May 7, 2024

Bhavana Tv

Its Your Channel

ಉತ್ತರಕನ್ನಡದಲ್ಲಿ ಮುಂದುವರೆದ ಕರೋನಾರ್ಭಟ ಒಂದೇ ದಿನ 40 ಪ್ರಕರಣ ಪತ್ತೆ

ಕಾರವಾರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೋನಾ ಸೊಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದೇ ಮೊದಲ ಬಾರಿಗೆ ಒಂದೇ ದಿನ 40 ಪ್ರಕರಣ ಪತ್ತೆಯಾಗುವ ಮೂಲಕ ಶಾಕ್ ನೀಡಿದೆ. ತಾಲೂಕವಾರು ಇದೇ ಪತ್ತೆಯಾದ ಸೊಂಕಿತರ ಸಂಖ್ಯೆ ಗಮನಿಸುದಾದರೆ ಭಟ್ಕಳ- 21, ಕುಮಟಾ -4 ,ಮುಂಡಗೋಡು -2 ಅಂಕೋಲ-5,ಹಳಿಯಾಳ- 8, ಫಾಸಿಟಿವ್ ಪ್ರಕರಣ ವರದಿಯಾಗಿದೆ. ಅದರಲ್ಲೂ ಭಟ್ಕಳದ ಇಬ್ಬರು ವ್ಯಕ್ತಿಗಳಿಂದ ಬರೋಬ್ಬರಿ 21 ಫಾಸಿಟಿವ್ ಪ್ರಕರಣ ಬಂದಿದ್ದು ಭಟ್ಕಳ ತಾಲೂಕನ್ನು ತಲ್ಲನಗೊಳಿಸಿದೆ.
ಭಟ್ಕಳ ತಾಲೂಕಿನಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಸೊಂಕಿತನಾದವನ ಸಂಪರ್ಕ ಮಾಡಿದ 1 ವರ್ಷದ ಹೆಣ್ಣುಮಗು , 12ವರ್ಷದ ಬಾಲಕ ,51 ವರ್ಷದ ಪುರುಷ , 51 ವರ್ಷದ ಪುರುಷ , 58ವರ್ಷದ ಪುರುಷ , 42ವರ್ಷದ ಪುರುಷ , 32 ವರ್ಷದ ಮಹಿಳೆ, 42 ವರ್ಷದ ಮಹಿಳೆ,46 ವರ್ಷದ ಮಹಿಳೆ ,7ವರ್ಷದ ಬಾಲಕಿ,15ವರ್ಷದ ಬಾಲಕ ,24 ವರ್ಷದ ಯುವಕನಿಗೆ ಫಾಸಿಟಿವ್ ಬಂದರೆ ಮಂಗಳೂರು ಆಸ್ಪತ್ರೆಯಲ್ಲಿ ಸೊಂಕಿತನಾದವನ ಸಂಪರ್ಕ ದಿಂದ ಭಟ್ಕಳದ 60 ವರ್ಷದ ಪುರುಷ, 48 ವರ್ಷದ ಪುರುಷ ,14 ವರ್ಷದ ಬಾಲಕಿ,16 ವರ್ಷದ ಬಾಲಕಿ,18 ವರ್ಷದ ಯುವಕ, 15 ವರ್ಷದ ಬಾಲಕ,13 ವರ್ಷದ ಬಾಲಕಿ ,55 ವರ್ಷದ ಪುರುಷನಿಗೆ ಸೊಂಕು ದೃಡವಾಗಿದೆ.
ಇನ್ನು ಕುಮಟಾ ತಾಲೂಕಿನಲ್ಲಿ ಪತ್ತೆಯಾದ ಪ್ರಕರಣ ಗಮನಿಸುದಾದರೆ ಮಹಾರಾಷ್ಟ್ರ ಪ್ರಯಾಣ ಬೆಳಸಿದ 7 ವರ್ಷದ ಬಾಲಕ , 10 ವರ್ಷದ ಬಾಲಕ ,26 ವರ್ಷದ ಮಹಿಳೆ, 35 ವರ್ಷದ ಮಹಿಳೆಯಲ್ಲಿ ಸೊಂಕು ದೃಡವಾಗಿದೆ.
.ಅಂಕೋಲದಲ್ಲಿ 25 ವರ್ಷದ ಪುರುಷ, 65 ವರ್ಷದ ವೃದ್ಧೆ, 49 ವರ್ಷದ ಪುರುಷ , 72 ವರ್ಷದ ವೃದ್ದ 33 ವರ್ಷದ ಪುರುಷ ಸಂಪರ್ಕದವರಿಗೆ ಫಾಸಿಟಿವ್ ಬರುವ ಮೂಲಕ ಶಾಕ್ ನೀಡಿದೆ.
ಮುಂಡಗೋಡದಲ್ಲಿ 12 ವರ್ಷದ ಬಾಲಕ, 17 ವರ್ಷದ ಯುವತಿ, ಕರೋನಾ ಪಾಸಟಿವ್ ಸೊಂಕಿತರ ಸಂಪರ್ಕದಿoದ ದೃಡವಾಗಿದೆ
ಹಳಿಯಾಳಕ್ಕೆ ಮಹಾರಾಷ್ಟ್ರ ಕಂಟಕ ಮುಂದುವರೆದಿದ್ದು ª 21 ವರ್ಷದ ಯುವತಿ,4 ವರ್ಷದ ಹೆಣ್ಣುಮಗು, 12 ವರ್ಷದ ಮಹಿಳೆ, 28 ವರ್ಷದ ಮಹಿಳೆ, 72 ವರ್ಷದ ವೃದ್ಧೆ ,70 ವರ್ಷದ ಪುರುಷನಿಗೆ ಸೊಂಕು ಬoದರೆ ಆಂದ್ರ ಪ್ರದೇಶದಿಂದ ಮರಳಿದ 48 ವರ್ಷದ ಪುರುಷನಿಗೆ ಸೊಂಕು ಹಾಗೂ ಗುಜರಾತ್ ನಿಂದ ಬಂದ 51 ವರ್ಷದ ಮಹಿಳೆಗೆ ಸೊಂಕು ದೃಡವಾಗುವ ಮೂಲಕ ಇನಷ್ಟು ಭೀತಿ ಹೆಚ್ಚಿಸಿದೆ. .

error: