December 6, 2024

Bhavana Tv

Its Your Channel

ಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ದೇವಿಮನೆಗೆ ಪಾದಯಾತ್ರೆ

ಭಟ್ಕಳ ತಾಲೂಕಿನ ಮಾರುಕೇರಿಯ ಹೂತ್ಕಳದ ಶ್ರೀ ಧನ್ವಂತರಿ ಮಹಾವಿಷ್ಣು ಗಣಪತಿ ದೇವಸ್ಥಾನದಿಂದ ಕಿತ್ರೆಯ ಶ್ರೀ ಕ್ಷೇತ್ರ ದೇವಿಮನೆಯ ಶಿವಶಾಂತಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಶಿವರಾತ್ರಿಯ ಅಂಗವಾಗಿ ಶುಕ್ರವಾರ ಬೆಳಗಿನಜಾವ ಸ್ಥಳೀಯರು ಲೋಕಕಲ್ಯಾಣಾರ್ಥವಾಗಿ ಪಾದಯಾತ್ರೆ ನಡೆಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಪಾದಯಾತ್ರೆ ಸಂದರ್ಭದಲ್ಲಿ ಎಲ್ಲರೂ ಓಂ ನಮ: ಶಿವಾಯ: ಪಠಿಸಿದರು. ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ಹೆಗಡೆ, ಕೃಷ್ಣ ಹೆಬ್ಬಾರ, ರಾಘವೇಂದ್ರ ಹೆಬ್ಬಾರ, ಸಾಹಿತಿ ಗೋವಿಂದ ಶೆಟ್ಟಿ, ಚಂದ್ರಶೇಖರ ಭಟ್ಟ, ಸೋಮಶೇಖರ ನಾಯ್ಕ, ಜೈರಾಮ ಶೆಟ್ಟಿ, ನಾಗೇಶ ಹೆಬ್ಬಾರ, ರವಿ ನಾಯ್ಕ, ಗುರುದತ್ತ ದೇವಾಡಿಗ, ನಾರಾಯಣ ಗೊಂಡ ಮುಂತಾದವರಿದ್ದರು. ಶಿವರಾತ್ರಿ ಪ್ರಯುಕ್ತ ಇನ್ನು ಪ್ರತಿ ವರ್ಷ ಧನ್ವಂತರಿ ದೇವಸ್ಥಾನದಿಂದ ಕಿತ್ರೆ ದೇವಿಮನೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘಟಕರು ತಿಳಿಸಿದರು.

error: