March 26, 2024

Bhavana Tv

Its Your Channel

ವಾಹನವನ್ನು ಅಡ್ಡಗಟ್ಟಿ ಕಂಪನಿಯ ಕಾರ್ಯಚಟುವಟಿಕೆಯನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹ

ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕಾರ್ಯಚಟುವಟಿಕೆಗೆ ಬೇಕಾದ ಬ್ರಹತ ಗಾತ್ರದ ಸಲಕರಣೆಗಳನ್ನು ಕೊಂಡೊಯ್ಯುತ್ತಿದ್ದ ವೇಳೆ ಸ್ಥಳಿಯರು ವಾಹನವನ್ನು ಅಡ್ಡಗಟ್ಟಿ ಕಂಪನಿಯ ಕಾರ್ಯಚಟುವಟಿಕೆಯನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ ಘಟನೆ ಕಾಸರಕೋಡದ ಟೊಂಕಾದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

ವಿವಿಧ ಮೀನುಗಾರಿಕಾ ಸಂಘಟನೆಗಳ ಮುಖಂಡರು ,ಊರ ನಾಗರಿಕರು ಈ ವೇಳೆ ಪಾಲ್ಗೊಂಡು ಕಂಪನಿಗೆ ನೀಡಿದ ಗುತ್ತಿಗೆಯನ್ನು ರದ್ದುಗೊಳಿಸಿ ಅವರ ಎಲ್ಲಾ ಕಾರ್ಯಚಟುವಟಿಕೆಗಳು ನಿಲ್ಲಿಸಬೇಕು ಎಂದು ಕಂಪನಿಯ ವಿರುದ್ದ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಯಾವುದೇ ಕಾರಣಕ್ಕು ಕಂಪನಿಯ ವಾಹನ ಊರಿಗೆ ಪ್ರವೇಶ ಮಾಡಬಾರದು ಎಂದು ಬಿಗಿಪಟ್ಟು ಹಿಡಿದರು. ಕೆಲಕಾಲ ಕಾಸರಕೋಡದಲ್ಲಿನ ಬಂದರಿಗೆ ತಲುಪುವ ರಸ್ತೆಯಲ್ಲಿ ಜನಸಮೂಹವೇ ಸೇರಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಜನಪ್ರತಿನಿಧಿಗಳು ,ಅಧಿಕಾರಿಗಳು ಮೀನುಗಾರರ ಅಹವಾಲನ್ನು ಕೇಳಿಕೊಂಡು ಸೂಕ್ತ ಪರಿಹಾರವನ್ನು ಒದಗಿಸಲಿದ್ದೇವೆ ಮಾತ್ರವಲ್ಲ ಅಲ್ಲಿಯವರೆಗೆ ಕೆಲಸ ನಿಲ್ಲಿಸುತ್ತೇವೆ ಎಂದು ಭರವಸೆಕೊಟ್ಟಿದ್ದರು ಆದರೆ ಇದು ಕೇವಲ ನಮ್ಮ ಮೂಗಿಗೆ ತುಪ್ಪ ಸವರುವ ವಿಚಾರ ಎಂದು ಅಸಮಧಾನ ಹೊರಹಾಕಿದರು. ಜನಾಕ್ರೋಶ ಹೆಚ್ಚಾದ ಹಿನ್ನಲೆ ಪೊಲೀಸ್ ಅಧಿಕಾರಿಗಳು ಮದ್ಯಪ್ರವೇಶಿಸಿ ಪ್ರತಿಭಟನಾ ನಿರತರೊಂದಿಗೆ ಚರ್ಚಿಸಿದರು. ಎರಡು ದಿನದ ಕಾಲಾವಕಾಶ ನೀಡುತ್ತೇವೆ ನಂತರ ಮತ್ತೆ ಪುನಃ ಈ ವಿಚಾರವಾಗಿ ಚರ್ಚೆ ನಡೆಯಬೇಕೆಂದು ಪ್ರತಿಭಟನಾ ನಿರತರು ಬಿಗಿ ಪಟ್ಟು ಹಿಡಿದರು. ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಸರಿಯಾದ ಉತ್ತರ ಸಿಗಬೇಕು. ಪೊಳ್ಳು ಭರವಸೆಗಳ ಅವಶ್ಯಕತೆಯಿಲ್ಲ ಎಂದು ಪ್ರತಿಭಟನಾ ನಿರತರು ಈ ವೇಳೆ ಆಗ್ರಹಿಸಿದರು.

ಸ್ಥಳಿಯರಾದ ಅಬ್ದುಲ್ ರೆಹಮಾನ್ ಮಾತನಾಡಿ ಇಲ್ಲಿನ ಧೂಳಿನ ಪರಿಣಾಮವಾಗಿ ಈಗಾಗಲೇ ಜನ, ಜಾನುವಾರು, ವಾತಾವರಣದ ಮೇಲೆ ಘೋರಪರಿಣಾಮವಾಗಿದೆ. ರೈತರು, ವಯೋವೃದ್ಧರು, ವಿದ್ಯಾರ್ಥಿಗಳು ಕೂಡ ಗಂಭೀರವಾದ ಸಮಸ್ಯೆಯನ್ನು ಎದುರಿಸಬೇಕಾಗುತ್ತಿದೆ. ಇಂಥ ಕಂಪನಿಗಳಿಗೆ ಲಾಭ ಮಾಡಿಕೊಳ್ಳಲು
ನೂರಾರು ಎಕರೆ ಜಾಗವನ್ನು ಸಲೀಸಾಗಿ ಮಂಜೂರು ಮಾಡಿ ಕೊಡಲಾಗುತ್ತದೆ. ಆದರೆ ಇಲ್ಲೆ ನೆಲೆ ನಿಂತು ಜೀವನ ಸಾಗಿಸುತ್ತಿರುವ ಪಾರಂಪರಿಕ ಮೀನುಗಾರರಿಗೆ ಇಲ್ಲಿಯವರೆಗೆ ಹಕ್ಕುಪತ್ರವಾಗಲಿ, ಪಹಣಿಪತ್ರವಾಗಲಿ ಮಂಜೂರಾಗಿಲ್ಲ ಎಂದರು.
ವಾರದ ಹಿಂದೆಯಷ್ಟೆ ಕಡಲಮಕ್ಕಳು ಬೃಹತ ಪ್ರಮಾಣದ ಹೋರಾಟ ಮಾಡಿದಾಗ ಜನಪ್ರತಿನಿಧಿಗಳು ಆಗಮಿಸಿ ಸರ್ಕಾರದಿಂದ ತಡೆ ನೀಡುವ ಭರವಸೆ ನೀಡಿದ್ದರು ಅದರೆ ಈ ಭರವಸೆ ಹುಸಿಯಾಗಿದ್ದು ಮುಂದೆ ಯಾವ ರೀತಿಯಾಗಿ ಪ್ರತಿಭಟನೆ ಬಿಸಿ ಅನುಭವಿಸುತ್ತಾರೆ ಎನ್ನುವುದು ಕಾದು ನೋಡಬೇಕಿದೆ.

error: