May 6, 2024

Bhavana Tv

Its Your Channel

ಭಟ್ಕಳ ತಾಲೂಕಿನೊಳಗೆ ಹೊರಗಿನಂದ ಯಾರು ಪ್ರವೇಶ ಮಾಡದಂತೆ ಜಿಲ್ಲಾಡಳಿತದ ಕಠಿಣ ಸೂಚನೆಯಂತೆ ಗಡಿ ಭದ್ರ

ಭಟ್ಕಳವೂ ಮೂರು ಬಾರಿ ಕೋರೋನಾದಿಂದ ತತ್ತರಿಸಿದ್ದು ಒಂದಲ್ಲೊoದು ಸಂಪರ್ಕದಿoದ ಹಾಟ್ ಸ್ಪಾಟ್ ಆಗಿ ರಾಜ್ಯದಲ್ಲಿಯೇ ಸುದ್ದಿಯಾಗಿದ್ದು ಈ ಬಾರಿಯ ಕೋರೋನಾ ಪ್ರಕರಣ ಏರಿಕೆಯ ಹಿನ್ನೆಲೆ ಜಿಲ್ಲಾಡಳಿತದ ಕಠಿಣ ಸೂಚನೆಯಂತೆ ಗಡಿ ಭದ್ರ ಮಾಡುವಂತೆ ತಾಲೂಕಿನೊಳಗೆ ಹೊರಗಿನ ಯಾರ ಪ್ರವೇಶ ಮಾಡದಂತೆ ಎಲ್ಲಾ ಕಟ್ಟುನಿಟ್ಟಿನ ಸೂಚನೆಯನ್ನು ಪಾಲಿಸುತ್ತಿದ್ದಾರೆ.

ತಾಲೂಕಿನಲ್ಲಿನ ಮೂರನೇ ಬಾರಿಯ ಕೋರೊನಾ ಸ್ಪೋಟದಿಂದ ಒಂದು ವಾರಕ್ಕೂ ಅಧಿಕ ಕಾಲ ಜನರು ಬೆಚ್ಚಿಬಿದ್ದಿದ್ದು ಜೂನ್ ೨೫ ರಂದು ನಡೆದ ಒಂದು ಮದುವೆ ಕಾರ್ಯಕ್ರಮವೂ ಭಟ್ಕಳದಲ್ಲಿ ಕೋರೊನಾ ಸಂಖ್ಯೆಯನ್ನೆ ಒಮ್ಮೆಲೆ ಏರಿಸಿತು. ಸೋಂಕಿತರ ಜೊತೆಗೆ ಸಾವುಗಳು ನಡೆದಿದ್ದು ಮದುಮಗನೂ ಸಹ ಮೃತನಾಗಿದ್ದು ಇನ್ನಷ್ಟು ಭಯಕ್ಕೆ ಕಾರಣವಾಯಿತು. ಬೆಂಗಳೂರು ಮೂಲದ ಮೃತ ಮದುಮಗನಲ್ಲಿನ ಸೋಂಕು ಭಟ್ಕಳಕ್ಕೆ ಹಬ್ಬಿದ್ದು ಅದು ವಿಪರೀತ ಸ್ಥಿತಿ ತಲುಪಿ ಒಂದು ವಾರದೊಳಗೆ ಭಟ್ಕಳ ಕೋರೋನಾ ಸೋಂಕಿತರನ್ನು ಇನ್ನೂರರ ಗಡಿ ದಾಟಿಸಿತು.

ಇದರಿಂದಾಗಿ ಆಡಳಿತದ ಮೇಲು ಪರಿಣಾಮಬಿದ್ದಿದ್ದು ಜುಲೈ ಸಂಪೂರ್ಣ ತಿಂಗಳು ಭಟ್ಕಳದ ಪಾಲಿಗೆ ಪ್ರಮುಖ ಘಟ್ಟವಾಗಿದ್ದು ಮತ್ತೆ ಹೊರಗಿನಿಂದ ಸೋಂಕು ಭಟ್ಕಳಕ್ಕೆ ಬಾರದಂತೆ ನೋಡಿಕೊಳ್ಳಬೇಕಾದ ಕೆಲಸ ತಾಲುಕಾಡಳಿತದ ಮೇಲಿದೆ.
ಜಿಲ್ಲಾಡಳಿತ ತಕ್ಷಣ ತಾಲುಕಿನ ಗಡಿಯನ್ನು ಇನ್ನಷ್ಟು ಬಿಗಿಗೊಳಿಸಿ ಬೇರೆ ಜಿಲ್ಲೆ, ರಾಜ್ಯ ಹಾಗೂ ವಿದೇಶದಿಂದ ಬಂದವರಿಗೆ ಕಡಿವಾಣ ಹಾಕಬೇಕೆಂಬ ಸೂಚನೆಯಂತೆ ಶುಕ್ರವಾರದಿಂದ ತಾಲೂಕಿನ ಶಿರಾಲಿ ಚೆಕ್ ಪೋಷ್ಟ ನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ ಹಾಕಲಾಗಿದ್ದು, ಈಗಾಗಲೇ ಪೊಲೀಸರನ್ನು ಗಡಿ ನೇಮಕಕ್ಕೆ ಹಾಕಿ ಎಲ್ಲಾ ಸಿದ್ದತೆಗಳನ್ನು ಕೈಗೆತ್ತಿಗೊಂಡಿದ್ದಾರೆ. ಬೇರೆ ರಾಜ್ಯ, ದೇಶಗಳಿಂದ ಬರುತ್ತಿದ್ದ ಜನರೊಂದಿಗೆನೇ ಕೋರೋನಾ ಬರುತ್ತಿದೆ ಎಂದೆನ್ನಿಸಿಕೊoಡಿದ್ದ ಆಡಳಿತಕ್ಕೆ ಬೆಂಗಳೂರು ನಂಜು ಹೊಸ ತಲೆ ನೋವು ಜೊತೆಗೆ ದುಬಾರಿಯಾಗಿದೆ. ಸದ್ಯ ಬೆಂಗಳೂರಿನಿAದ ಬಂದು ಯಾರಗಮನಕ್ಕೆ ಬಾರದೇ ಮನೆ ಸೇರಿಕೊಳ್ಳುವವರ ಬಗ್ಗೆ ಕಣ್ಣಿಡುವಂತೆ ಜಿಲ್ಲಾಡಳಿತ ಆದೇಶ ನೀಡಿದ್ದು ಇಂದಿನಿAದ ಭಟ್ಕಳ ಪಟ್ಟಣ, ಜಾಲಿ ಹಾಗೂ ಹೆಬಳೆ ಪಂಚಾಯತ ವ್ಯಾಪ್ರಿಯಲ್ಲಿ ಸೇರಿದಂತೆ ಮತ್ತು ಹೊರಗಿನಿಂದ ಸೋಂಕು ಒಳಗೆ ಬಾರದಂತೆ ಅಧಿಕಾರಿಗಳು ಪೋಲಿಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

ಶೈಲೇಶ್ ವೈದ್ಯ ಮುರ್ಡೇಶ್ವರ

error: