April 26, 2024

Bhavana Tv

Its Your Channel

ಸಮುದ್ರ ತೀರ ಪ್ರದೇಶದಲ್ಲಿ ಸರ್ಕಾರದ ಅನುದಾನದ ಮೂಲಕ ಹಸಿರು ಬೇಲಿ ನಿರ್ಮಾಣ – ಅನಂತ ಹೆಗಡೆ ಅಶೀಶರ

ಹೊನ್ನಾವರದ ಉಪರಣ್ಯ ಸಂರಕ್ಷಣಾಧಿ ಕಛೇರಿಯಲ್ಲಿ ಹಮ್ಮಿಕೊಳ್ಳಲಾದ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿ ಭಟ್ಕಳದಿಂದ ಕುಮುಟಾ ನದಿಕಣಜಗಳ ರಕ್ಷಣೆಗೆ ಮುಂದಾಗಬೇಕಿದೆ. ಈ ಭಾಗದಲ್ಲಿರುವ ಸಂಪತ್ತುಗಳು ಮುಂದಿನ ಪಿಳಿಗಿಗೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜನಾಂದೋಲನದ ಅಗತ್ಯವಿದೆ. ಈಗಾಗಲೇ ಹೊನ್ನಾವರ ವಲಯದ ಔಷಧಿ ಸಸ್ಯ ಸೇರಿದಂತೆ ಇಲ್ಲಿಯ ಅರಣ್ಯ ಸಂಪತ್ತಿನ ಬಗ್ಗೆ ಸರ್ವೆ ನಡೆಸಿ ವಿನಾಶದ ಅಂಚಿನಲ್ಲಿರುವ ಪ್ರಭೇಧಗಳ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ರವಾನಿಸಲಾಗಿದೆ. ಮುಂದಿನ ದಿನದಲ್ಲಿ ಈ ಭಾಗದ ಅರಣ್ಯ ಸಂಪತ್ತಿನ ಸ್ಪಷ್ಟ ಚಿತ್ರಣದ ಜೊತೆ ವಿವಿಧ ತಳಿ ಮರಗಳ ಮಾಹಿತಿ ದೊರಕುವ ಜೊತೆ ಇನ್ನಷ್ಟು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಲು ಇದು ಅನೂಕೂಲವಾಗಲಿದೆ. ೧೦ ವರ್ಷದ ಹಿಂದೆಯೇ ನದಿ ಸಂಪತ್ತು ಉಳಿಸಲು ವಿಶೇಷ ಯೋಜನೆ ಸಿದ್ದವಾಗಿದ್ದು ಸಮುದ್ರದ ತೀರದ ೩೦೦ಕೀಲೋಮೀಟರ್ ಸಮುದ್ರ ಕೊರೆತ ದಿಂದ ಹಾನಿಯಾಗುವುದನ್ನು ತಪ್ಪಿಸುವ ಜೊತೆ ಅರಣ್ಯ ಪ್ರದೇಶಕ್ಕೆ ಹಸಿರು ಬೇಲಿ ನಿರ್ಮಾಣ ಕಾರ್ಯ ಪ್ರಾರಂಭಿಸಲು ಅನೂಕೂಲವಾಗಲಿದೆ ಹಿಂದಿನ ಸರ್ಕಾರದ ಅವಧಿಯಲ್ಲಿ ಇದು ಕಾರ್ಯರೂಪದಲ್ಲಿ ವಿಳಂಭವಾಗಿದ್ದು ಈ ಬಾರಿ ಬಜೆಟ್‌ನಲ್ಲಿ ಇದಕ್ಕೆ ವಿಶೇಷ ಅನುದಾನ ಸಿಗಲಿದೆ. ಇಡೀ ಕರಾವಳಿಯಲ್ಲಿಯಲ್ಲಿ ಸೂಕ್ತ ಪರಿಸರ ಪ್ರದೇಶ ಎನಿಸಿರುವ ಅಪ್ಸರಕೊಂಡ ಹಾಗೂ ಇಕೋ ಬೀಷ್ ಅಭಿವೃದ್ದಿ ಜೊತೆ ಅರಣ್ಯ ಸಂಪತ್ತು ಉಳಿಸಲು ಕೇಂದ್ರ ಸರ್ಕಾರ ೮ ಕೋಟಿ ವೆಚ್ಚ ನೀಡಲು ಮುಂದಾಗಲಿದ್ದು ಇದರಿಂದ ಈ ಭಾಗದ ಅಭಿವೃದ್ದಿ ಸಾಧ್ಯವಾಗಲಿದೆ.
ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ. ಎ.ಸಿ.ಎಫ್ ಕೆ.ಟಿ. ಬೋರಯ್ಯ, ಆರ.ಎಫ್. ಓ ಶರತ ಶೆಟ್ಟಿ, ಡಾ. ಪ್ರಕಾಶ ಮೇಸ್ತ ಉಪಸ್ಥಿತರಿದ್ದರು

error: