May 2, 2024

Bhavana Tv

Its Your Channel

ಜನವಾದಿ ಮಹಿಳಾ ಸಂಘಟನೆಯ ಮುಖಂಡರಾಗಿದ್ದ ಮಳವಳ್ಳಿ ಪಟ್ಟಣದ ಜಯಮ್ಮ(೫೩) ಕೋವಿಡ್‌ಗೆ ಬಲಿ

ಮಳವಳ್ಳಿ ; ಜನವಾದಿ ಮಹಿಳಾ ಸಂಘಟನೆಯ ಮಳವಳ್ಳಿ ಟೌನ್ ಘಟಕದ ಖಚಾಂಜಿಯಾಗಿದ್ದ ಜಯಮ್ಮ ಸಂಘಟನೆಯ ಎಲ್ಲಾ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಕಳೆದ ಒಂದು ವಾದದಿಂದ ಉಸಿರಾಟದ ತೊಂದರೆಯಿAದ ಬಳಲುತ್ತಿದ್ದ ಇವರನ್ನು ಮಂಡ್ಯದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳನ್ನು ಹೊಂದಿದ್ದ ಇವರ ಮೊದಲ ಮಗ ಅಪಘಾತದಲ್ಲಿ ಸಾವನ್ನಪ್ಪಿದ್ದರೆ ಮತ್ತೊಬ್ಬ ಮಗ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಪಟ್ಟಣದ ಸುಲ್ತಾನ್ ರಸ್ತೆಯಲ್ಲಿ ದುಷ್ಕರ್ಮಿ ಗಳಿಂದ ಹತ್ಯೆಗೀಡಾಗಿದ್ದನು.
ಇಬ್ಬರು ಮಕ್ಕಳನ್ನು ಕೆಲವೇ ದಿನಗಳ ಅಂತರದಲ್ಲಿ ಕಳೆದುಕೊಂಡ ಜಯಮ್ಮ ತೀವ್ರ ಅಪಘಾತಕ್ಕೆ ಒಳಗಾಗಿದ್ದರು.
ಈ ನಡುವೆ ಕಳೆದ ೪-೫ ದಿನಗಳ ಹಿಂದೆ ಕೋವಿಡ್ ಸೋಂಕಿಗೆ ಒಳಗಾಗಿ ತೀವ್ರ ಉಸಿರಾಟದ ತೊಂದರೆಯಿAದ ಬಳಲುತ್ತಿದ್ದ ಇವರನ್ನು ಮಂಡ್ಯ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದ ಸಂಘಟನೆಯ ರಾಜ್ಯಾಧ್ಯಕ್ಷೆ ದೇವಿ, ತಾಲ್ಲೂಕು ಅಧ್ಯಕ್ಷೆ ಸುಶೀಲಾ ಅವರುಗಳು ಜಯಮ್ಮ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಲು ಶ್ರಮಿಸಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಜಯಮ್ಮ ಸಾವನ್ನಪ್ಪಿದ್ದು ನೆನ್ನೆ ಪಟ್ಟಣದಲ್ಲಿ ಕೋವಿಡ್ ನಿಯಮಾವಳಿಯಂತೆ ಅಂತ್ಯಕ್ರಿಯೆ ನಡೆಸಲಾಯಿತು.
ಪ್ರಗತಿಪರ ಸಂಘಟನೆಗಳ ಮುಖಂಡರಾದ ದೇವಿ, ಸುಶೀಲಾ, ಜಿ ರಾಮಕೃಷ್ಣ, ತಿಮ್ಮೇಗೌಡ, ಆನಂದ್, ಲಿಂಗರಾಜಮೂರ್ತಿ, ಮತ್ತಿತರರು ಹಾಜರಿದ್ದು ಅಂತಿಮ ನಮನ ಸಲ್ಲಿಸಿದರು.
ವರದಿ ; ಮಲ್ಲಿಕಾರ್ಜುನ, ಮಳವಳ್ಳಿ, ಮಂಡ್ಯ

error: