April 27, 2024

Bhavana Tv

Its Your Channel

ಆಧಾರ್ ಕಾರ್ಡ್ ಸೆಂಟರ್ ನಲ್ಲಿ ಅತಿ ಹೆಚ್ಚು ಹಣ ಸುಲಿಗೆ ; ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ

ಕೊಡಗು: ಕೊಡ್ಲಿಪೇಟೆ ಕಂದಾಯ ಇಲಾಖೆಯ ಕಚೇರಿಯಲ್ಲಿನ ಆಧಾರ್ ಕಾರ್ಡ್ ಸೆಂಟರ್ (ಖಾಸಗಿ ಆಧಾರ್ ಕಾರ್ಡ್ ಸೆಂಟರ್ ) ನಲ್ಲಿ ಅತಿ ಹೆಚ್ಚು ಹಣ ಸುಲಿಗೆ ಮಾಡುತ್ತಿದ್ದಾರೆ ಇದರ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ ಸಲ್ಲಿಸಿದ್ದರು.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಕಂದಾಯ ಇಲಾಖೆಯ ನಾಡ ಕಚೇರಿಯಲ್ಲಿರುವ ( ಖಾಸಗಿ ಯವರಿಗೆ ಸರಕಾರದ ಬಿಲ್ಡಿಂಗ್ ಕೊಟ್ಟು ಆಧಾರ ಸೇವೆ ನಡೆಸುತ್ತಿದ್ದಾರೆ) ಆಧಾರ್ ಸೆಂಟರ್ ನಲ್ಲಿ ಮಕ್ಕಳಿಗೆ ಉಚಿತವಾಗಿ ಆಧಾರ್ ಕಾರ್ಡ್ ತೆಗೆಯಲು ಸರಕಾರದ ಆದೇಶವಿದ್ದರೂ ಈ ನಾಡ ಕಚೇರಿ ಇರುವ ಖಾಸಗಿ ಆಧಾರ್ ಕಾರ್ಡ್ ಸೆಂಟರ್ ನಲ್ಲಿ ೧ಮಗುವಿಗೆ ೧೫೦ ರೂಪಾಯಿಗಳಷ್ಟು ಹಣ ತೆಗೆದುಕೊಳ್ಳುತ್ತಿದ್ದಾರೆ ಮತ್ತು ಆಧಾರ್ ಕಾರ್ಡ್ ಗೆ ಮೊಬೈಲ್ ಫೋನ್ ನಂ. ಹಾಕಿಸಿ ಕೊಳ್ಳಬೇಕಾದರೆ ಇದಕ್ಕೂ ಸಹ ೧೫೦ ರುಪಾಯಿಗಳನ್ನು ತೆಗೆದು ಕೊಳ್ಳುತ್ತಿದ್ದಾರೆ .
ಕೊಡ್ಲಿಪೇಟೆಯಲ್ಲಿರುವ ನಾಡ ಕಚೇರಿಯಲ್ಲಿರುವ ಈ ಆಧಾರ್ ಕಾರ್ಡ್ ಸೆಂಟರ್ ನ ಕಂಪ್ಯೂಟರ್ ನಲ್ಲಿ ಆಪರೇಟರ್ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕೊಡಗು ಜಿಲ್ಲಾಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ಕರವೇ ಕಾರ್ಯಕರ್ತರು ಖುದ್ದಾಗಿ ಹೋಗಿ ಆಧಾರ್ ಕಾರ್ಡ್ ಸೆಂಟರ್ ನಲ್ಲಿ ಅತಿ ಹೆಚ್ಚು ಹಣ ಪಡಿಸಿರುವ ಬಗ್ಗೆ ಖುದ್ದಾಗಿ ಹೋಗಿ ಮನವಿ ಸಲ್ಲಿಸಲಾಗುವುದು .

ಈ ಸಂದರ್ಭದಲ್ಲಿ ಕರವೇ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ ಹಾಗೂ ಕರವೇ ಶನಿವಾರಸಂತೆ ಹೋಬಳಿ ಘಟಕದ ಉಪಾಧ್ಯಕ್ಷರಾದ ರಫೀಕ್ ಹಾಗೂ ಇನ್ನಿತರ ಕರವೇ ಕಾರ್ಯಕರ್ತರು ಭಾಗವಹಿಸಿದರು.

error: