ಕೆರೆಮನೆ ಶಂಭು ಹೆಗಡೆ ರಾಷ್ಟಿçÃಯ ನಾಟ್ಯೋತ್ಸವ ಫೆ. ೨೦ ರಿಂದ ೨೪ ವರೆಗೆ ನಡೆಯಲಿದ್ದು, ವಿವಿಧ ಭಾಗಗಳಿಂದ ವೈವಿಧ್ಯಮಯ ಕಲಾವಿದರು ಮತ್ತು ಕಲಾತಂಡಗಳು ಪಾಲ್ಗೊಳ್ಳಲಿವೆ ಎಂದು ನಾಟ್ಯೋತ್ಸವ ಸಮಿತಿ ಕಾರ್ಯಾಧ್ಯಕ್ಷ ಲಕ್ಷಿö್ಮÃನಾರಾಯಣ ಕಾಶಿ ತಿಳಿಸಿದರು.
ಗುಣವಂತೆಯ ಯಕ್ಷಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಕಾರ್ಯಕ್ರಮದ ವಿವರ ನೀಡಿದರು. ಫೆ. ೨೦ ರಂದು ಸಂಜೆ ೫ ಗಂಟೆಗೆ ಕಾರ್ಯಕ್ರಮವನ್ನು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲು ಉದ್ಘಾಟಿಸುವರು. ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೋ. ಎಂ.ಎ. ಹೆಗಡೆ ಅಧ್ಯಕ್ಷತೆ ವಹಿಸುವರು. ಮಾವಿನಕೆರೆ ಕೃಷ್ಣ ಯಾಜಿ ಅವರಿಗೆ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಮೈಸೂರು ಜಿ.ಎಸ್.ಭಟ್ ಬರೆದ `ಇಡಗುಂಜಿ ಮೇಳ ೮೫’ ಕೃತಿಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಿಡುಗಡೆಗೊಳಿಸುವರು ಸಂಜೆ ೬-೩೦ ರಿಂದ ಸೈಯದ್ ಸಲ್ಲಾವುದ್ದೀನ್ ಪಾಷಾ ಇವರ ಬಹುಪ್ರಸಿದ್ಧ ವಿಶೇಷ ಚೇತನರ ನೃತ್ಯ, ಬೆಂಗಳೂರು ಕಲಾದರ್ಶಿನಿಯಿಂದ ಯಕ್ಷಗಾನ ಬ್ಯಾಲೆ ಪ್ರದರ್ಶನ ನಡೆಯಲಿದೆ.
ಫೆ. ೨೧ ರಂದು ಸಂಜೆ ೫ ಗಂಟೆಗೆ ನಾಟ್ಯೋತ್ಸವ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಯಕ್ಷಗಾನ ವಿದ್ವಾಂಸ ಡಾ. ರಮಾನಂದ ಬನಾರಿ, ಅರ್ಥಧಾರಿ ಎಂ.ಎನ್.ಹೆಗಡೆ, ಯಕ್ಷಗಾನ ಕಲಾವಿದ ಡಾ. ಶ್ರೀಧರ ಭಂಡಾರಿ, ಕಲಾ ಸಂಘಟಕ ಮನ್ಮಥಕುಮಾರ ಸತ್ಪತಿ ಅವರನ್ನು ಸನ್ಮಾನಿಸಲಾಗುವುದು. ಸಂಜೆ ೬ ರಿಂದ ಓಡಿಸ್ಸಿ ನೃತ್ಯ, ಗೊಂಬೆಯಾಟ, ಜಾನಪದ ತಂಡ, ಓಡಿಶಾದ ಕಲಾವಿದರಿಂದ ಆದಿವಾಸಿ ನೃತ್ಯ ಬಸ್ತರ್ ತಡದಿಂದ.
ಫೆ. ೨೨ ಸಂಜೆ ೫ ಗಂಟೆಗೆ ನಾಟ್ಯೋತ್ಸವ ಸನ್ಮಾನ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರಾದ ಕೃಷ್ಣ ಗಾಣಿಗ ಜಲವಳ್ಳಕರ್ಕಿ, ಎಂ.ಕೆ.ರಮೇಶ ಆಚಾರ್ಯ, ವಿದ್ವಾಂಸ ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ, ಛಾಯಾಗ್ರಾಹಕ ಕೆ.ಎಸ್.ರಾಜಾರಾಮ ಅವರನ್ನು ಸನ್ಮಾನಿಸಲಾಗುವುದು. ಸಂಜೆ ೬ ಗಂಟೆಗೆ ಸ್ವರಧಾರ ಸಮ್ಮೇಳದಲ್ಲಿ ಪ್ರಕಾಶ ಹೆಗಡೆ ಕಲ್ಲಾರೆಮನೆ ಕೊಳಲು, ಶಂಕರ ಕಬಾಡಿ ವಾಯಲಿನ್, ಆಸ್ಸಾಂ ತಂಡದ ಜಾನಪದ ನೃತ್ಯ, ಕೇರಳದ ತೊಗಲು ಗೊಂಬೆಯಾಟ ನಡೆಯಲಿದೆ.
