May 5, 2024

Bhavana Tv

Its Your Channel

ಹೊನ್ನಾವರದಲ್ಲಿ ಶತಕ ಬಾರಿಸಿದ ಕೋರೋನಾ ಒಂದೇ ದಿನ ೧೩ ಹೊಸ ಪ್ರಕರಣ ಪತ್ತೆ

ಹೊನ್ನಾವರ: ಕೋರೋನ ಆರ್ಭಟ ಪಟ್ಟಣಕ್ಕಷ್ಟೆ ಅಲ್ಲದೇ ಗ್ರಾಮೀಣ ಭಾಗದಲ್ಲಿಯೂ ಆರ್ಭಟಿಸುತ್ತಿದೆ. ಸೋಮವಾರ ಒಂದು ಪ್ರಕರಣವಿಲ್ಲದೇ ನಿರಾಳ ಹೊಂದಿದ್ದ ಹೊನ್ನಾವರಕ್ಕೆ ಮತ್ತೆ ಶಾಕ್ ಕೊಟ್ಟ ಕರೋನಾ ೧೩ ಜನರಲ್ಲಿ ಸೋಂಕು ಧೃಡವಾಗಿದೆ. ಪಟ್ಟಣದ ಪ್ರಭಾತನಗರದ ಗಾಂಧಿನಗರದ ೧೬ ವರ್ಷದ ಬಾಲಕಿ, ತಗ್ಗುಪಾಳ್ಯದ ೩೫ ವರ್ಷದ ಪುರುಷ, ಪ್ರಭಾತನಗರದ ೧೭ ಮತ್ತು ೧೪ ವರ್ಷದ ಬಾಲಕ, ೩೫ ವರ್ಷದ ಮಹಿಳೆ, ೩ ಮತ್ತು ೯ ವರ್ಷದ ಬಾಲಕಿ, ಹಳದೀಪುರದ ೬೭ ವರ್ಷದ ಪುರುಷ, ಮಂಕಿಯ ೩೦ ವ಼ರ್ಷದ ಪುರುಷ, ಕರ್ಕಿಯ ಶೇಡಿಕುಳಿ ೩೨ ವ಼ರ್ಷದ ಪುರುಷ, ಹಡಿನಬಾಳದ ಕಡಲಕೇರಿಯ ೬ ವರ್ಷದ ಬಾಲಕಿ, ಮೇಲಿನಕೇರಿ ಕಾನಕ್ಕಿ ೪೭ ವರ್ಷದ ಮಹಿಳೆ, ಹಡಿನಬಾಳದ ಕಡಲಕೇರಿ ೪೫ ವರ್ಷದ ಮಹಿಳೆಯಲ್ಲಿ ಸೋಂಕು ದೃಡಪಟ್ಟಿದೆ. ಈ ಮೂಲಕ ಹೊನ್ನಾವರದಲ್ಲಿ ಸೋಂಕಿತರ ಸಂಖ್ಯೆ ೧೦೩ಕ್ಕೆ ಏರಿಕೆಯಾಗಿದ್ದು, ೬೦ಕ್ಕೂ ಅಧಿಕ ಸಕ್ರೀಯ ಪ್ರಕರಣಗಳು ಇದ್ದು ಕೋವಿಡ್ ಕೆಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

error: