April 24, 2024

Bhavana Tv

Its Your Channel

ಬಿ.ಜಿ.ಸುಮಿತ್‌ಕುಮಾರ್‌ಗೆ ‘ಕರ್ನಾಟಕಗಾಯನರತ್ನರಾಜ್ಯ ಪ್ರಶಸ್ತಿ’

ಹೊನ್ನಾವರ ತಾಲೂಕಿನ ಹಡಿನಬಾಳದ ಯುವಗಾಯಕ ಬಿ.ಜಿ.ಸುಮಿತ್‌ಕುಮಾರ್ ವಿಶ್ವೇಶ್ವರಯ್ಯ ಎಂಜಿನಿಯರಿAಗ್ ಪ್ರತಿಷ್ಠಾನ ಕೊಡಮಾಡುವ ‘ಕರ್ನಾಟಕ ಗಾಯನರತ್ನ’ ರಾಜ್ಯ ಪ್ರಶಸ್ತಿಯನ್ನು ಸ್ವೀಕರಿಸಿದ್ದಾನೆ.

ಇತ್ತೀಚೆಗೆ ಬೆಂಗಳೂರಿನ ರವೀಂದ್ರಕಲಾಕ್ಷೇತ್ರದಲ್ಲಿ ನಡೆದಅಖಂಡಕರ್ನಾಟಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮೇಳದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಲೇಖಕಿ ಸುಧಾ ಭಂಡಾರಿ ಮತ್ತುಗಣೇಶ್ ಭಂಡಾರಿ ದಂಪತಿಗಳ ಪುತ್ರನಾಗಿರುವ ಸುಮಿತ್‌ಕುಮಾರ್‌ನಇದುವರೆಗಿನ ಸಂಗೀತ ಪಯಣದ ಯಶಸ್ವಿ ದಾಖಲೆಗಳನ್ನು ಗಮನಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅಲ್ಲದೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮೇಳದ ಪೂರ್ಣ ದಿನದಕಾರ್ಯಕ್ರಮದಲ್ಲಿ ಸುಮಿತ್ ‘ನಾದಮಯ ಈ ಲೋಕವೆಲ್ಲ’ ಸಂಗೀತಕಾರ್ಯಕ್ರಮ ನಡೆಸಿಕೊಟ್ಟಿದ್ದಾನೆ.

ಒಂದನೆತರಗತಿಯಿAದಲೇ ಹಿಂದೂಸ್ತಾನಿ ಸಂಗೀತಅಭ್ಯಾಸ ಆರಂಭಿಸಿ ಪ್ರಸ್ತುತ ಬೆಂಗಳೂರಿನಲ್ಲಿ ಪಂಡಿತ್ ಪರಮೇಶ್ವರ ಹೆಗಡೆಇವರ ಬಳಿ ವಿದ್ವತ್‌ಅಭ್ಯಾಸ ಮುಂದುವರಿಸಿದ್ದಾನೆ. ಬಾಲ ಕಲಾವಿದನಾಗಿಜಿಲ್ಲೆ- ರಾಜ್ಯ ಮಟ್ಟದಲ್ಲಿ ಹಲವು ಸ್ಪರ್ಧೆಗಳಲ್ಲಿ ವಿಜೇತನಾಗಿ ಟಿ.ವಿ ಷೋಗಳಲ್ಲಿ ಗುರುತಿಸಿಕೊಂಡಿದ್ದು, ಕನ್ನಡ ಮತ್ತು ಸಂಸ್ಕೃತಿಇಲಾಖೆಯಅಸಾಧಾರಣ ಪ್ರತಿಭಾವಂತ ನಗದು ಪುರಸ್ಕಾರ, ಸಂಗೀತಅಕಾಡೆಮಿಯ ವಿದ್ಯಾರ್ಥಿ ವೇತನಕ್ಕೂ ಭಾಜನರಾಗಿ ೨೦೧೬ ನೆ ಸಾಲಿನ ಕರಾವಳಿ ಉತ್ಸವದ ‘ವಾಯ್ಸ್ಆಫ್‌ಉತ್ತರಕನ್ನಡ’ ಎಂಬ ಬಿರುದು ಪಡೆದು ವಿಜೇತನಾಗಿದ್ದು, ೨೦೧೭ ರಲ್ಲಿರಾಷ್ಟ್ರೀಯ ಸಂಗೀತ ಮಿಲನ್ ಪ್ರತಿಭಾನ್ವೇಷಣೆಯಲ್ಲಿಕಂಚಿನ ಪದಕ ಗಳಿಸಿರುತ್ತಾನೆ.

ಇವನ ಇದುವರೆಗಿನ ಸಾಧನೆಗೆ ಸಂಗೀತಾಭಿಮಾನಿಗಳು ,ಅವನ ಗುರುಗಳು ಬಂಧುಗಳು ಅಭಿನಂದಿಸಿದ್ದಾರೆ.

error: