ರಿತುರಾಮ ರಚನೆಯ ‘ಅನ್ಕೊಂಡಗೆ’ ಸಾಂಗನ್ನು ಬಿಡುಗಡೆಗೊಳಿಸಿ ರಿತುರಾಮ ತಂದೆ ರಾಮಚಂದ್ರ ಮಾತನಾಡಿ ‘ಈ ಹಿಂದಿನ ಸಾಂಗ್‌ಗಿAತಲೂ ಮೊದಲೆ ಇದನ್ನು ರಚಿಸಿದ್ದು ಆದರೆ ಕಾರಣಾಂತರದಿAದ ತಡವಾಗಿ ಬಿಡುಗಡೆ ಮಾಡಿದ್ದೇವೆ. ಈ ಸಾಂಗ ನನ್ನ ಮಗನ ಕನಸ್ಸಾಗಿತ್ತು. ೨ ವರ್ಷದ ಹಿಂದೆ ತಯಾರಾಗಿದ್ದ ಟ್ರಾಕ್ ಇದಾಗಿದ್ದು, ಸಾಂಗ್ ಕೇಳಿದ್ದ ಎಲ್ಲರು ಮೆಚ್ಚಿಕೊಂಡಿದ್ದಾರೆ. ಮಗನ ಕನಸು
ಕನ್ನಡ ಇಂಡಸ್ಟಿçÃಸ್‌ನ ಒಂದು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕೆಂದು ಆಸೆ ಅವನದ್ದಾಗಿದೆ. ಮೊದಲು ಸಾಂಪ್ರದಾಯಿಕ ಶಿಕ್ಷಣ ಬಿಟ್ಟು ಬಂದಾಗ ಸ್ವಲ್ಪ ನೋವಾಗಿದ್ದರು ಸಹ ಬಳಿಕ ಈತನ ಶ್ರಮ, ಆಸಕ್ತಿ ಶ್ರದ್ಧೆಯನ್ನು ಅರಿತು ಸಂಪುರ್ಣ ಬೆಂಬಲ ನೀಡಿದ್ದೇವೆ. ಹಾಲಿವುಡ್ ಮಾದರಿಯಲ್ಲಿನ ಎಲ್ಲಾ ಸಂಗೀತದ ಸಂಬAಧಪಟ್ಟ ವಿಚಾರವನ್ನು ಕಲಿತು ತನ್ನದೇ ಆಗ ವಿನೂತನ ರೀತಿಯಲ್ಲಿ ಜನರಿಗೆ ಸಾಂಗ್‌ನ್ನು ತಲುಪಿಸುತ್ತಿದ್ದಾನೆ. ಈಗ ಈತನ ಕನಸು ನನಸ್ಸಾಗುತ್ತಿರುವ ದಿನದಲ್ಲಿ ನಾವು ಸಂತಸ ಪಟ್ಟಿದ್ದೇವೆ. ಮುಂದಿನ ದಿನದಲ್ಲಿ ಈತನಿಗೆ ಎಲ್ಲರ ಸಹಕಾರದಿಂದ ಉತ್ತಮ ರೀತಿಯಲ್ಲಿ ಬೆಳೆಯುವಂತಾಗಲಿ ಎಂದು ಹಾರೈಸುತ್ತೇನೆ.
‘ಅನ್ಕೊಂಡಗೆ’ ಸಾಂಗ ರಚನೆ, ಹಿನ್ನೆಲೆ ಸಂಗೀತ ನೀಡಿದ ರಿತುರಾಮ ಮಾತನಾಡಿ ‘ವಿಶೇಷವಾಗಿ ಈ ಸಾಂಗ್ ರಚನೆಯಲ್ಲಿ ಸಾಕಷ್ಟು ಪರಿಶ್ರಮದ ಜೊತೆಗೆ ವಿಭಿನ್ನತೆಯನ್ನು ಸೇರಿದ್ದು ಇಂದು ಜನರ ಮುಂದಿಟ್ಟಿದ್ದೇವೆ. ಹಿಂದುಸ್ತಾನಿ ಸಂಗೀತಕ್ಕೆ ಸಂಬAಧಪಟ್ಟAತೆ ವಿಶೇಷ ಮಾದರಿಯಲ್ಲಿ ಟ್ರಾಕ್ ತಯಾರಿಸಿ ಅತ್ಯುತ್ತಮ ಸೌಂಡನಲ್ಲಿ ಇದನ್ನು ತಯಾರಿದ್ದೇನೆ. ಈಗಿನ ಯೂತ್ ಟ್ರೇಂಡ್‌ಗಾಗಿ ಹಾಗೂ ಕಮರ್ಷಿಯಲ್ ಆಗಿ ಸಹ ರಚಿಸಲಾಗಿದೆ. ಈಗಾಗಲೇ ಈ ಟ್ರಾಕನ ವಿಡಿಯೋದಲ್ಲಿ ಖ್ಯಾತ ದ್ವಿಭಾಷಾ ನಟ ಅಶ್ವಿನಿ ನಕ್ಷತ್ರ ಖ್ಯಾತಿಯ ಜೆ.ಕೆ. ಜಯರಾಮ್ ಕಾರ್ತಿಕ್ ಅವರು ಟ್ರಾಕ್ ಕೇಳಿ ಇದರ ವಿಡಿಯೋ ವರ್ಸನಲ್ಲಿ ನಟಿಸಲು ಒಪ್ಪಿಗೆ ನೀಡಿದ್ದು ನಮಗೆ ಇನ್ನಷ್ಟು ಸಂತಸ ತಂದಿದೆ.
ಸದ್ಯ ನಟಿಯ ಆಯ್ಕೆಯ ಪ್ರಕ್ರಿಯೆ ನಡೆಯುತ್ತಿದೆ. ವಿಡಿಯೋ ನಿರ್ಮಾಣಕ್ಕೆ ಯಾರಾದರೂ ಆಸಕ್ತ ನಿರ್ಮಾಪಕರು ನಮಗೆ ಸಹಕರಿಸಿದ್ದಲ್ಲಿ ಇದನ್ನು ಬಾಲಿವುಡ್ ಪ್ರತಿಷ್ಠಿತ ಆಡಿಯೋ ಕಂಪನಿಯಾದ ಟಿ-ಸಿರಿಸ್ ಜೊತೆಗೆ ಮಾತುಕತೆ ನಡೆಸಿ ಬಾಲಿವುಡನಲ್ಲಿ ರಿಲೀಸ ಮಾಡುವ ಉದ್ದೇಶವಾಗಿದೆ. ಇದರಿಂದ ಕನ್ನಡ ಭಾಷೆಗೆ ಒಂದು ಒಳ್ಳೆಯ ಮನ್ನಣೆ, ಹೆಸರು ಬರಲಿದೆ. ಸದ್ಯ ಕನ್ನಡದಲ್ಲಿ ಮೂರು ಸಿನಿಮಾಕ್ಕೆ ಅವಕಾಶ ಸಿಕ್ಕಿದ್ದು ಮುಂದಿನ ದಿನದಲ್ಲಿ ಆಡಿಯೋ ಕ್ಷೇತ್ರ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಆಸೆ ನನ್ನದಾಗಿದ್ದು ಎಲ್ಲರ ಸಹಕಾರ ಕೋರುತ್ತಿದ್ದೇನೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ರಿತುರಾಮ ಸಹೋದರ ನಿಖಿಲರಾಮ್, ಮಣಿ ಪೂಜಾರಿ ಸೇರಿದಂತೆ ದೇವಿದಾಸ ಮಾಫಿಯಾ ತಂಡದ ಸಹ ಸದಸ್ಯರು, ಸ್ನೇಹಿತರು ಇದ್ದರು.
More Stories
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕ ವತಿಯಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಭಟ್ಕಳವತಿಯಿಂದ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮೆರವಣಿಗೆ ಮೂಲಕ ಬಂದು ಸಹಾಯಕ ಆಯುಕ್ತರಿಗೆ ಮನವಿ.
ತುಳುನಾಡಿನ ಕಾರಣೀಕ ಮೆರೆದ ಕಲ್ಜಿಗ ಸಿನೇಮಾ, ಕಾಂತಾರದ ಬೆನ್ನಿಗೇ ಮತ್ತೊಂದು ಕಲಾತ್ಮಕ ಚಿತ್ರ ಕೊಟ್ಟ ಕರಾವಳಿ