June 22, 2021

Bhavana Tv

Its Your Channel

ಜಲಸೂರು ಬೆಂಗಳೂರು ರಾಜ್ಯ ಹೆದ್ದಾರಿಗೆ ಜಮೀನು ಭೂಸ್ವಾಧೀನ, ರೈತ ಮುಖಂಡ ಪುಟ್ಟರಾಜು ದಂಪತಿಗಳಿAದ ಅಹೋರಾತ್ರಿ ಧರಣಿ

ಕೆ.ಆರ್.ಪೇಟೆ ; ಭೂಮಿಯ ಪರಿಹಾರ ಹಣ ನೀಡದೇ ಕಾಮಗಾರಿ ಆರಂಭಿಸಿರುವ ಏಓಖಅಐ ಗುತ್ತಿಗೆದಾರ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ ಕೆಶಿಫ್ ಸಂಸ್ಥೆಯ ವಿರುದ್ಧ ರೈತ ಮುಖಂಡ ಕೃಷ್ಣರಾಜಪೇಟೆ ತಾಲ್ಲೂಕಿನ ಮಾಚಹೊಳಲು ಗ್ರಾಮದ ಪುಟ್ಟರಾಜು ಆಕ್ರೋಶಗೊಂಡಿದ್ದಾರೆ,

ರಾಜ್ಯ ಹೆದ್ದಾರಿಯ ನಿರ್ಮಾಣಕ್ಕೆ ವಶಪಡಿಸಿಕೊಂಡಿರುವ ತನ್ನ ೧೪.೫ ಗುಂಟೆ ಜಮೀನಿಗೆ ಪರಿಹಾರ ನೀಡಿ ಕೆಲಸ ನಡೆಸುವಂತೆ ರಸ್ತೆ ಕಾಮಗಾರಿಯ ಸ್ಥಳದಲ್ಲಿ ಪುಟ್ಟರಾಜು ದಂಪತಿಗಳು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಧರಣಿ ನಡೆಸುತ್ತಿರುವ ಸ್ಥಳಕ್ಕೆ ಪಾಂಡವಪುರ ಉಪವಿಭಾಗಾಧಿಕಾರಿಗಳು ಭೇಟಿ ನೀಡಿ ಪರಿಹಾರ ಧನ ನೀಡುವ ಬಗ್ಗೆ ಭರವಸೆ ನೀಡುವವರೆಗೂ ಧರಣಿ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಮಾಚಹೊಳಲು ಗ್ರಾಮದ ಸರ್ವೇ ನಂ ೬ರ ಭಾಬ್ತು ತಮ್ಮ ಜೀವನಾಧಾರವಾದ ಒಂದೂವರೆ ಎಕರೆ ಕೃಷಿ ಭೂಮಿಯಲ್ಲಿ ೧೪.೫ ಗುಂಟೆ ಜಮೀನು ರಸ್ತೆಗೆ ಹೋಗಿದೆ. ಕೆಶಿಫ್ ತನ್ನ ಜಮೀನಿಗೆ ಸೂಕ್ತ ಪರಿಹಾರವನ್ನು ನೀಡದೇ ಕಾಮಗಾರಿ ಆರಂಭಿಸಿದೆ. ಪಾಂಡವಪುರ ಉಪವಿಭಾಗಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಗೆ ಕಾನೂನು ಬದ್ಧವಾಗಿ ನೀಡಬೇಕಾದ ಪರಿಹಾರವನ್ನು ನೀಡಿ ಕಾಮಗಾರಿ ನಡೆಸಬೇಕು, ಅಲ್ಲಿಯವರೆಗೂ ತನ್ನ ಹೋರಾಟ ಹಾಗೂ ಧರಣಿ ಸತ್ಯಾಗ್ರಹ ನಿರಂತರವಾಗಿ ನಡೆಯಲಿದೆ ಎಂದು ಪುಟ್ಟರಾಜು ಹೇಳಿದರು..

ವರದಿ.ಡಾ.ಕೆ.ಆರ್.ನೀಲಕಂಠ. ಕೃಷ್ಣರಾಜಪೇಟೆ . ಮಂಡ್ಯ

error: