May 20, 2024

Bhavana Tv

Its Your Channel

ನಾಳೆಯಿಂದ ವಾರಗಳ ಕಾಲ ಕಿರಾಣಿ ಮಳಿಗೆಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲು ತೀರ್ಮಾನಿಸಿ ಹೊರಡಿಸಿದ್ದ ಪ್ರಕಟಣೆಯನ್ನು ಹಿಂತೆಗೆದುಕೊಳ್ಳಲಾಗಿದೆ.

ಕುಮಟಾ: ಪಟ್ಟಣದಲ್ಲಿ ಕಿರಾಣಿ ವ್ಯಾಪಾರಸ್ಥರ ಸಂಘ ನಾಳೆಯಿಂದ ವಾರಗಳ ಕಾಲ ಕಿರಾಣಿ ಮಳಿಗೆಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲು ತೀರ್ಮಾನಿಸಿ ಹೊರಡಿಸಿದ್ದ ಪ್ರಕಟಣೆಯನ್ನು ಹಿಂತೆಗೆದುಕೊಳ್ಳಲಾಗಿದೆ.

ಈ ಬಗ್ಗೆ ಸಂಘದ ಕಾರ್ಯದರ್ಶಿ ಹಾಗೂ ಇತರ ಪದಾಧಿಕಾರಿಗಳನ್ನು ಕರೆಯಿಸಿ ಸಭೆ ನಡೆಸಿದ ಉಪವಿಭಾಗಾಧಿಕಾರಿ ಅಜಿತ್ ಎಂ., ಅಂಗಡಿಗಳನ್ನು ಮುಚ್ಚದೆ, ವ್ಯಾಪಾರ ನಡೆಸುವಂತೆ ಅಂಗಡಿಕಾರರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಸಂಘದ ಅಧ್ಯಕ್ಷರಿಗೆ ಕೋವಿಡ್ ತಗುಲಿತ್ತು. ಪಟ್ಟಣದಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆಯೆಂದು ಮುಂಜಾಗ್ರತಾ ಕ್ರಮವಾಗಿ ಜನರ ಆರೋಗ್ಯದ ದೃಷ್ಟಿಯಿಂದ ಅಂಗಡಿಗಳನ್ನು ಮುಚ್ಚಲು ಸಂಘದ ಪದಾಧಿಕಾರಿಗಳು ನಿರ್ಧರಿಸಿ ಪ್ರಕಟಣೆ ನೀಡಿದ್ದರು. ಆದರೆ, ಇದು ಅವೈಜ್ಞಾನಿಕವಾಗಿದೆ‌. ಈ ರೀತಿ ವಾರಗಳ ಕಾಲ ಅಂಗಡಿಗಳನ್ನು ಮುಚ್ಚಿ, ಮತ್ತೆ ಎಂಟನೇ ದಿನದಿಂದ ಅಂಗಡಿಗಳನ್ನು ತೆರೆಯುವುದರಿಂದ ಯಾವುದೇ ಪರಿಣಾಮ ಆಗುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.

‘ಅಂಗಡಿಕಾರರು ಮಾಸ್ಕ್ ಹಾಗೂ ಗ್ಲೌಸ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸಬೇಕು. ಗ್ರಾಹಕರೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆಯೂ ತಿಳಿಹೇಳಬೇಕು ಹಾಗೂ ಮಾಸ್ಕ್ ಧರಿಸದವರಿಗೆ ಸಾಮಗ್ರಿಗಳನ್ನು ಕೊಡಬಾರದು. ಈ ಬಗ್ಗೆ ನಿಗಾ ಇಡಲು ಪುರಸಭೆಯವರಿಗೂ ಸೂಚನೆ ನೀಡುತ್ತೇನೆ’ ಎಂದು ಹೇಳಿದ್ದಾರೆ.

error: