರವಾರದ ಕ್ರಿಮ್ಸ್ ಕೊರೊನಾ ವಿಶೇಷ ವಾರ್ಡ್ನ‌ನಲ್ಲಿ ಪ್ರಸ್ತುತ ೨೨ ಸಕ್ರಿಯ ಪ್ರಕರಣಗಳಿದ್ದು ಬಿಡುಗಡೆ ಗೊಂಡ ೭೨ ಮಂದಿ ಸೇರಿ ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟು ೯೪ ಪ್ರಕರಣಗಳಾಗಿವೆ

error: