September 14, 2024

Bhavana Tv

Its Your Channel

ಮಾಳ್ಕೋಡದಲ್ಲಿ ಅಗ್ನಿಗೆ ಆಹುತಿಯಾದ ಮನೆ – ಅಪಾರ ಆಸ್ಥಿ ಪಾಸ್ತಿ ಹಾನಿ

ಹೊನ್ನಾವರ
ಕೆಳಗಿನ ಇಡಗುಂಜಿ ಗ್ರಾಮದ ಮಾಳ್ಕೋಡ ಮೋಟೆಕೇರಿಯ ಮನೆ ಶುಕ್ರವಾರ ಬೆಳಗಿನಜಾವ ೨ ಗಂಟೆ ಸುಮಾರಿಗೆ ಸಂಭವಿಸಿದ ಅಗ್ನಿ ದುರಂತದಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳಿಯರು ಬೆಂಕಿ ನಂದಿಸಲು ಸಾಕಷ್ಟು ಯತ್ನಿಸಿದರಾದರೂ ಮನೆಯಲ್ಲಿದ್ದವರ ಜೀವಕ್ಕೆ ತೊಂದರೆಯಾಗದAತೆ ಕಾಪಾಡಲು ಸಾಧ್ಯವಾಯಿತೇ ಹೊರತು ಬಟ್ಟೆ ಬರೆಗಳನ್ನು, ಪಾತ್ರೆ, ಆಹಾರ ಧಾನ್ಯ, ಒಡವೆ, ಹಣ ಮುಂತಾದವನ್ನು ಬೆಂಕಿಯ ಕೆನ್ನಾಲಿಗೆಯಿಂದ ರಕ್ಷಿಸಲು ಸಾಧ್ಯವಾಗಿಲ್ಲ.
ಸುತ್ತ ಗ್ರಾಮಗಳಲ್ಲಿ ಬಾವಂತಿ ಮನೆ ( ಮನೆಯ ಮದ್ಯೆ ಸೂರ್ಯನ ಬೆಳಕು ಮತ್ತು ಮಳೆಯ ನೀರು ಪ್ರವೇಶಿಸುವಂತಿರುವ) ಎಂದೇ ಹೆಸರಾಗಿದ್ದ ಊರ ಪ್ರಮುಖರ ಮನೆಯಾಗಿದೆ. ೨೦ ಕ್ಕೂ ಹೆಚ್ಚು ಕೋಣೆಗಳಿರುವ ಇಂದಿಗೂ ಹುಲ್ಲಿನ ಹೊಡದಿಕೆಯನ್ನು ಹೊಂದಿದ್ದ ಪುರಾತನ ಮನೆಯಲ್ಲಿ ಶ್ರೀಮತಿ ಕನ್ನೆ ಹನುಮಂತ ಗೌಡ, ಅಣ್ಣಯ್ಯ ಸಣಕೂಸ ಗೌಡ, ಮಂಜು ಸಣಕೂಸ ಗೌಡ, ಗಣಪಯ್ಯ ಸಾತ ಗೌಡ ಈ ನಾಲ್ಕುಮಂದಿಯ ಕುಟುಂಬದ ಸದಸ್ಯರು ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಎAಬತ್ತು ಲಕ್ಷ ರೂಪಾಯಿಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಶಾಸಕ ಸುನಿಲ್ ನಾಯ್ಕ, ಮಾಜಿ ಶಾಸಕ ಮಂಕಾಳ ವೈದ್ಯ, ಜಿಲ್ಲಾ ಪಂಚಾಯತ ಸದಸ್ಯೆ ಕುಮಾರಿ ಪುಷ್ಪಾ ನಾಯ್ಕ, ಎ.ಪಿ.ಎಮ್.ಸಿ ಅಧ್ಯಕ್ಷ ಗೋಪಾಲ ನಾಯ್ಕ, ಸಿ.ಪಿ.ಐ ವಸಂತ ಆಚಾರಿ, ಪಿ.ಎಲ್.ಡಿ.ಬ್ಯಾಂಕ ನಿರ್ದೇಶಕ ಕೃಷ್ಣ ಗೌಡ, ರಾಜು ನಾಯ್ಕ ಮಂಕಿ, ತಾಲೂಕಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ಜೆ.ಗೌಡ, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ ಮುಂತಾದವರು ಬೇಟಿಮಾಡಿ ಸಾಂತ್ವನ ಹೇಳಿ ದೈರ್ಯ ತುಂಬಿದ್ದಾರೆ.

error: