December 4, 2024

Bhavana Tv

Its Your Channel

ಕೃಷ್ಣರಾಜಪೇಟೆ ತಾಲ್ಲೂಕು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಕಾಂಗ್ರೆಸ್ ಜೆಡಿಎಸ್ ಬೆಂಬಲಿತ ಮೈತ್ರಿಕೂಟದ ಅಭ್ಯರ್ಥಿಗಳು ಆಯ್ಕೆ.

ಕಾಂಗ್ರೆಸ್ ಮುಖಂಡ ಅಗಸರಹಳ್ಳಿ ಗೋವಿಂದರಾಜು ಅಧ್ಯಕ್ಷರಾಗಿ ಜೆಡಿಎಸ್ ಮುಖಂಡ ಬಣ್ಣೇನಹಳ್ಳಿ ಧನಂಜಯ ಉಪಾಧ್ಯಕ್ಷರಾಗಿ ತಲಾ 10 ಮತಗಳನ್ನು ಪಡೆದು ಆಯ್ಕೆಯಾದರು… ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಕಣದಲ್ಲಿದ್ದ ಕಾಂತರಾಜು ಮತ್ತು ಶೈಲಜಾ ತಲಾ 4 ಮತಗಳನ್ನು ಪಡೆದುಕೊಂಡು ಸೋಲೊಪ್ಪಿಕೊಂಡರು….

ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯು ಘೋಷಣೆಯಾಗುತ್ತಿದ್ದಂತೆ ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ ವಿಜಯೋತ್ಸವ ಆಚರಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು… ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎನ್.ಚಂದ್ರಮೌಳಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು….

ಪಿಎಲ್ ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಗಸರಹಳ್ಳಿ ಗೋವಿಂದರಾಜು ಮತ್ತು ಉಪಾಧ್ಯಕ್ಷರಾದ ಬಣ್ಣೇನಹಳ್ಳಿಧನಂಜಯ ಅವರನ್ನು ಮಾಜಿಶಾಸಕ ಕೆ.ಬಿ.ಚಂದ್ರಶೇಖರ್, ಜೆಡಿಎಸ್ ಹಿರಿಯ ಮುಖಂಡ ಹಾಗೂ ಜಿ.ಪಂ. ಸದಸ್ಯರಾದ ಬಿ.ಎಲ್.ದೇವರಾಜು, ಕೆಯುಐಡಿಎಫ್ ಸಿ ಮಾಜಿಅಧ್ಯಕ್ಷ ಮತ್ತಿಘಟ್ಟಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು, ಪುರಸಭೆಯ ಹಿರಿಯ ಗೌರವಿಸಿದರು…

error: