September 16, 2024

Bhavana Tv

Its Your Channel

ಕೊರೋನಾ ವಿರುದ್ಧದ ದಿಟ್ಟ ಹೋರಾಟ: ಭಾರತಕ್ಕೆ 1 ಬಿಲಿಯನ್ ಡಾಲರ್ ತುರ್ತು ನೆರವು ನೀಡಲು ವಿಶ್ವಬ್ಯಾಂಕ್ ಒಪ್ಪಿಗೆ

ಮಹಾಮಾರಿ ಕೊರೋನಾ ವೈರಸ್ ಭಾರತದಲ್ಲಿ ರೌದ್ರನರ್ತನ ಪ್ರದರ್ಶಿಸುತ್ತಿದ್ದು, ಈವರೆಗೂ 53 ಮಂದಿಯನ್ನು ಬಲಿ ಪಡೆದುಕೊಂಡಿದೆ. ಅಲ್ಲದೆ, 2000 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ವಿರುದ್ಧ ದಿಟ್ಟ ಹೋರಾಟ ನಡೆಸುತ್ತಿರು ಭಾರತಕ್ಕೆ 1 ಬಿಲಿಯನ್ ಡಾಲರ್’ಗಳಷ್ಟು ತುರ್ತು ಆರ್ಥಿಕ ನೆರವು ನೀಡಲು ವಿಶ್ವಬ್ಯಾಂಕ್ ಗುರುವಾರ ಒಪ್ಪಿಗೆ ನೀಡಿದೆ.

ಕೊರೊನಾ ವೈರಾಣು ಸೋಂಕು ಜಗತ್ತಿನಾದ್ಯಂತ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಅನೇಕ ದೇಶಗಳಿಗೆ ನೆರವಾಗಲು ಮಂದಾಗಿದ್ದ ವಿಶ್ವಬ್ಯಾಂಕ್, 12 ಶತಕೋಟಿ ಡಾಲರ್ ವರೆಗೆ ನೆರವು ನೀಡುವುದಾಗಿ ಘೋಷಣೆ ಮಾಡಿತ್ತು.

ಇದರಂತೆ ಇದೀಗ ಭಾರತಕ್ಕೆ 1 ಬಿಲಿಯನ್ ಡಾಲರ್ ಗಳಷ್ಟು ತುರ್ತು ನೆರವು ನೀಡಲು ಇದೀಗ ಒಪ್ಪಿಗೆ ನೀಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಕೇವಲ ಭಾರತದವಷ್ಟೇ ಅಲ್ಲದೆ, ಕೊರೋನಾ ವಿರುದ್ಧ ಹೋರಾಡುತ್ತಿರುವ ಇತರೆ 40 ರಾಷ್ಟ್ರಗಳಿಗೂ ನೆರವು ನೀಡಲು ವಿಶ್ವಬ್ಯಂಕ್ ಮುಂದಾಗಿದೆ.

ಪಾಕಿಸ್ತಾನಕ್ಕೆ 200 ಮಿಲಿಯನ್, ಅಫ್ಘಾನಿಸ್ತಾನಕ್ಕೆ 100 ಮಿಲಿಯನ್, 7.3 ಮಿಲಿಯನ್ ಮಾಲ್ಡೀವ್ಸ್ ಹಾಗೂ ಶ್ರೀಲಂಕಾ ರಾಷ್ಟ್ರಕ್ಕೆ 128.6 ಮಿಲಿಯನ್ ಡಾಲರ್ ನೀಡಲು ಒಪ್ಪಿಗೆ ನೀಡದೆ ಎಂದು ತಿಳಿದುಬಂದಿದೆ.

ವಿಶ್ವಬ್ಯಾಂಕ್ ನೀಡಿರುವ ನೆರವಿನಿಂದ ಭಾರತದಲ್ಲಿ ಉತ್ತಮ ಸ್ಕ್ರೀನಿoಗ್ ವ್ಯವಸ್ಥೆ, ಸೋಂಕಿತರ ಹುಡುಕಲು, ಪ್ರಯೋಗಾಲಯಗಳ ಸಂಖ್ಯೆ ಹೆಚ್ಚಿಸಲು, ವೈದ್ಯಕೀಯ ಸಿಬ್ಬಂದಿಗಳಿಗೆ ಅಗತ್ಯ ಸೌಲಭ್ಯ, ಸಲಕರಣೆಗಳು ಒದಗಿಸಲು ಹಾಗೂ ಐಸೋಲೇಷನ್ ವಾರ್ಡ್ ಗಳನ್ನು ಸಂಖ್ಯೆ ಹೆಚ್ಚಿಸಲು ಸಹಾಯಕವಾಗಲಿದೆ

source : dailyhunt

error: