April 1, 2023

Bhavana Tv

Its Your Channel

ಕಾಡಿನಿಂದ ನಾಡಿಗೆ ಬಂದ ಚಿರತೆ ಸಾವು,

ಹೊನ್ನಾವರ ತಾಲೂಕಿನ ಹೆಬ್ಬಾನಕೇರಿ ಭಾಗದಲ್ಲಿ ಕಳೆದ ನಾಲ್ಕೆದು ದಿನದಿಂದ ಸಾರ್ವಜನಿಕರಲ್ಲಿ ಭಯ ಮೂಡಿಸಿದ್ದ ಚಿರತೆ ಕೊನೆಗೂ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಳೆದ ನಾಲ್ಕು ದಿನದ ಹಿಂದೆ ಗ್ರಾಮದ ವೆಂಕಟ್ರಮಣ ಹೆಗಡೆ ಎನ್ನುವತಾನ ಮೇಲೆ ಎರಗಿ ಗಂಭೀರ ಗಾಯಗೊಳಿಸಿದ ಚಿರತೆ ನಾಪತ್ತೆಯಾಗಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಈ ವಿಷಯ ಗಂಭೀರವಾಗಿ ಪರಿಗಣಿಸಿ ಸುತ್ತಮುತ್ತಲಿನ ಸ್ಥಳ ಪರಿಶೀಲನೆಯಲ್ಲಿ ತೊಡಗಿದ್ದರು. ಕಡ್ಲೆ ಅರಣ್ಯ ಪ್ರದೇಶದಲ್ಲಿ ಚಿರತೆಯ ಕಳೆಬರಹ ಪತ್ತೆಯಾಗಿದ್ದು ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಶು ವೈದ್ಯರ ಮೂಲಕ ಮರಣೊತ್ತರ ಪರಿಕ್ಷೆ ನಡೆಸಲಾಗಿದೆ. ವರದಿ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಈ ಸಂದರ್ಭದಲ್ಲಿ ಎಸಿಎಫ್ ಕೆ.ಟಿ ಬೋರಯ್ಯ, ಆರ್.ಎಫ್.ಓ ಶರತ ಶೆಟ್ಟಿ, ಡೆಪ್ಯುಟಿ ಫಾರೆಸ್ಟ ರಾಜು, ಇಲಾಕಾ ಅಧಿಕಾರಿಗಳಾದ ಅಲ್ಲಮುರುತುಜಾ ಬಾವಿಕಟ್ಟೆ, ಪ್ರಕಾಶ ಜೋಗಿ ಪರಿಶೀಲನೆ ನಡೆಸಿದರು.

About Post Author

error: