July 14, 2024

Bhavana Tv

Its Your Channel

ಪ್ರಗತಿಪರ ಹಾಗೂ ರೈತಸಂಘ ಬಸವೇಶ್ವರ ವೃತ್ತದಲ್ಲಿ ಯತ್ನಾಳ್ ಹೇಳಿಕೆ ಖಂಡಿಸಿ ಪ್ರತಿಭಟನೆ…

ಕೊಪ್ಪಳ: ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ರೈತಸಂಘಟನೆಗಳು ಜಿಲ್ಲೆಯ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ನಕಲಿ ಹೋರಾಟಗಾರ ಎಂಬ ಹೇಳಿಕೆ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವಹೇಳನಕಾರಿ ಹೇಳಿಕೆ, ವಿರೋಧಿಸಿ ಹಾಗೂ ಸಚಿವ ವಿ. ಸೋಮಣ್ಣ ಇವರಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಶಾಸಕತ್ವ ರದ್ದುಗೊಳಿಸಿ ಎಂದು ಕೊಪ್ಪಳದಲ್ಲಿ ಗುರುವಾರ ಎ,ಪಿ,ಎಂ,ಸಿ ಇಂದ ಬಸವೇಶ್ವರ ವೃತ್ತದ ವರೆಗೆ ಯತ್ನಾಳ್ ಅವರ ಭಾವಚಿತ್ರದ ಶವ ಮೆರವಣಿಗೆ ಮಾಡಿ ನಂತರ ಬೆಂಕಿ ಹಚ್ಚಿ ತಮ್ಮ ಆಕ್ರೋಶ ಹೊರಹಾಕಿದರು, ಪ್ರತಿಭಟನೆ ಮಾಡಿ, ಮಾನ್ಯ ಮುಖ್ಯಮಂತ್ರಿ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.

ಜಿಲ್ಲಾ ಅಧ್ಯಕ್ಷ ನಜೀರ್ ಸಾಬ್ ಮಾತನಾಡಿ, ರಾಜ್ಯಾದ್ಯಂತ ಜನರು ಹಸಿವು ಬಡತನ ನಿರುದ್ಯೋಗ ಸಮಸ್ಯೆಗಳಿಂದ ಜನರು ಒದ್ದಾಡುತ್ತಿದ್ದಾರೆ, ರೈತರಆತ್ಮಹತ್ಯಾ ಮುಂದುವರೆದಿದೆ .ಈ ಎಲ್ಲ ಸಮಸ್ಯೆಗಳನ್ನು ಮರೆಮಾಚಲು ಇಂತಹ ಇಂತಹ ಹೇಳಿಕೆ ಕೊಡುತ್ತಿದ್ದಾರೆ ಹಾಗೂ ಸಮಾಜದಲ್ಲಿ ಶಾಂತಿ ಕದಡುವ ಪ್ರಚೋದನೆ ಮಾತನ್ನಾಡುವ ಶಾಸಕ ಯತ್ನಾಳ್ ಅವರನ್ನು ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು.

ಇದೆ ಸಂದರ್ಭದಲ್ಲಿ ನಜೀರ್ ಅಮ್ಮದ್ ಮೂಲಿಮನಿ, ಹನುಮಂತಪ್ಪ, ಶ್ರೀಧರ್, ಡಿ.ಹೆಚ್.ಪೂಜಾರ್, ಆನಂದ್ ಬಂಡಾರಿ, ಬಸವರಾಜ್ ಶೀಲವಂತ, ಬಸವರಾಜ್ ನರೇಗಲ್, ಕಾಶಪ್ಪ ಚಲುವಾದಿ, ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. 

error: