
ಹೊನ್ನಾವರ ಪಟ್ಟಣದ ಪ್ರಭಾತನಗರದ ಡಾ. ಸಿ ಫನಾಂಡಿಸ್ ಕೋ ಆಫರೇಟಿವ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ಮಿನಿನ್ ಮೆಂಡಿಸ್ ಹಾಗೂ ಉಪಾಧ್ಯಕ್ಷರಾಗಿ ಕಾಮಿನ್ ಲೋಫಿಸ್ ಅವಿರೋಧವಾಗಿ ಆಯ್ಕೆಯಾದರು.
ಈ ಬಗ್ಗೆ ಅಧ್ಯಕ್ಷರಾಗಿ ಆಯ್ಕೆಯಾದ ಮಿನಿನ್ ಮೆಂಡಿಸ್ ಮಾತನಾಡಿ ೧೦೩ ವರ್ಷಗಳ ಕಾಲ ಹಲವು ರೀತಿಯಲ್ಲಿ ಬ್ಯಾಂಕ್ ನೆರವಾಗಿದ್ದು ಮುಂದಿನ ದಿನದಲ್ಲಿ ಎಲ್ಲರ ವಿಶ್ವಾಸದ ಮೇರೆಗೆ ಕಾರ್ಯನಿರ್ವಹಿಸುತ್ತೇನೆ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಉಪಾಧ್ಯಕ್ಷರಾದ ಕಾಮಿನ್ ಲೋಫಿಸ್ ಮಾತನಾಡಿ ಕಳೆದ ಅವದಿಯಲ್ಲಿ ಅಧ್ಯಕ್ಷನಾಗಿ ಕಾರ್ಯನಿರ್ವಹಿರುವ ಜೊತೆ ಈ ಬಾರಿ ಉಪಾಧ್ಯಕ್ಷರಾಗಿ ಬ್ಯಾಂಕಿನ ಕೀರ್ತಿಯನ್ನು ಉತ್ತುಂಗಕ್ಕೆ ಕೊಂಡ್ಯೂಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ನಿರ್ದೆಶಕರಾದ ಅಪಿಮಾನ ಫರ್ನಾಂಡಿಸ್, ಅಮಿತ್ ಗೊನ್ಸಾಲ್ವೇಸ್, ಆನಂದ ಗೊನ್ಸಾಲ್ವೇಸ್, ಬ್ರೇಜಿಲ್ ಪಿಂಟೋ, ಸಾವೇಲ್ ರೋಡ್ರಗೀಸ್, ಸಂತಾನ ಫರ್ನಾಂಡಿಸ್, ಹೆನ್ರಿ ಲೀಮಾ, ಗಣಪಿ ಮುಕ್ರಿ, ಅಣ್ಣಪ್ಪ ನಾಯ್ಕ, ಜೂಲಿಯಟ್ ಮಿರಾಂದಾ, ಸಂಪುಗೆ ಲೋಬೋ ಉಪಸ್ಥಿತರಿದ್ದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.