June 15, 2024

Bhavana Tv

Its Your Channel

ಕೆರೆಮನೆ ಶಂಭು ಹೆಗಡೆ ರಾಷ್ಟಿçÃಯ ನಾಟ್ಯೋತ್ಸವದ ಎರಡನೇ ದಿನ

ಕೆರೆಮನೆ ಶಂಭು ಹೆಗಡೆ ರಾಷ್ಟಿçÃಯ ನಾಟ್ಯೋತ್ಸವದ ಎರಡನೇ ದಿನದ ಸಭಾಕಾರ್ಯಕ್ರಮ ಶ್ರೀ ಅನಂತ ಹೆಗಡೆ ದಂತಳಿಕೆ ಇವರ ಭಾಗವತಿಕೆಗೆ ಕೆರೆಮನೆ ವಂಶದ ನಾಲ್ಕನೇ ತಲೆಮಾರಿನ ಕು. ಶಶಿಧರ ಹೆಗಡೆಯವರ ಮೃದಂಗ ನುಡಿಸುವುದರ ಮೂಲಕ ಶುಭಾರಂಭಗೊAಡಿತು.
ಜೀವ ವೈವಿಧ್ಯ ಮಂಡಳಿ, ಕರ್ನಾಟಕ ಸರ್ಕಾರ, ಬೆಂಗಳೂರು ಇದರ ಅಧ್ಯಕ್ಷರಾದ ಶ್ರೀ ಅನಂತ ಹೆಗಡೆ ಅಶೀಸರ ಅವರು ಉದ್ಘಾಟಿಸಿದರು.
ಶ್ರೀ ರಮಾನಂದ ಬನಾರಿ, ಶ್ರೀ ಎಂ. ಎನ್. ಹೆಗಡೆ, ಹಳವಳ್ಳಿ, ಡಾ. ಶ್ರೀಧರ ಭಂಡಾರಿ, ಪುತ್ತೂರು ಮತ್ತು ಶ್ರೀ ಮನ್ಮಥಕುಮಾರ್ ಸತ್ಪತಿ, ಓಡಿಶಾ ಇವರ ಕಲಾಸೇವೆಯನ್ನು ಸ್ಮರಿಸಿ ಕೆರೆಮನೆ ಶಂಭು ಹೆಗಡೆ ರಾಷ್ಟಿçÃಯ ನಾಟ್ಯೋತ್ಸವ ಸನ್ಮಾನವನ್ನು ನೀಡಿ ಗೌರವಿಸಲಾಯಿತು.
ಡಾ. ಶ್ರೀಧರ ಭಂಡಾರಿಯವರು ಸಮ್ಮಾನ ಸ್ವೀಕರಿಸಿ ಮಾತನಾಡುತ್ತ ತೆಂಕಿನ ಯಕ್ಷಗಾನ ವ್ಯಕ್ತಿಯಾದ ನಾನು ಬಡಗಿನ ಯಕ್ಷಗಾನ ಶೈಲಿಯನ್ನು ಕಲಿಸಿದ ಮತ್ತು ಪ್ರೋತ್ಸಾಹಿಸಿ ಬೆಳೆಸಿದ ವ್ಯಕ್ತಿ ನನ್ನ ಒಡನಾಟದ ಶ್ರೀ ಶಂಭು ಹೆಗಡೆಯವರು ಎಂದು ಸ್ಮರಿಸಿದರು.
ಡಾ. ರಮಾನಂದ ಬನಾರಿಯವರು ಅನಿಸಿಕೆ ವ್ಯಕ್ತಪಡಿಸುತ್ತಾ ದೇವರ ಸಾನಿಧ್ಯವನ್ನು ದೇವಸ್ಥಾನದಲ್ಲಿ ಕಾಣುವಂತೆ ಕಲಾದೇವಿಯ ಸಾನಿಧ್ಯವನ್ನು ಈ ಯಕ್ಷಾಂಗಣದಲ್ಲಿ ಕಾಣಬಹುದಾಗಿದೆ ಎಂದರು.
ಶ್ರೀ ಎಂ. ಎನ್. ಹೆಗಡೆ ಹಳವಳ್ಳಿ ಮತ್ತು ಶ್ರೀ ಮನ್ಮಥ್ ಕುಮಾರ್ ಸತ್ಪತಿ ಇವರು ಸನ್ಮಾನ ಸ್ವೀಕರಿಸಿ ಅನಿಸಿಕೆ ವ್ಯಕ್ತಪಡಿಸಿದರು.
ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಅನಿಸಿಕೆಯನ್ನು ಶ್ರೀ ಅನಂತ ಹೆಗಡೆ ಅಶೀಸರ ವ್ಯಕ್ತಪಡಿಸುತ್ತಾ ಸಮಾಜದ , ನಾಡಿನ, ದೇಶವಿದೇಶಗಳ ಬಹುತ್ವವನ್ನು, ವೈವಿಧ್ಯಮಯ ಕಲಾಪ್ರಕಾರಗಳನ್ನು ಒಂದೆಡೆ ತಂದು ಈ ಭಾಗದ ಕಲಾಪ್ರೇಕ್ಷಕರಿಗೆ ಪ್ರದರ್ಶಿಸುವ ಈ ಪ್ರಯತ್ನ ಅನನ್ಯ, ಅನುಕರಣೀಯ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನೀನಾಸಂನ ಶ್ರೀ ಕೆ.ವಿ. ಅಕ್ಷರರವರು ಮಾತನಾಡುತ್ತಾ ಮಾನಸಿಕ ಪರಿಸರ ಕೆಟ್ಟಲ್ಲಿ, ಸಾಂಸ್ಕöÈತಿಕ ಪರಿಸರ ಹಾಳಾಗುತ್ತ ತನ್ಮೂಲಕ ಭೌತಿಕ ಪರಿಸರ ಹಾಳಾಗುತ್ತದೆ. ಸಾಂಸ್ಕöÈತಿಕ ಪ್ರದೂಷಣಗಳನ್ನು ಕಡಿಮೆ ಮಾಡಲು ಈ ತರಹದ ಸಾಂಸ್ಕöÈತಿಕ ಕಾರ್ಯಗಳು ಮುಂದುವರಿಯಬೇಕು. ಸರಕಾರದ ನಿಯಂತ್ರಣದಲ್ಲಿರುವ ಮಾಧ್ಯಮಗಳು ಭಿತ್ತರಿಸುತ್ತಿರುವ ತಳಮಟ್ಟದ ಕಾರ್ಯಕ್ರಮಗಳಿಂದ ರಾಮಾಯಣ, ಮಹಾಭಾರತದ ಅಂಶಗಳು ಈ ತಲೆಮಾರಿನ ಮಕ್ಕಳಿಗೆ ಮರೀಚಿಕೆಯಾಗಿದೆ. ಶ್ರೀ ಎಂ. ಈ. ನಾಯ್ಕರು ಮಾತನಾಡುತ್ತಾ ಯಕ್ಷಗಾನ ಪರಂಪರೆ ಸಮಾಜವನ್ನೂ ಸಾಂಸ್ಕöÈತಿಕವಾಗಿ ಪ್ರಬುದ್ಧಗೊಳಿಸಲು ಸಹಕಾರಿಯಾಗಿದೆ ಎಂದರು. ಊರಿನ ಮುಖಂಡರಾದ ಶ್ರೀ ಶಂಭು ಗೌಡರು ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಜಿ. ಎಸ್. ಭಟ್ಟರು ಮಾತನಾಡುತ್ತಾ ಇಂಥಹ ರಾಷ್ಟಿçÃಯ ನಾಟ್ಯೋತ್ಸವಕ್ಕೆ ಸರ್ಕಾರ ಸಂಪೂರ್ಣ ಅನುದಾನ ನೀಡಬೇಕೆಂದು ಆಗ್ರಹಿಸಿದರು.
ಈ ಯಕ್ಷಾಂಗಣದಲ್ಲಿ ಪೂರ್ಣತೆ ಬರಬೇಕಾದರೆ, ಯಕ್ಷಗಾನ ಅಧ್ಯಯನ ಕೇಂದ್ರ ಸ್ಥಾಪನೆಯಾಗಬೇಕು ಎಂದರು. ರಾಜ್ಯೋತ್ಸವ ಪ್ರಶಸ್ತಿಯೂ ಯಕ್ಷಗಾನ ಕ್ಷೇತ್ರಕ್ಕೆ ಹೆಚ್ಚಿನ ಪಾಲು ಸಲ್ಲಬೇಕು ಎಂದರು. ಯಕ್ಷಗಾನ ವಿಶ್ಚಕೋಶದ ಅವಶ್ಯಕತೆ ಇದ್ದುದರಿಂದ ಸರ್ಕಾರ ಇದಕ್ಕೆ ಅನುದಾನ ನೀಡಬೇಕು.
ಕಾರ್ಯಾಧ್ಯಕ್ಷರಾದ ಶ್ರೀ ಲಕ್ಷಿ÷್ಮÃನಾರಾಯಣ ಕಾಶಿಯವರು ಸಭಾಸದರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗೈದರು. ಶ್ರೀ ಶಿವಾನಂದ ಹೆಗಡೆಯವರು ಸರ್ವರನ್ನೂ ವಂದಿಸಿದರು.

error: