December 6, 2024

Bhavana Tv

Its Your Channel

ಕಣ್ಣು ಕಾಣದ ವೃದ್ದರ ಬಾಳಿಗೆ ಬೆಳಕಾದ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಸಂಸ್ಥಾಪಕ ಬಿ ಎಂ ಕಿರಣ್

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀದ ಆನೆಗೊಳ ಗ್ರಾಮದಲ್ಲಿ ೯-೦೨-೨೦ ರಂದು ಉಚಿತ ಆರೋಗ ಶಿಭಿರವನ್ನು ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅದ್ಯಕ್ಷರಾದ ಬಿ ಎಂ ಕಿರಣ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದರು.

ಈ ಉಚಿತ ಆರೋಗ್ಯ ಶಿಭಿರದಲ್ಲಿ ಕಣ್ಣಿನ ಸಮಸ್ಯೆ ಇದ್ದ ಸುಮಾರು ಹತ್ತು ವೃದ್ದರನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ನೀಡಿಸಿ ತಮ್ಮ ತಮ್ಮ ಗ್ರಾಮಗಳಿಗೆ ಸುರಕ್ಷಿತವಾಗಿ ಬಿಡುವ ಕೆಲಸವನ್ನು ಶ್ರೀ ಸುಬ್ರಹ್ಮಣ್ಯ ಸೇವ ಟ್ರಸ್ಟ್ ಅದ್ಯಕ್ಷರಾದ ಕಿರಣ್ ರವರು ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ಪಡೆದುಕೊಂಡ ಸಾರ್ವಜನಿಕರು ಮಾತನಾಡಿ ನಮ್ಮಗೆ ಸೂಕ್ತ ಚಿಕಿತ್ಸೆ ನೀಡಿ ನಮ್ಮಗೆ ಮೂರು ದಿನದಿಂದ ಊಟ ತಿಂಡಿ ಹಾಗೂ ಹಣ್ಣು ಎಲ್ಲಾ ವ್ಯವಸ್ತೆಗಳನ್ನು ಮಾಡಿಕೊಟ್ಟ ಶ್ರೀ ಸುಬ್ರಹ್ಮಣ್ಯ ಟ್ರಸ್ಟ್ ಸಂಸ್ಥಾಪಕರಾದ ಬಿ .ಎಂ ಕಿರಣ್ ಕುಟುಂಬಕ್ಕೆ ಧನ್ಯವಾದ ತಿಳಿಸಿದರು..

error: