ನಿಪ್ಪಾಣಿ ಮತಕ್ಷೇತ್ರದ ಭಿವಶಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆ ಹಾಗೂ ನಿಪ್ಪಾಣಿ- ಚಿಕ್ಕೋಡಿ ತಾಲೂಕಿನಿಂದ ಭಾರತೀಯ ಸೇನೆಗೆ ಆಯ್ಕೆಯಾದ 65 ಸೈನಿಕರಿಗೆ ಸತ್ಕಾರ ಕಾರ್ಯಕ್ರಮ ದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ,ಜಿ ಹಾಗೂ ಚಿಕ್ಕೋಡಿ ಲೋಕಸಭೆಯ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭಾಗವಹಿಸಿ, ಸೈನಿಕರಿಗೆ ಸನ್ಮಾನಿಸಿ , ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ನಮ್ಮ ದೇಶದ ನಿಜವಾದ ಹಿರೋಗಳು ರೈತರು ಮತ್ತು ಸೈನಿಕರು. ಇಂದಿನ ಯುವಕರು ಭಾರತಾಂಬೆಯ ಸೇವೆ ಮಾಡಲು ಸೈನ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿರುವುದು ಹೆಮ್ಮೆಯ ಸಂಗತಿ. ತಾಯಿ ಭಾರತಿ ಎಲ್ಲರನ್ನು ಕಾಪಾಡಲಿ, ದೇಶಕ್ಕೆ ನಿಮ್ಮ ಉತ್ತಮ ಸೇವೆ ದೊರಕಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ನಿಪ್ಪಾಣಿ ಗ್ರಾಮೀಣ ಅಧ್ಯಕ್ಷರಾದ ಶ್ರೀ ಪವನ ಪಾಟೀಲ, ನಗರ ಅಧ್ಯಕ್ಷರಾದ ಶ್ರೀ ಪ್ರಣವ ಮಾನವಿ,ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಸಿದ್ದು ನರಾಟೆ, ಶ್ರೀಮತಿ ಸುಮಿತ್ರಾ ಉಗಳೆ, ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಶ್ರೀ ಎಂ.ಪಿ. ಪಾಟೀಲ. ಶ್ರೀ ಸಮಿತ ಸಾಸನೆ, ಶ್ರೀ ಕಲ್ಲಪ್ಪ ನಾಯಿಕ, ಶ್ರೀ ಅವಿನಾಶ ಪಾಟೀಲ,ಶ್ರೀಮತಿ ಮನಿಷಾ ರಾಂಗೋಲೆ, ಶ್ರೀಮತಿ ಉಜ್ವಲಾ ಶಿಂಧೆ, ಶ್ರೀ ಸಂಜಯ ಶಿಂತ್ರೆ, ಶ್ರೀ ಜಯವಂತ ಭಾಟಲೆ, ಶ್ರೀ ಮಲಗೌಂಡ ಪಾಟೀಲ,ಶ್ರೀ ಕಿರಣ ನಿಕಾಡೆ ಹಾಗೂ ನಿಪ್ಪಾಣಿ ನಗರಸಭೆ ಸದಸ್ಯರು, ಗ್ರಾಮ ಪಂಚಾಯತ ಸದಸ್ಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
More Stories
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕ ವತಿಯಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಭಟ್ಕಳವತಿಯಿಂದ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮೆರವಣಿಗೆ ಮೂಲಕ ಬಂದು ಸಹಾಯಕ ಆಯುಕ್ತರಿಗೆ ಮನವಿ.
ತುಳುನಾಡಿನ ಕಾರಣೀಕ ಮೆರೆದ ಕಲ್ಜಿಗ ಸಿನೇಮಾ, ಕಾಂತಾರದ ಬೆನ್ನಿಗೇ ಮತ್ತೊಂದು ಕಲಾತ್ಮಕ ಚಿತ್ರ ಕೊಟ್ಟ ಕರಾವಳಿ