April 20, 2024

Bhavana Tv

Its Your Channel

‘ಸಾನಿಧ್ಯಕ್ಕೆ ದೇವರೆ ಆಹ್ವಾನಿಸಿದರೆ ಸಾಧನೆ ಅತ್ಯಾವಶ್ಯಕ’- ರಾಘವೇಶ್ವರ ಭಾರತಿ ಶ್ರೀ’ ಸುಸಂಪನ್ನಗೊAಡ ಮಾರುಕೇರಿ ಕಿತ್ರೆಯ ದೇವಿಮನೆ ವರ್ಧಂತಿ ಮಹೋತ್ಸವ, ರಥೋತ್ಸವ’

ಭಟ್ಕಳ: ಮನುಷ್ಯನಾದ ಮೇಲೆ ಸಾಧನೆ ಮಾಡಿ ಸಾಧಿಸಬೇಕು ಜಡ ವಸ್ತುವಿನ ರೀತಿ ಬದುಕಬಾರದು. ದೈವಿ ಸಂಕಲ್ಪದ ಮುಂದೆ ಜಗತ್ತಿನಲ್ಲಿ ಯಾವುದು ಇಲ್ಲ ಎಂದು ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳು ಹೇಳಿದರು.
ಅವರು ಸೋಮವಾರದಂದು ಇಲ್ಲಿನ ಮಾರುಕೇರಿ ಕಿತ್ರೆಯ ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿ ದೇವಿ ದೇವಸ್ಥಾನದ ವರ್ಧಂತಿ ಮಹೋತ್ಸವ ಮತ್ತು ರಥೋತ್ಸವ ಕಾರ್ಯಕ್ರಮದ ಎರಡನೇ ದಿನದ ಧಾರ್ಮಿಕ ಸಭೆಯ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿ ಮಾತನಾಡುತ್ತಿದ್ದರು.
‘ವರ್ಷಕ್ಕೊಮ್ಮೆ ನಡೆಯುವ ವರ್ಧಂತಿ ಉತ್ಸವ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಳ್ಳುವುದರಿಂದ ನಮ್ಮಲ್ಲಿನ ಚೈತನ್ಯ ವೃದ್ದಿಯಾಗಲಿದೆ. ಶ್ರೀ ಕ್ಷೇತ್ರಕ್ಕೆ ಮೊದಲು ಭೇಟಿ ನೀಡಿದಾಗ ಇದ್ದ ವಾತಾವರಣಕ್ಕೂ ಈಗಿನ ವಾತಾವರಣಕ್ಕೂ ಭೂಮಿ ಆಕಾಶದಷ್ಟು ವ್ಯತ್ಯಾಸವಿದೆ. ಕ್ಷೇತ್ರವೂ ಉನ್ನತಿಯತ್ತ ಸಾಗುತ್ತಿದ್ದು, ಭಕ್ತರ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆಯಿದೆ. ಎಲ್ಲವೂ ದೈವಿ ಸಂಕಲ್ಪದAತೆಯೇ ನಡೆಯುತ್ತಿದ್ದು, ನಾವೆಲ್ಲರೂ ತೃಣವಷ್ಟೇ. ಕ್ಷೇತ್ರಕ್ಕೆ ಬರುವಂತಹ ರಸ್ತೆ ಕಾಮಗಾರಿಯೂ ನಿರ್ಮಾಣ ಹಂತದಲ್ಲಿ ಇದು ಕ್ಷೇತ್ರಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆಂಬ ಮೂನ್ಸೂಚನೆ ಹಾಗೂ ಕ್ಷೇತ್ರದ ಆವರಣದಲ್ಲಿ ಯಾತ್ರಿ ನಿವಾಸದ ಶಂಕು ಸ್ಥಾಪನೆಯೂ ಬಂದ ಭಕ್ತರು ಕ್ಷೇತ್ರದಲ್ಲಿ ಕೆಲ ದಿನ ತಂಗಿದ್ದು ದೈವಿಯ ಕೃಪೆಗೆ ಪಾತ್ರರಾಗಲಿ ಎಂಬ ಮೂನ್ಸೂಚನೆಯೇ ಸರಿ. ರಥೋತ್ಸವವೂ ಗರ್ಭಗುಡಿಗೆ ಬಾರಲು ಸಾಧ್ಯವಾದ ಭಕ್ತರನ್ನು ಕರುಣೆಯಿಂದ ಹರಸಲು ದೇವಿಯೇ ಬಂದ ದರ್ಶನ ನೀಡುತ್ತಾಳೆಂಬುದಾಗಿದೆ. ತನ್ನ ಸಾನಿಧ್ಯಕ್ಕೆ ದೇವಿಯೇ ಆಹ್ವಾನಿಸಿದರೆ ಅದರ ಬಳಿ ತೆರಳಲು ಸಾಧನೆ ಅವಶ್ಯಕ. ದೇವಿಯೆ ಭಕ್ತರನ್ನ ಹರಸಲು ಅವರ ಬಳಿ ಬಂದರೆ ಅದು ಕರುಣಾಮಯಿ ಎಂದ ಶ್ರೀಗಳು ವೇದಿಕೆಯಲ್ಲಿ ಇಬ್ಬರ ವಿಶೇಷ ಸಾಧಕರನ್ನು ಸನ್ಮಾನಿಸಿದ್ದು, ಒಂದು ಕೃಷಿಕರಿಗೆ ಇನ್ನೊಂದು ವಿಜ್ಞಾನಿಗಳಿಗಾಗಿದೆ. ಗೃಹದಲ್ಲಿಯೇ ಇದ್ದು ಅಥವಾ ಗೃಹವನ್ನು ಬಿಟ್ಟು ಹೊರಗಡೆ ಹೋದರು ಸಾಧನೆ ಮಾತ್ರ ಮನುಷ್ಯನಿಗೆ ಅವಶ್ಯಕ ಎಂದು ಹೇಳಿದರು.
ಧರ್ಮ ಸಭೆಗೂ ಮುನ್ನ ವರ್ಧಂತಿ ಮಹೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮವೂ ಶ್ರೀ ರಾಘವೇಶ್ವರ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಭಕ್ತರ ಜಯಘೋಷದೊಂದಿಗೆ ಅದ್ದೂರಿಯಾಗಿ ನಡೆಯಿತು.
ಶಕ್ತಿಸ್ಥಳದಲ್ಲಿ ಒಂದಾದ ಶ್ರೀ ಕ್ಷೇತ್ರ ದೇವಿ ಮನೆ ಕಿತ್ರೆಯಲ್ಲಿ ಭಾನುವಾರದಿಂದ ವರ್ಧಂತಿ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಸೋಮವಾರದ ಎರಡನೇ ದಿನದಂದು ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಗಣೇಶ ಪೂಜೆ, ಪುಣ್ಯಾಹ ಶ್ರೀದೇವರಿಗೆ ಕಲಾವೃದ್ದೀಯಾದಿಹವನ, ವೀರಭದ್ರದೇವರ ಪ್ರೀತ್ಯರ್ಥ ರುದ್ರಹವನ, ಶ್ರೀದೇವರಿಗೆ ಕಲಾಭೀಶೇಕ, ಬಲಿ ರಥಸಂಪ್ರೋಕ್ಷಣೆ ಕಾರ್ಯಕ್ರಮದ ಬಳಿಕ ಮಧ್ಯಾಹ್ನ ೧.೩೦ಕ್ಕೆ ದೇವಾಲಯದ ಪ್ರಾಂಗಣದಲ್ಲಿ ನೆರೆದ ಸಹಸ್ರಾರು ಭಕ್ತ ಸಮೂಹದೊಂದಿಗೆ ಶ್ರೀ ದೇವರ ರಥಾರೋಹಣ ಮತ್ತೂ ಮಹಾರಥೋತ್ಸವವು ಜರುಗಿತು. ಸುಂದರ ಚಿಕ್ಕ ರಥವನ್ನು ಅಲಂಕಾರ ಮಾಡಿ ಭಕ್ತರೆಲ್ಲರು ಸೇರಿ ದೇವಿಯ ಜಯಘೋಷದೊಂದಿಗೆ ರಥವನ್ನು ಭಕ್ತಿಯಿಂದ ಎಳೆಯಲಾಯಿತು.
ಇದಕ್ಕೂ ಪೂರ್ವದಲ್ಲಿ ಭವತಾರಿಣಿ ವಲಯದಿಂದ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಮಂತ್ರಾಕ್ಷತೆ ಸಹಿತ ಪ್ರಶಸ್ತಿ ಪತ್ರವನ್ನು ಸ್ವಾಮಿಗಳು ನೀಡಿದರು. ಹಾಗೂ ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲಿ ವಿವಿಧ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ನಂತರ ಸ್ವಾಮಿಗಳು ಬಂದAತಹ ಭಕ್ತರಿಗೆ ಅನುಗ್ರಹ ಮಂತ್ರಾಕ್ಷತೆಯನ್ನು ನೀಡಿ ಆರ್ಶೀವದಿಸಿದರು. ನಂತರ ದೇವಿಯ ತೀರ್ಥ ಪ್ರಸಾದ ವಿತರಣೆ ಹಾಗೂ ಬಂದAತಹ ಎಲ್ಲಾ ಭಕ್ತರಿಗೂ ಅನ್ನ ಸಂತರ್ಪಣೆ ಸೇವೆ ನಡೆಯಿತು.
ಈ ಸಂಧರ್ಭದಲ್ಲಿ ಶಾಸಕ ಸುನೀಲ ನಾಯ್ಕ, ಶ್ರೀ ಸಿಗಂದೂರು ಚೌಡೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶೇಷಗಿರಿ ಭಟ್ ದಂಪತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೇವಸ್ಥಾನ ಆಡಳಿತ ಕಮಿಟಿ ಅಧ್ಯಕ್ಷರು, ಪದಾದಿಕಾರಿಗಳು, ದೇವಸ್ಥಾನ ಮೋಕ್ತೇಸರ, ದೇವಸ್ಥಾನ ಆಡಳಿತ ಕಮಿಟಿ ಸದಸ್ಯರು, ಭವತಾರಿಣಿ ವಲಯ ಅಧ್ಯಕ್ಷರು, ವಲಯ ಪ್ರಮುಖರು ಸಹಸ್ರಾರು ಭಕ್ತರು ಇದ್ದರು.

error: