ಕಳೆದ ಹಲವು ದಿನದಿಂದ ತೀವ್ರ ಕೂತೂಹಲಕ್ಕೆ ಎಡೆಮಾಡಿಕೊಟ್ಟಿದ್ದ ಬಿಜೆಪಿ ತಾಲೂಕಧ್ಯಕ್ಷ ಸ್ಥಾನಕ್ಕೆ ತುರುಸಿನ ಪೈಪೋಟಿ ಮಧ್ಯೆ ೨೪ವರ್ಷಕ್ಕೂ ಅಧಿಕ ಸಮಯದಿಂದ ಬಿಜೆಪಿ ಪಕ್ಷ ಬಲವರ್ಧನೆಗೆ ಶ್ರಮಿಸಿದ ರಾಜೇಶ ದೇಶಭಂಡಾರಿಯವರನ್ನು ೩ ವರ್ಷದ ಅವಧಿಗೆ ರಾಜ್ಯ ಸಮಿತಿಯ ಸೂಚನೆಯ ಮೇರೆಗೆ ನೇಮಕ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯಕ ಆದೇಶ ಹೊರಡಿಸಿದ್ದಾರೆ. ೧೯೯೫ರಿಂದ ಬಿಜೆಪಿ ಸಕಕ್ರೀಯ ಕಾರ್ಯಕರ್ತರಾಗಿರುವ ಇವರು ಬೂತ್ ಅಧ್ಯಕ್ಷ, ನಗರ ಘಟಕದ ಆಧ್ಯಕ್ಷ ಕಳೆದ ಅವಧಿಯಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಬಲವರ್ಧನೆಗೆ ಶ್ರಮಿಸಿದ್ದರು. ಅಲ್ಲದೇ ಆರ.ಎಸ್.ಎಸ್ ನಗರ ವ್ಯವಸ್ಥಾಪಕರಾಗಿ, ವಿಶ್ವ ಹಿಂದೂಪರಿಷತ್ ಗಣೇಶೋತ್ಸವ ಸಮಿತಿ ೩ವರ್ಷದ ಅವಧಿಗೆ ಅಧ್ಯಕ್ಷರಾಗಿ, ಬಜರಂಗದಳ ಸಕ್ರೀಯ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸಿದ್ದರು. ಇದನ್ನು ಪರಿಗಣೆಸಿಯೇ ಪಕ್ಷ ಮಂಡಲ ಅಧ್ಯಕ್ಷ ಜವಬ್ಧಾರಿ ನೀಡಿದೆ ಈ ಬಗ್ಗೆ ಭಾವನ ವಾಹಿನಿ ಒಂದು ತಿಂಗಳ ಮೊದಲೇ ವಿಸ್ರೀತವಾದ ವರದಿಯನ್ನು ಪ್ರಕಟಿಸಿರುವುದು ಇಲ್ಲಿ ಸ್ಮರಿಸಬಹುದಾಗಿದೆ.
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.