April 20, 2024

Bhavana Tv

Its Your Channel

ಡೆಗ್ಯೊಜ್ವರ ಕುರಿತು ಜಾಗೃತಿ ಮೂಡಿಸಿದ ಡಾ.ನೇತ್ರಾವತಿ

ಮಸ್ಕಿ : ತಾಲ್ಲೂಕಿನ ಸಮೀಪದ ಮೆದಿಕಿನಾಳ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾಕ್ಟರ್ ನೇತ್ರಾವತಿ ಯವರು ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕೆಲ ಗ್ರಾಮಗಳಲ್ಲಿ ಡೆಂಗ್ಯೂ ಪ್ರಕರಣ ಕಂಡುಬಂದ ರಿಂದ ಗ್ರಾಮದ ಜನರಿಗೆ ರೋಗದ ಬಗ್ಗೆ ಜಾಗೃತಿ ಮೂಡಿಸಿದರು.

ಇದೇ ವೇಳೆ ಜಾಗೃತಿ ಮೂಡಿಸಿ ಮಾತನಾಡಿದ, ಡಾಕ್ಟರ್ ನೇತ್ರಾವತಿ ಯವರು ಪೂರ್ತಿ ತೋಳಿರುವ ಉಡುಪು ಧರಿಸುವುದು ಸೂಕ್ತ.ಸೊಳ್ಳೆ ಪರದೆ, ಕಿಟಕಿಗಳಿಗೆ ಪರದೆ, ಸೊಳ್ಳೆ ಬತ್ತಿ ಇವುಗಳನ್ನು ಬಳಸುವುದು.

ಹಗಲು ಹೊತ್ತು ಮಾತ್ರ ಸೊಳ್ಳೆ ಕಚ್ಚುವುದರಿಂದ ಅದರಲ್ಲೂ ಸೂರ್ಯೋದಯ, ಸೂರ್ಯಾಸ್ತಮಾನ ದ ಸಮಯದಲ್ಲಿ , ನಾವುಗಳು ಈ ಸಮಯದಲ್ಲಿ ಹೆಚ್ಚು ಎಚ್ಚರ ವಹಿಸಬೇಕು.

ತೀರ್ವ ತಲೆನೋವು , ಕಣ್ಣು ನೋವು , ಕೀಲು ಮತ್ತು ಸ್ನಾಯು ನೋವು , ಹಸಿವು ಆಗದೆ ಇರುವುದು , ತುರಿಕೆ ಹಾಗೂ ತೀರ್ವ ಜ್ವರ , ಡೆಂಗ್ಯೂ ಜ್ವರದ ಲಕ್ಷಣಗಳು ಇವೆ , ರೋಗದ ಲಕ್ಷಣವನ್ನು ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ , ವೈದ್ಯರನ್ನು ಭೇಟಿ ಮಾಡಬೇಕು,

ರೋಗಕ್ಕೆ ತುತ್ತಾದವರು ವಿಶ್ರಾಂತಿ ಪಡೆಯಬೇಕು , ನೀರಿನ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ದ್ರವ ಪದಾರ್ಥಗಳನ್ನು ಸೇರಿಸಬೇಕು , ಸೊಳ್ಳೆಯು ಕಚ್ಚಿದಂತೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.

ಡೆಂಗ್ಯು ರೋಗದ ಕುರಿತಾದ ಜನರಿಗೆ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ . ಅಶೋಕ್ , ವಿಜಯಲಕ್ಷ್ಮಿ, ಆಶಾ ಕಾರ್ಯಕರ್ತರು , ಇನ್ನದರು ಪಾಲ್ಗೊಂಡರು.

error: