May 19, 2024

Bhavana Tv

Its Your Channel

ಶ್ರೀ ನೀಲಗೋಡೇಶ್ವರಿ ಸ್ವಯಂ ಸೇವಾ ಸಮಿತಿಯ ೬ ನೇ ವರ್ಷದ ವಾರ್ಷಿಕೋತ್ಸವ

ಹೊನ್ನಾವರ ತಾಲೂಕಿನ ಕೆಳಗಿನ ಇಡಗುಂಜಿ ಗ್ರಾಮದ ಮಾಳ್ಕೋಡಿನ ಶ್ರೀ ನೀಲಗೋಡೇಶ್ವರಿ ಸ್ವಯಂ ಸೇವಾ ಸಮಿತಿಯ ೬ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಸಾಮೂಹಿಕ ಸತ್ಯ ನಾರಾಯಣ ವೃತ ಹಾಗೂ ಗಣಹೋಮ ಯಕ್ಷಗಾನ ಮುಂತಾದ ಧಾರ್ಮಿಕ ಕಾರ್ಯಕ್ರಮ ಮಾಳ್ಕೋಡಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ನಡೆಯಿತು,

ಸಭಾ ಕಾರ್ಯಕ್ರಮದ ಪೂರ್ವದಲ್ಲಿ ನಗರಬಸ್ತಿಕೇರಿ ಸಿಮಾ ಮುಖ್ಯಪ್ರಾಣ ಪಲ್ಲಕ್ಕಿಯನ್ನು ಕರೆಯಿಸಿ ಆಂಜನೆಯನಿಗೆ ದಂಡಾವಳಿ ಪೂಜೆ ಸಲ್ಲಿಸಿದರು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಜಿನ್ನೋಡ ದೇವಸ್ಥಾನದ ದರ್ಮಧರ್ಶಿಗಳಾದ ಶ್ರೀನಾಥ ಪುಜಾರಿ ದೀಪ ಬೇಳಗಿಸುವುದರ ಮೂಲಕ ಚಾಲನೆ ನೀಡಿದರು ನಂತರ ಮಾತನಾಡಿ ೬ ವರ್ಷಗಳಿಂದ ಆಚರಣೆ ಮಾಡಿಕೋಳ್ಳುತ್ತಾ ಬಂದಿರುವುದು ತುಂಭಾ ಸಂತೋಷದ ವಿಷಯ ಎಲ್ಲರು ಸೇರಿ ದೇವತಾ ಕಾರ್ಯದಲ್ಲಿ ಪಾಲಗೋಂಡಾಗ ಮಾತ್ರ ಉರುಗಳು ಅಭಿವೃದ್ದಿ ಹೊಂದಲು ಸಾದ್ಯ. ಈ ಮಾಳಕೋಡ ಭಾಗ ಸಂಸ್ಕೃತಿ ತುಂಭಿಕೋAಡಿರುವ ಉರು ಎಲ್ಲರು ಒಟ್ಟಾಗಿ ಕಾರ್ಯವನ್ನು ಮಾಡಬೇಕು ಎಂದರು,

ಗೌರವ ಉಪಸ್ಥಿತಿ ವಹಿಸಿದ ಗೇರುಸೋಪ್ಪಾ ನಗರಬಸ್ತಿಕೇರಿ ಗೋವರ್ಧನಗಿರಿ ಸೀಮಾ ಮುಖ್ಯಪ್ರಾಣ ದೇವಸ್ಥಾನದ ಪ್ರಧಾನ ಅರ್ಚಕರು ಅರ್ಚಕರತ್ನ ಮತ್ತು ಆದರ್ಶ ಅರ್ಚಕ ಪ್ರಶಸ್ತಿ ಪುರಸ್ಕತರಾದ ಸುರಾಲೂ ಚಂದ್ರಶೇಖರ ಭಟ್ಟ ಮಾತನಾಡಿ ಜನರ ಮನೋಭಾವನೆ ದಾರ್ಮಿಕತೆಯಲ್ಲಿ ಹೆಚ್ಚಾಗಬೇಕು ಜಾತಿ-ದರ್ಮವನ್ನು ಬಿಡಬೇಕು ನಾವು ಭಾರತಿಯರು ನಾವು ಮನುಷ್ಯರು ಎನ್ನುವ ಬಾವನೆ ಮೂಡಬೇಕು ನಾವು ಸಂಪಾದನೆ ಮಾಡಿದು ನಾವು ಯ್ಯಾರು ತಗೆದುಕೋಂಡು ಹೋಗಲು ಸಾದ್ಯವಿಲ್ಲಾ ನಿಮ್ಮ ಜಿವನವನ್ನು ದಾರ್ಮಿಕ ಕಾರ್ಯಕ್ರಮಕ್ಕೆ ಮಿಸಲಿಡಿ ಎಂದರು,

ದಿವ್ಯ ಉಪಸ್ಥಿತಿವಹಿಸಿದ ಶ್ರೀ ಕ್ಷೇತ್ರ ನೀಲಗೋಡು ದೇವಸ್ಥಾನನದ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿ ಮಾತನಾಡಿ ಉರಿಗೆ ಒಳಿತಾಗ ಬೇಕಾದರೆ ದೇವರ ಪೂಜೆ ಪುನಸ್ಕಾರಗಳು ನಡೆಯಬೇಕು ಎಲ್ಲಿ ದರ್ಮಕಾರ್ಯಗಳು ನಡೆಯುತ್ತದೆಯೋ ಎಲ್ಲಿ ಯಾಗ ಯಜ್ಞಗಳು ನಡೆಯುತ್ತದೆಯೋ ಆ ಉರಿಗೆ ಸಮೃದ್ದಿ ಯಾಗುತ್ತದೆ ಎಂದರು,

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಮಂಕಾಳ ವೈದ್ಯ ಮಾತನಾಡಿ ಸಭೆಯಲ್ಲಿ ಇದ್ದ ಗಣ್ಯರು ಸಾಮಾನ್ಯ ಜನಕ್ಕೆ ಉರಿನ ನಾಗರಿಕರಿಗೆ ಬೇಕಾಗುವಂತ ಪ್ರಸ್ತುತ ವಿದ್ಯಮಾನಗಳಿಗೆ ಅನುಗುಣವಾಗಿ ಮಾತನಾಡಿದ್ದಾರೆ ದಯವಿಟ್ಟು ಎಲ್ಲರು ಅಳವಡಿಸಿಕೋಂಡು ಉರಿನ ಅಭಿವೃದ್ದಿಯ ಬಗ್ಗೆ ಸಂಘವನ್ನು ಮುನ್ನಡಿಕೋಂಡು ಹೋಗಬೇಕು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೋಡಿ ಯಾರು ಶಿಕ್ಷಣದಿಂದ ವಂಚಿತರಾಗಲು ಬಿಡಬೇಡಿ ಎಂದರು,

ಈ ಸಂದರ್ಭದಲ್ಲಿ ರಾಷ್ಟçಮಟ್ಟದ ಕ್ರೀಡಾಪಟ್ಟುಗಳಾದ ಶಿಕ್ಷಕ ಭಾಸ್ಕರ ನಾಯ್ಕ, ಯೋಗ ಪಟ್ಟು ಮಹೇಂದ್ರ ಗೌಡ, ಇವರನ್ನು ಸನ್ಮಾನಿಸಲಾಯಿತು,

ಸಭೇಯಲ್ಲಿ ಗೋಕರ್ಣ ಪಿ ಎಸ್ ಐ ನವೀನ್ ನಾಯ್ಕ ಮಾಳ್ಕೋಡ, ಪತ್ರಕರ್ತರಾದ ನಾಗರಾಜ ನಾಯ್ಕ ಮಾಳ್ಕೋಡ, ಶರಾವತಿ ಸಾವಯುವ ಕೃಷಿ ಪರಿವಾರ ಸಂಘದ ಅಧ್ಯಕ್ಷರಾದ ಸುಬ್ರಾಯ ಹೆಗಡೆ, ಉದ್ಯಮಿ ರಮೇಶ ಗೌಡ, ಶ್ರೀ ನೀಲಗೋಡೇಶ್ವರಿ ಸ್ವಯಂ ಸೇವಾ ಸಮಿತಿಯ ಅಧ್ಯಕ್ಷ ಹನುಮಂತ ಗೌಡ, ಇದ್ದರು,
ಬೆಳಿಗ್ಗೆ ಸತ್ಯನಾರಾಯಣ ಪೂಜೆ ಹಾಗೂ ಇತರೆ ಧಾರ್ಮಿಕ ಕಾಯ್ಕçಮಗಳು ನಡೆದವು.
ಸಭಾ ಕಾರ್ಯಕ್ರಮದ ನಂತರ ರಾಮ ಪ್ರಸಾದಿತ ಯಕ್ಷಗಾನ ಮಂಡಳಿ ಕುಮಟಾ ಇವರಿಂದ ಮಾರುತಿ ಪ್ರತಾಪ ಮತ್ತು ಲವ-ಕುಶ ಕಾಳಗ ಯಕ್ಷಗಾನ ನಡೆಯಿತು,

error: