May 3, 2024

Bhavana Tv

Its Your Channel

ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಪರ ಎಲ್ ಐ ದಿಂಡೂರ ಶಾಲೆಯಲ್ಲಿ ಭರ್ಜರಿ ಪ್ರಚಾರ

ರೋಣ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಪರ ಎಲ್ ಐ ದಿಂಡೂರ ಶಾಲೆಯಲ್ಲಿ ಭರ್ಜರಿ ಪ್ರಚಾರ ನಡೆಸಲಾಯಿತು

ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಮಾತನಾಡಿ ತಮ್ಮ ಬಾಲ್ಯದ ನೆನಪುಗಳನ್ನು ಶಿಕ್ಷಕರೊಂದಿಗೆ ಹಂಚಿಕೊAಡು ಮಾತನಾಡಿದ ಕಳೆದ 40 ವರ್ಷಗಳಿಂದ ನಿರಂತರವಾಗಿ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಯ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ತಿನ ಒಳಗೆ ಹೊರಗೆ ಹೋರಾಟ ಮಾಡುವ ಮೂಲಕ ಪರಿಹಾರ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದೇನೆ
ತಮ್ಮ ಶಿಕ್ಷಕರ ಕುಂದು ಕೊರತೆಗಳನ್ನು ಯಾವುದೇ ಸಮಯದಲ್ಲಿ ಬಂದರೂ ಯಾವುದೇ ಪಕ್ಷ ಭೇದ ಭಾವ ಇಲ್ಲದೆ ಕಳಂಕ ಇಲ್ಲದೆ ಮಾಡಿಕೊಡುವುದು ಎಂದು ಹೇಳಿದರು ಮತ್ತು ಹಳೆ ಪಿಂಚಣಿ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದರೆ ಪ್ರತಿಯೊಬ್ಬರಿಗೂ ಪಿಂಚಣಿ ಕೊಡಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಜ್ಯೋತಿ ಸಂಜೀವಿನಿ ಆರೋಗ ಯೋಜನೆ ಸರ್ಕಾರದಿಂದ ವಿಶೇಷ ಆರ್ಥಿಕ ಪ್ಯಾಕೇಜ್ ಹಾಗೂ ಎಲ್ಲರಿಗೂ ಪಿಂಚಣಿ ಕೊಡಿಸುವ ದಿಶೆಯಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಹೇಳಿದರು

ಕಳಕಪ್ಪ ಜಿ ಬಂಡಿ ಮಾತನಾಡಿ ಬಸವರಾಜ ಹೊರಟ್ಟಿಯವರು ಸೋಲಿಲ್ಲದ ಸರದಾರ ಎನಿಸಿರುವ
ಹೊರಟ್ಟಿ ಅವರು ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ಶಿಕ್ಷಕರ ಪರವಾಗಿ ಧ್ವನಿಯಾಗದೇ, ಸದಾ ಅವರ ಬೆನ್ನೆಲುಬಾಗಿ ಕೆಲಸ ಮಾಡಿದ್ದಾರೆ ಹೀಗಾಗಿ ಸತತವಾಗಿ ಜಯ ಗಳಿಸಿದ್ದಾರೆ. ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪನೆಗೆ ಮಾಡಿ ಇತಿಹಾಸದ ಪುಟ ಸೇರುವುದು ಎಂದರು.

ಲೋಕೋಪಯೋಗಿ ಇಲಾಖೆಯ ಸಚಿವರು ಸಿ ಸಿ ಪಾಟೀಲ ಮಾತನಾಡಿ ಕೇಂದ್ರ-ರಾಜ್ಯ ಸರ್ಕಾರಗಳು ಶಿಕ್ಷಕರ ಅಭ್ಯದಯಕ್ಕೆ ಶ್ರಮಿಸಿವೆ. ಅತಿಥಿ ಉಪನ್ಯಾಸಕರ ಸಮಸ್ಯೆಗಳ ನಿವಾರಣೆಗೂ ಸರ್ಕಾರ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ಬಸವರಾಜ ಹೊರಟ್ಟಿ ಅವರು ಶಿಕ್ಷಕರ ಹತ್ತು ಹಲವು ಸಮಸ್ಯೆಗಳ ಈಡೇರಿಕೆಗೆ ಪ್ರತಿಭಟನೆ, ಸತ್ಯಾಗ್ರಹ ಪಾದಯಾತ್ರೆಯಂತಹ ಹೋರಾಟ ನಡೆಸುವ ಮೂಲಕ ಅವರ ಪರವಾಗಿ ನಿಂತಿದ್ದಾರೆ. ಶಿಕ್ಷಕರು ಅಮೂಲ್ಯವಾದ ಮತ ನೀಡಿ ಹೊರಟ್ಟಿ ಅವರ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಅಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ, ರೋಣ ಮಂಡಲ ಅಧ್ಯಕ್ಷ ಮುತ್ತಣ್ಣ, ಕಡಗದ ಅಶೋಕ ನವಲಗುಂದ, ಶಿವಾನಂದ ಮಠದ,ಮಾಜಿ ಎಪಿಎಂಸಿ ಅಧ್ಯಕ್ಷ ರಾಜಣ್ಣ ಹೊಲಿ,ಬಸವರಾಜ ಕೊಟಗಿ, ಅನೀಲ ವೈದ್ಯ, ಅನಿಲ ಪಲ್ಲೇದ,ರವಿ ದಂಡಿನ ,ಮಲ್ಲು ಮಾದರ, ಸೇರಿದಂತೆ ಮತ್ತಿತರರು ಹಾಜರಿದ್ದರು.

ವರದಿ: ವೀರಣ್ಣ ಸಂಗಳದ

error: