ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಭೃಗು ಮಹರ್ಷಿಗಳ ತಪೋಭೂಮಿಯಾದ ಹೇಮಗಿರಿಯಲ್ಲಿ ಶ್ರೀ ಕಲ್ಯಾಣವೆಂಕಟರಮಣಸ್ವಾಮಿಯವರ ಬ್ರಹ್ಮರಥೋತ್ಸವದ ಪ್ರಯುಕ್ತ ವಡ್ಡರಹಳ್ಳಿ ಗ್ರಾಮದಲ್ಲಿ ಕುರುಕ್ಷೇತ್ರ ಎಂಬ ಸುಂದರ ಪೌರಾಣಿಕ ನಾಟಕ ಆಯೋಜನೆ ಮಾಡಲಾಗಿತ್ತು
ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸದಸ್ಯರಾದ ಹೆಚ್ ಟಿ ಮಂಜು ಉದ್ಘಾಟಿಸಿ ಮಾತನಾಡಿ ನಮ್ಮ ಸಂಸ್ಕೃತಿ ಇನ್ನು ಉಳಿದಿದೆ ಎಂದರೆ ಅದು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ. ಅದನ್ನು ಮುಂದುವರಿಸಿಕೊAಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ.ದೃಶ್ಯ ಮಾಧ್ಯಮಗಳಿಗಿಂತ ಮೊದಲು ಜನರು ಮನರಂಜನೆಗಾಗಿ ನಾಟಕ ನೋಡುವ ಹವ್ಯಾಸ ಇಟ್ಟುಕೊಂಡಿದ್ದರು. ಮಾಧ್ಯಮದ ಪ್ರಭಾವ ಹೆಚ್ಚಾಗಿ ಈಗ ನಾಟಕ ನೋಡುವವರು ಕಡಿಮೆಯಾಗಿದ್ದಾರೆ. ನಾಟಕಗಳನ್ನು ನೋಡುವುದರಿಂದ ರಂಗಭೂಮಿ ಕಲೆ ಉಳಿಯುತ್ತದೆ ಎಂದರು..
ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ ಎಲ್ ದೇವರಾಜು ಮಾತನಾಡಿ ಈಗಿನ ದಿನಗಳಲ್ಲಿ ಹೆಚ್ಚು ಧಾರವಾಹಿಗಳ ಮೇಲೆ ಇರುವ ಆಸಕ್ತಿ ನಮ್ಮ ಪುರಾಣ ಕಥೆಗಳಿಗಿಲ್ಲ.. ಕುರುಕ್ಷೇತ್ರ, ಮಹಾಬಾರತ, ರಾಮಾಯಣ ಇಂದಿನ ನೈಜ ಘಟನೆಗಳನ್ನು ನಾಟಕ ಮೂಲಕ ನಮಗೆ ತೋರುತ್ತಿರುವ ಕಲೆಗೆ ಗೌರವಿಸಬೇಕು ಎಂದರು..
ಜೆಡಿಎಸ್ ಯುವಕರಿಗೆ ಮರೆಯಲಾಗದ ವಜ್ರದಂತೆ ತನ್ನದೇ ಆದ ಅಭಿಮಾನಿಗಳ ಬಳಗ ಹೊಂದಿ ಸರ್ವ ವಯಸ್ಕರನ್ನು ಗೌರವಿಸುತ್ತಾ ತನ್ನದೇ ಸಮಾಜ ಸೇವೆಯಲ್ಲಿ ಛಾಪು ಮೂಡಿಸುತ್ತಿರುವ ಜೆಡಿಎಸ್ ಪಕ್ಷದ ಯುವ ಚೈತನ್ಯ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಶ್ರೀಯುತ ಬಿ ಎಂ ಕಿರಣ್ ರವರಿಗೆ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಮದಾಸ್. ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷರಾದ ಜಾನಕಿರಾಮ್. ಕೋರಮಂಡಲ ಸಕ್ಕರೆ ಕಾರ್ಖಾನೆ ಕೆನ್ ಮೆನೇಜರ್ ಬಾಬುರಾಜ್. ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶಾರದಮ್ಮ ಕೃಷ್ಣೇಗೌಡ್ರು, ವೀರಶೈವ ತಾಲೂಕು ಅಧ್ಯಕ್ಷರಾದ ಲಾಯರ್ ಧನಂಜಯ್, ಗ್ರಾಮ ಪಂಚಾಯತಿ ಸದಸ್ಯ ಮಹಾದೇವು ಸೇರಿಂದತೆ ಉಪಸ್ಥಿತರಿದ್ದರು…
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.