ದಿ. ೨೩ ರಂದು ಸಂಜೆ ೫ ಗಂಟೆಗೆ ನಾಟ್ಯೋತ್ಸವ ಸನ್ಮಾನ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಎ.ಎಸ್.ನಂಜಪ್ಪ, ಕಲಾ ಸಂಘಟಕ ಪ್ರಭಾಕರ ಹೆಗಡೆ ಚಿಟ್ಟಾಣಿ, ಮದ್ದಲೆ ವಾದಕ ನಾಗೇಶ ಭಂಡಾರಿ ಅವರನ್ನು ಸನ್ಮಾ ನಜಸಲಾಗುವುದು. ಸಂಜೆ ೬ ಗಂಟೆಗೆ ದೀಪ್ತಿ ನವರತ್ನ ಅವರಿಂದ ಕರ್ನಾಟಕ ಸಂಗೀತ, ವಿದ್ಯಾ ಅಂಗಾರ ಅವರಿಂದ ಕುಚುಪುಡಿ ಮತ್ತು ಶ್ರೀಹರಿ ಮತ್ತು ಚೇತನ ಅವರಿಂದ ಕಥಕ್ ನೃತ್ಯ ನಡೆಯಲಿದೆ.
ದಿ. ೨೪ ರಂದು ಸಂಜೆ ೫ ಗಂಟೆಗೆ ಕೆರೆಮನೆ ಶಿವರಾಮ ಹೆಗಡೆ ರಾಷ್ಟಿçÃಯ ಪ್ರಶಸ್ತಿಯನ್ನು ಪದ್ಮಶ್ರೀ ಡಾ. ಪದ್ಮಾಸುಬ್ರಹ್ಮಣ್ಯಂ ಇವರಿಗೆ ಪ್ರದಾನ ಮಾಡಲಾಗುವುದು. ಸಂಜೆ ೬-೩೦ ಗಂಟೆಗೆ ಭುವನೇಶ ಕೋಮ್ಕಳಿ, ಕಲಾಪಿನಿ ಕೋಮ್ಕಳಿ ಇವರಿಂದ ಭಕ್ತಿಸಂಗೀತ, ಡಾ. ವಸುಂಧರಾ ದೊರೆಸ್ವಾಮಿ ಅವರಿಂದ ಭರತನಾಟ್ಯ, ಮೋಹನಪ್ರಿಯ ಥವರಾಜ್ ಅವರಿಂದ ನವರಸ ವರ್ಣಂ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಮಾತನಾಡಿ ನಾಟ್ಯೋತ್ಸವದಲ್ಲಿ ಸಮಾಜಕ್ಕೆ ಕೊಡುಗೆ ನೀಡಿದವರನ್ನು ಗೌರವಿಸಲಾಗುತ್ತಿದೆ. ಪ್ರತಿದಿನ ಬೆಳಿಗ್ಗೆ ಅಪೂರ್ವ ಪೂರ್ವ ಸ್ಮರಣೆ ನಡೆಯಲಿದೆ. ಪ್ರತಿದಿನದ ಕಾರ್ಯಕ್ರಮವನ್ನು ಪ್ರತಿನಿತ್ಯ ಕಾರ್ಯಕ್ರಮವನ್ನು ಅಗಲಿದ ಯಕ್ಷಚೇತನಗಳಾದ ಕಲಾವಿದ ರಾಮ ಮಹಾಬಲ ಹೆಗಡೆ, ನೆಬ್ಬೂರು ನಾರಾಯಣ ಭಾಗವತ, ಕೆ.ಎಂ.ಉಡುಪ ಮಂದಾರ್ತಿ, ಡಾ. ಡಿ.ಕೆ.ಚೌಡ, ಹೊಸ್ತೋಟ ಮಂಜುನಾಥ ಭಾಗವತರಿಗೆ ಸಮರ್ಪಿಸಿ ಸ್ಮರಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯ ಶಾಮಸುಂದರ ಭಾಗವತ, ಕೆ.ಜಿ.ಹೆಗಡೆ, ಶ್ರೀಧರ ಹೆಗಡೆ ಉಪಸ್ಥಿತರಿದ್ದರು.
More Stories
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕ ವತಿಯಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಭಟ್ಕಳವತಿಯಿಂದ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮೆರವಣಿಗೆ ಮೂಲಕ ಬಂದು ಸಹಾಯಕ ಆಯುಕ್ತರಿಗೆ ಮನವಿ.
ತುಳುನಾಡಿನ ಕಾರಣೀಕ ಮೆರೆದ ಕಲ್ಜಿಗ ಸಿನೇಮಾ, ಕಾಂತಾರದ ಬೆನ್ನಿಗೇ ಮತ್ತೊಂದು ಕಲಾತ್ಮಕ ಚಿತ್ರ ಕೊಟ್ಟ ಕರಾವಳಿ