October 3, 2024

Bhavana Tv

Its Your Channel

ಭಟ್ಕಳ ಹೆಸ್ಕಾಂ ಕಛೇರಿಯಲ್ಲಿ ವಿದ್ಯುತ್ ಸರಬರಾಜು ವ್ಯವಸ್ಥೆ, ವಿದ್ಯುತ್ ಬಳಕೆಯ ಸುರಕ್ಷತೆ ಕುರಿತಾಗಿ ಮಾಹಿತಿ ಕಾರ್ಯಗಾರ

ಕಾರ್ಯಗಾರದ ಆರಂಭದಲ್ಲಿ ಹೆಸ್ಕಾಂ ಭಟ್ಕಳ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ ಮಂಜುನಾಥ ಮಾತನಾಡಿ ಹೆಸ್ಕಾಂ ಇಲಾಖೆ ಕಾರ್ಯನಿರ್ವಹಣೆಯ ಬಗ್ಗೆ ವಿದ್ಯುತ್ ಸರಬರಾಜು, ಅದರ ಬಳಕೆಯ ಬಗೆಗೆ ಸಾರ್ವಜನಿಕರೊಂದಿಗೆ ಮಾತನಾಡಿದರು
ಹೆಸ್ಕಾಂ ಭಟ್ಕಳ ತಾಂತ್ರಿಕ ವಿಭಾಗದ ಸಹಾಯಕ ಇಂಜಿನಿಯರ ಶಿವಾನಂದ ನಾಯ್ಕ ಮಙತನಾಡಿ ಹೆಸ್ಕಾಂ ಇಲಾಖೆಯಲ್ಲಿನ ವಿವಿಧ ವಿಭಾಗಗಳನ್ನು ಪರಿಚಯಿಸಿ ಈ ಪೈಕಿ ಪವರ ಉತ್ಪಾದನೆ, ಟ್ರಾನ್ಸ್ಮಿಶನ ಮತ್ತು ವಿತರಣೆಯ ಬಗ್ಗೆ ವಿವರಿಸಿದರು.
ಈಗಾಗಲೇ ಜಿಲ್ಲೆಯಲ್ಲಿಯೇ ಭಟ್ಕಳ ತಾಲೂಕು ಹೆಚ್ಚಿನ ವಿದ್ಯುತ ಬಳಕೆಯಲ್ಲಿದ್ದು, ಮುಖ್ಯವಾಗಿ ಭಟ್ಕಳದಲ್ಲಿ ೧-೨ ವರ್ಷದೊಳಗಾಗಿ ಲೋಡ ಶೆಡ್ಡಿಂಗ ಮಾಡುವ ಅನಿವಾರ್ಯತೆ ಬರಲಿದೆ ಎಂದು ತಿಳಿಸಿದರು.
ನಂತರ ಗ್ರಾಮೀಣ ವಿಭಾಗದ ಶಾಖಾಧಿಕಾರಿ ರಮೇಶ ಮೇಸ್ತ ಅವರು ಕಟ್ಟಡ ಹಾಗೂ ವಿದ್ಯುತ ತಂತಿಗಳ ನಡುವಿನ ಅಂತರದ ವಿವರವನ್ನು ಸಾರ್ವಜನಿಕರಿಗೆ, ಪತ್ರಕರ್ತರಿಗೆ ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ನಗರ ವಿಭಾಗದ ಶಾಖಾಧಿಕಾರಿ ಶ್ರೀಕಾಂತ, ಸಹಾಯಕ ಲೆಕ್ಕಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

error: